Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ... ಮೆಣಸೇ ....

ಓ... ಮೆಣಸೇ ....

ಪಿ.ಎ. ರೈಪಿ.ಎ. ರೈ13 March 2017 12:26 AM IST
share

   
ಜಿಡಿಪಿ ಹೆಚ್ಚಳ ಅಂಕಿ ಅಂಶಗಳು ಸುಳ್ಳಿನ ಕಂತೆ

- ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಕಾಂಗ್ರೆಸ್ ನಾಯಕ
 ಅದು ಸುಳ್ಳಾದರೇನಂತೆ, ಉತ್ತರ ಪ್ರದೇಶದಲ್ಲಿ ಬಿಜೆಪಿ ಪಡೆದ ಸ್ಥಾನಗಳು ನಿಜವಲ್ಲವೇ?
---------------------
  ಗಾಂಧೀಜಿಯನ್ನು ಕೊಂದದ್ದು ಬಿಜೆಪಿಯವರು

-ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ
 ಅವರ ಚಿಂತನೆಗಳನ್ನು ಕೊಂದವರ ಸಾಲಿನಲ್ಲಿ ಇನ್ನಷ್ಟು ಜನರಿದ್ದಾರೆ.

---------------------
   
5 ವರ್ಷಗಳ ಹಿಂದೆ ನನ್ನನ್ನು ಕೆಟ್ಟವನು, ಕೊಲೆಗಡುಕ, ಭೂ ಕಬಳಿಕೆ ಮಾಡುವವನು ಎಂದು ಬಿಂಬಿಸುತ್ತಿದ್ದರು

- ರಮೇಶ್‌ಕುಮಾರ್, ಸಚಿವ
 ನಿಮಗೆ ಸಚಿವ ಸ್ಥಾನ ನೀಡಲು ಅದುವೇ ಮಾನದಂಡವಾಗಿರಬಹುದೇ?
---------------------
  
ದೇವರು ಮತ್ತು ಸಾವನ್ನು ಧೈರ್ಯದಿಂದ ಎದುರಿಸುವವನೇ ನಿಜವಾದ ವೈದ್ಯ

- ಡಾ. ಚಂದ್ರಶೇಖರ ಕಂಬಾರ, ಹಿರಿಯ ಸಾಹಿತಿ
 ಪೇಜಾವರಶ್ರೀಗಳ ಪಾದಪದ್ಮಗಳಿಗೆ ಸಾಷ್ಟಾಂಗ ಬೀಳುವವರನ್ನು ಜ್ಞಾನಪೀಠಿಗಳೆಂದು ಕರೆಯಬೇಕೇ?
---------------------
  
ನಾನು ಕೆಪಿಸಿಸಿ ಹುದ್ದೆಯ ಆಕಾಂಕ್ಷಿಯಲ್ಲ

-ಡಿ.ಕೆ. ಶಿವಕುಮಾರ್, ಸಚಿವ
 ನೀವು ಯಾವುದರ ಆಕಾಂಕ್ಷಿ ಎಂದು ತಿಳಿದಿರುವ ಸಿದ್ದರಾಮಯ್ಯ ಅಸಮಾಧಾನದಿಂದ ಕನಲಿದರಂತೆ.

---------------------
   ಪ್ರಧಾನಿ ಮೋದಿ ಸ್ವಲ್ಪ ಕೆಲಸ ಮಾಡಿ ಜೋರು ಸದ್ದು ಮಾಡುತ್ತಾರೆ
- ಅಖಿಲೇಶ್ ಯಾದವ್, ಉತ್ತರಪ್ರದೇಶ ಮುಖ್ಯಮಂತ್ರಿ
ನಿಮ್ಮದು ಕೆಲಸವೂ ಇಲ್ಲ, ಸದ್ದೂ ಇಲ್ಲ.

