ವಿಜಯ್ ಹಝಾರೆ ಟ್ರೋಫಿ:ತಮಿಳುನಾಡು, ಬರೋಡಾ ಸೆಮಿಫೈನಲ್‌ಗೆ
ಕರ್ನಾಟಕ, ಗುಜರಾತ್ ಹೊರಕ್ಕೆ

ಹೊಸದಿಲ್ಲಿ, ಮಾ.12:ವಿಜಯ್‌ಹಝಾರೆ ಟ್ರೋಫಿ ಟೂರ್ನಮೆಂಟ್‌ನಲ್ಲಿ ರವಿವಾರ ತಮಿಳುನಾಡು ಮತ್ತು ಬರೋಡಾ ತಂಡಗಳು ಸೆಮಿಫೈನಲ್ ಪ್ರವೇಶಿಸಿದೆ.
ಇಲ್ಲಿನ ಫಿರೋಝ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದ ಬರೋಡಾ ಸೆಮಿಫೈನಲ್ ತಲುಪಿದೆ.
ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಗುಜರಾತ್ ವಿರುದ್ಧ 5 ವಿಕೆಟ್‌ಗಳ ಜಯ ಗಳಿಸಿದ ತಮಿಳುನಾಡು ಸೆಮಿಫೈನಲ್‌ನಲ್ಲಿ ಅವಕಾಶ ದೃಢಪಡಿಸಿತು.
234 ರನ್‌ಗಳ ಗೆಲುವಿನ ಸವಾಲು: ಗೆಲುವಿಗೆ 234 ರನ್‌ಗಳ ಸವಾಲನ್ನು ಪಡೆದ ಬರೋಡಾ ತಂಡ ಇನ್ನೂ 25 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು.
ಕೃನಾಲ್ ಪಾಂಡ್ಯರ ಆಲ್‌ರೌಂಡರ್ ಪ್ರದರ್ಶನ ಬರೋಡಾಕ್ಕೆ ಸೆಮಿಫೈನಲ್ ಹಾದಿ ಸುಗಮಗೊಳಿಸಿತು. 32ಕ್ಕೆ 3 ವಿಕೆಟ್ ಉಡಾಯಿಸುವ ಮೂಲಕ ಕರ್ನಾಟಕದ ಬ್ಯಾಟಿಂಗನ್ನು 48.5 ಓವರ್‌ಗಳಲ್ಲಿ 233 ರನ್‌ಗಳಿಗೆ ನಿಯಂತ್ರಿಸುವಲ್ಲಿ ನೆರವಾದ ಪಾಂಡ್ಯ ಬ್ಯಾಟಿಂಗ್‌ನಲ್ಲೂ ಮಿಂಚಿದರು. ಆಕರ್ಷಕ 70 ರನ್(79ಎ, 5ಬೌ,1ಸಿ) ಕೊಡುಗೆ ನೀಡಿದರು.ಕೇದಾರ್ ದೇವಧರ್ ಅವರು ಪಾಂಡ್ಯ ಬ್ಯಾಟಿಂಗ್‌ಗೆ ಸಾಥ್ ನೀಡಿ ತಂಡದ ಖಾತೆಗೆ 78 ರನ್(98ಎ, 6ಬೌ,2ಸಿ) ಸೇರಿಸಿದರು.
ಬರೋಡಾದ ಆರಂಭಿಕ ದಾಂಡಿಗರಾದ ದೇವಧರ್ ಮತ್ತು ವಾಘ್ಮೋಡೆ ಮೊದಲ ವಿಕೆಟ್‌ಗೆ 14.3 ಓವರ್‌ಗಳಲ್ಲಿ 64 ರನ್ ಸೇರಿಸಿ ಉತ್ತಮ ಅಡಿಪಾಯ ಹಾಕಿದರು. ಕರ್ನಾಟಕದ ಶ್ರೀನಾಥ್ ಅರವಿಂದ್ ಅವರು ವಾಘ್ಮೋಡೆಗೆ ಪೆವಿಲಿಯನ್ ಹಾದಿ ತೋರಿಸುವ ಮೂಲಕ ಈ ಜೋಡಿಯನ್ನು ಬೇರ್ಪಡಿಸಿದರು.