ನಾನು ಸಿನೆಮಾಗಳಲ್ಲಿ ಮಾಡಿರುವುದೆಲ್ಲವೂ ಒರಿಜನಲ್ - ಸಂಜಯ್ ದತ್, ಬಾಲಿವುಡ್ ನಟ

ಬಹುಶ ಸಿನೆಮಾದ ಹೊರಗಡೆ ಮಾಡಿದ್ದೆಲ್ಲ ನಕಲಿ ಇರಬೇಕು.

---------------------

  ಬಿಜೆಪಿಯದ್ದು ಗುದ್ದಿ ಓಡುವ ರಾಜಕಾರಣ
 - ಬಿ.ಕೆ. ಹರಿಪ್ರಸಾದ್, ಎಐಸಿಸಿ ಪ್ರಧಾನ ಕಾರ್ಯದರ್ಶಿ
 ಯಾಕೆ, ನಿಮಗೆ ಒಂದು ಗುದ್ದು ಸಾಕಾಗುವುದಿಲ್ಲ ಎನ್ನುತ್ತೀರಾ?
---------------------
 
ನಮ್ಮದು ಯಡಿಯೂರಪ್ಪ ಗುಂಪೂ ಅಲ್ಲ, ಈಶ್ವರಪ್ಪ ಗುಂಪೂ ಅಲ್ಲ, ಬಿಜೆಪಿ ಗುಂಪು

- ಭಾನುಪ್ರಕಾಶ, ಬಿಜೆಪಿ ಮುಖಂಡ
 ರಾಯಣ್ಣ ಗುಂಪಾ? ಕಿತ್ತೂರು ಚೆನ್ನಮ್ಮ ಗುಂಪಾ ಎನ್ನುವುದನ್ನು ಸ್ಪಷ್ಟಪಡಿಸಿದರೂ ಸಾಕು.
---------------------
  
ಸ್ಮಾರ್ಟ್‌ಸಿಟಿ ಯೋಜನೆಯಿಂದಾಗಿ ಮಂಗಳೂರು ಸಿಟಿ ಇಡೀ ರಾಜ್ಯದ ನಗರವಾಗಲಿದೆ

- ಆಸ್ಕರ್ ಫೆರ್ನಾಂಡಿಸ್, ರಾಜ್ಯಸಭಾ ಸದಸ್ಯ
 
ಅಂದರೆ ಮಂಗಳೂರು ನಗರದ ಕೋಮುವಾದ ಇಡೀ ರಾಜ್ಯಕ್ಕೆ ಹರಡಲಿದೆ ಎಂದಾಯಿತು.

---------------------
  
ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ

- ನಳಿನ್‌ಕುಮಾರ್ ಕಟೀಲು, ಸಂಸದ
 
ನಿಮ್ಮನ್ನು ಅಧರ್ಮ ರಕ್ಷಿಸುತ್ತಿರುವುದರಿಂದ ನೀವು ಯಾವುದನ್ನು ರಕ್ಷಿಸಿರುವುದು ಎನ್ನುವುದು ಗೊತ್ತಾಗುತ್ತದೆ.

---------------------
  
ನಮ್ಮ ಧರ್ಮಯುದ್ಧ ಹಲವು ತಿರುವುಗಳನ್ನು ಪಡೆಯಲಿದೆ

- ಪನ್ನೀರ್ ಸೆಲ್ವಂ, ತಮಿಳುನಾಡು ಮಾಜಿ ಮುಖ್ಯಮಂತ್ರಿ
 
ಹೌದು, ತಿರುವಿನಲ್ಲಿ ನಿಮ್ಮನ್ನು ಬಿಜೆಪಿ ನಾಯಕರು ಕಾಯುತ್ತಿದ್ದಾರೆ ಎನ್ನುವುದು ಇಡೀ ತಮಿಳುನಾಡಿಗೇ ಗೊತ್ತು.