ವಾಘ್ಮೋಡೆ 26 ರನ್ ಗಳಿಸಿದರು. ಎರಡನೆ ವಿಕೆಟ್‌ಗೆ ದೇವಧರ್ ಮತ್ತು ಪಾಂಡ್ಯ ಜೊತೆಯಾಗಿ ಕರ್ನಾಟಕದ ಬೌಲರ್‌ಗಳನ್ನು ದಂಡಿಸಿದರು. 92 ರನ್‌ಗಳ ಜೊತೆಯಾಟ ನೀಡಿ ಬರೋಡವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಿದರು.
ಸುಚಿತ್ ಬೌಲಿಂಗ್‌ನಲ್ಲಿ ದೇವಧರ್ ಬೌಲ್ಡ್ ಆಗಿ ಪೆವಿಲಿಯನ್ ಸೇರುವ ಮುನ್ನ ಟೂರ್ನಿಯಲ್ಲಿ ಮೂರನೆ ಅರ್ಧಶತಕ ದಾಖಲಿಸಿದರು. ದೇವಧರ್ ನಿರ್ಗಮನದ ಬಳಿಕ ದೀಪಕ್ ಹೂಡಾ ಅವರು ಪಾಂಡ್ಯಗೆ ಜೊತೆಯಾದರು. 40.5 ಓವರ್‌ಗಳಲ್ಲಿ ಬರೋಡಾದ ಸ್ಕೋರ್ 203ಕ್ಕೆ ತಲುಪುವಾಗ ಅರವಿಂದ್ ಎಸೆತದಲ್ಲಿ ಪಾಂಡ್ಯರು ಉತ್ತಪ್ಪರಿಗೆ ಕ್ಯಾಚ್ ನೀಡಿದರು.
ಕೊನೆಯಲ್ಲಿ ಯೂಸುಫ್ ಪಠಾಣ್(ಔಟಾಗದೆ 10) ಮತ್ತು ದೀಪಕ್ ಹೂಡಾ (ಔಟಾಗದೆ 34) ಮುರಿಯದ ಜೊತೆಯಾಟದಲ್ಲಿ 31 ರನ್‌ಗಳ ಜೊತೆಯಾಟದೊಂದಿಗೆ ಬರೋಡಾವನ್ನು ಗೆಲುವಿನ ದಡ ಸೇರಿಸಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಕರ್ನಾಟಕ 204 ನಿಮಿಷಗಳ ಬ್ಯಾಟಿಂಗ್‌ನಲ್ಲಿ 48.5 ಓವರ್‌ಗಳಲ್ಲಿ 233 ರನ್‌ಗಳಿಗೆ ಆಲೌಟಾಗಿತ್ತು.
ಕರ್ನಾಟಕದ ಪರ ಮಯಾಂಕ್ ಅಗರವಾಲ್ ಮತ್ತು ರಾಬಿನ್ ಉತ್ತಪ್ಪ 11.5 ಓವರ್‌ಗಳಲ್ಲಿ 64 ರನ್ ಸೇರಿಸಿದರು. ಆದರೆ ಉತ್ತಪ್ಪ 24 ರನ್ ಗಳಿಸಿ ಮೆರಿವಾಲಾ ಗೆ ರಿಟರ್ನ್ ಕ್ಯಾಚ್ ನೀಡಿ ನಿರ್ಗಮಿಸಿದ ಬೆನ್ನಲ್ಲೇ ಕರ್ನಾಟಕ ಇನ್ನರೆಡು ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು. ಅಗರವಾಲ್(40) ಮತ್ತು ನಾಯಕ ಮನೀಷ್ ಪಾಂಡೆ(10) ಔಟಾದರು. 17.1 ಓವರ್‌ಗಳಲ್ಲಿ ಕರ್ನಾಟಕ 83 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತು.
ರವಿಕುಮಾರ್ ಸಮರ್ಥ್ ಮತ್ತು ಪವನ್ ದೇಶಪಾಂಡೆ ಜೊತೆಯಾಗಿ ಕರ್ನಾಟಕವನ್ನು ಆಧರಿಸಿದರು 4ನೆ ವಿಕೆಟ್‌ಗೆ 87 ರನ್‌ಗಳ ಜೊತೆಯಾಟ ನೀಡಿದರು. ಸಮರ್ಥ್(44) ಮತ್ತು ದೇಶಪಾಂಡೆ(54) ಔಟಾದ ಬೆನ್ನಲ್ಲೇ ಮತ್ತೆ ಕರ್ನಾಟಕ ಒತ್ತಡಕ್ಕೆ ಸಿಲುಕಿತು.18 ರನ್‌ಗಳಿಗೆ ಮತ್ತೆ ಮೂರು ವಿಕೆಟ್‌ಗಳನ್ನು ಕೈ ಚೆಲ್ಲಿತು. 40.1ನೆ ಓವರ್‌ಗಳಲ್ಲಿ ಸ್ಕೋರ್ 188 ತಲುಪುವಾಗ 6 ವಿಕೆಟ್ ಕಳೆದುಕೊಂಡಿತು.
ಅನಿರುದ್ಧ ಜೋಶಿ (18), ಸುಚಿತ್(18) ವಿನಯ್ ಕುಮಾರ್(10) ಪ್ರಯತ್ನ ನಡೆಸಿದರೂ ತಂಡಕ್ಕೆ 50 ಓವರ್‌ಗಳನ್ನು ಪೂರ್ಣವಾಗಿ ಎದುರಿಸಲು ಸಾಧ್ಯವಾಗಲಿಲ್ಲ.
ಸಂಕ್ಷಿಪ್ತ ಸ್ಕೋರ್ ವಿವರ
ಕರ್ನಾಟಕ 48.5 ಓವರ್‌ಗಳಲ್ಲಿ ಆಲೌಟ್ 233( ದೇಶಪಾಂಡೆ 54, ಸಮರ್ಥ 44; ಪಾಂಡ್ಯ 32ಕ್ಕೆ 3). ಬರೋಡ 45.5 ಓವರ್‌ಗಳಲ್ಲಿ 234/3( ದೇವಧರ್ 78, ಪಾಂಡ್ಯ 70, ಹೂಡಾ ಔಟಾಗದೆ 34; ಅರವಿಂದ್ 42ಕ್ಕೆ 2).
ಚಾಂಪಿಯನ್ ಗುಜರಾತ್‌ಗೆ ಸೋಲು
ಹಾಲಿ ಚಾಂಪಿಯನ್ ಗುಜರಾತ್ ವಿಜಯ್ ಹಝಾರೆ ಟ್ರೋಫಿ ಕ್ವಾರ್ಟರ್ ಫೈನಲ್‌ನಲ್ಲಿ ತನ್ನ ಅಭಿಯಾನವನ್ನು ಕೊನೆಗೊಳಿಸಿದೆ. ದಿಲ್ಲಿಯ ಪಾಲಮ್ ‘ಎ’ ಗ್ರೌಂಡ್ ಮೊಡೆಲ್ ಸ್ಪೋಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ತಂಡ 49.4 ಓವರ್‌ಗಳಲ್ಲಿ 211 ರನ್‌ಗಳಿಗೆ ಆಲೌಟಾಗಿತ್ತು. ಗೆಲುವಿಗೆ 212 ರನ್‌ಗಳ ಸವಾಲನ್ನು ಪಡೆದ ತಮಿಳುನಾಡು ತಂಡ ಇನ್ನೂ 46 ಎಸೆತಗಳು ಬಾಕಿ ಇರುವಾಗಲೇ 5 ವಿಕೆಟ್ ನಷ್ಟದಲ್ಲಿ 217 ರನ್ ಗಳಿಸಿತು.
ಗಂಗಾ ಶ್ರೀಧರ್ ರಾಜು ಮತ್ತು ಕೌಶಿಕ್ ಗಾಂಧಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ 10.4 ಓವರ್‌ಗಳಲ್ಲಿ 62 ರನ್ ಸೇರಿಸಿದರು. ಗಾಂಧಿ 18 ರನ್ ಗಳಿಸಿ ಗುಜರಾತ್ ನಾಯಕ ಅಕ್ಷರ್ ಪಟೆಲ್‌ಗೆ ವಿಕೆಟ್ ಒಪ್ಪಿಸಿದರು. ಶ್ರೀಧರ್ ರಾಜು ಆಕರ್ಷಕ ಅರ್ಧಶತಕ ದಾಖಲಿಸಿದರು. ಬಾಬಾ ಅಪರಾಜಿತ್ ಮತ್ತು ಶ್ರೀಧರ್ ಎರಡನೆ ವಿಕೆಟ್‌ಗೆ 63 ರನ್ ಸೇರಿಸಿದರು.
ಶ್ರೀಧರ್ ರಾಜು 85 ರನ್, ಅಪರಾಜಿತ್ 34 ರನ್, ದಿನೇಶ್ ಕಾರ್ತಿಕ್ 21 ರನ್‌ಗಳಿಸಿ ಔಟಾದರು. ಅಂತಿಮವಾಗಿ ನಾಯಕ ವಿಜಯ್ ಶಂಕರ್(ಔಟಾಗದೆ 11) ಮತ್ತು ಎಂ.ಮುಹಮ್ಮದ್(ಔಟಾಗದೆ 35) ಜೊತೆಯಾಟದಲ್ಲಿ 45ರನ್ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಟಾಸ್ ಜಯಿಸಿದ ಗುಜರಾತ್ ತಂಡದ ನಾಯಕ ಅಕ್ಷರ್ ಪಟೇಲ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ತಮಿಳುನಾಡಿನ ಬೌಲರ್‌ಗಳ ಶಿಸ್ತುಬದ್ಧ ದಾಳಿಯ ಮುಂದೆ ಗುಜರಾತ್ 211 ರನ್ ಗಳಿಸಲಷ್ಟೇ ಶಕ್ತವಾಗಿತ್ತು.
ರುಜುಲ್ ಭಟ್ ಔಟಾಗದೆ 83 ರನ್, ಎಸ್.ಬಿ.ಗೋಯೆಲ್ 39 ರನ್, ಪಾಂಚಾಲ್ 14ರನ್, ಎಚ್.ಜೆ ಪಟೇಲ್ 16ರನ್, ನಾಯಕ ಹಾರ್ದಿಕ್ ಪಟೇಲ್ ನೆರವಿನಲ್ಲಿ ಸ್ಪರ್ಧಾತ್ಮಕ ರನ್ ದಾಖಲಿಸಿತು.
ಸಂಕ್ಷಿಪ್ತ ಸ್ಕೋರ್ ವಿವರ
ಗುಜರಾತ್ 49.4 ಓವರ್‌ಗಳಲ್ಲಿ ಆಲೌಟ್ 211(ರುಜುಲ್ ಭಟ್ 83, ಸಮಿತ್‌ಗೋಯೆಲ್ 39; ವಿಜಯ್ ಶಂಕರ್ 48ಕ್ಕೆ 3, ರಾಹಿಲ್ ಶಾ 34ಕ್ಕೆ 2. ತಮಿಳುನಾಡು 42.2 ಓವರ್‌ಗಳಲ್ಲಿ 217/5(ಗಂಗಾ ಶ್ರೀಧರ್ ರಾಜು 85, ಎಂ.ಮುಹಮ್ಮದ್ ಔಟಾಗದೆ 35; ಬಾಬಾ ಅಪರಾಜಿತ್ 34; ರೋಹಿತ್ 34ಕ್ಕೆ 1).
,,,,,,,,,,,