---------------------
  
ಕಾಲಿಗೆ ಬೀಳುವುದು ವಿಕೃತ ಸಂಸ್ಕೃತಿ

- ಕೆ.ಎಸ್.ಈಶ್ವರಪ್ಪ, ವಿ.ಪ.ವಿ. ನಾಯಕ
 ಕಾಲೆಳೆಯುವುದು?
---------------------
  
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಅಂತ ಹೋರಾಟ ಮಾಡಿದವರಲ್ಲಿ ನಾನೂ ಒಬ್ಬ

- ಸತೀಶ್ ಜಾರಕಿಹೊಳಿ, ಮಾಜಿ ಸಚಿವ
 ಅದಕ್ಕಾಗಿ ಈಗ ಅವರು ನಿಮ್ಮನ್ನು ಮುಖ್ಯಮಂತ್ರಿ ಮಾಡಬೇಕೇ?
---------------------
  ಇಲ್ಲದ ಸಮಸ್ಯೆ ಸೃಷ್ಟಿಸಿ ಚಾಣಾಕ್ಷ ತಂತ್ರ ಪ್ರಯೋಗ ಮಾಡುವುದರಲ್ಲಿ ಬಿಜಿಪಿಯವರು ನಿಸ್ಸೀಮರು
- ದೇವೇಗೌಡ, ಮಾಜಿ ಪ್ರಧಾನಿ
 ಅವರದು ತಂತ್ರ, ನಿಮ್ಮದು ಮಂತ್ರ.

---------------------
  ನಾನು ಕಾಂಗ್ರೆಸ್ ನಿಷ್ಠ

- ಎಚ್. ವಿಶ್ವನಾಥ್, ಮಾಜಿ ಸಂಸದ

ಸದ್ಯಕ್ಕೆ ಅದೇ ಕಾಂಗ್ರೆಸ್ ಪಾಲಿನ ಕಷ್ಟ.

---------------------
  
ಜಗತ್ತಿನಲ್ಲಿ ಭಾರತಕ್ಕೆ ಗೌರವ ಬರಲು ಮೋದಿ ನಾಯಕತ್ವವೇ ಕಾರಣ

- ಜಗದೀಶ್ ಶೆಟ್ಟರ್, ವಿರೋಧ ಪಕ್ಷದ ನಾಯಕ
 ಆ ಗೌರವಕ್ಕಾಗಿ ಬಡವರು ತೆತ್ತ ಬೆಲೆ ಬಹುದೊಡ್ಡದು.

---------------------
  ಗೋವುಗಳಿಗೆ ಸ್ವಾತಂತ್ರ ಅಗತ್ಯ
- ರಾಘವೇಶ್ವರಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ
 ಹೌದು, ಪ್ರತಿದಿನ ಅದರ ಕೆಚ್ಚಲಿಗೆ ಕೈ ಹಾಕಿ ನಡೆಸುವ ಲೈಂಗಿಕ ದೌರ್ಜನ್ಯ ನಿಲ್ಲಬೇಕು.

---------------------
  
ಹಿಂದಿನ ಬಿಜೆಪಿ ಸರಕಾರ 6 ತಿಂಗಳಿಗೊಮ್ಮೆ ಮಂತ್ರಿಯನ್ನು ಬದಲಾಯಿಸುತ್ತಾ ಜನರಿಗೆ ಮನರಂಜನೆ ನೀಡುತ್ತಿತ್ತು - ಯು.ಟಿ. ಖಾದರ್, ಸಚಿವ
ದಿನಾ ಪತ್ರಿಕೆಗಳಲ್ಲಿ ಒಂದೇ ಮುಖವನ್ನು ನೋಡುವ ಜನರ ಕಷ್ಟಕ್ಕಿಂತ ಬದಲಾವಣೆಯೇ ವಾಸಿ.

---------------------
  ಯಾವುದೇ ಕೆಲಸದ ಫಲಿತಾಂಶ ತಕ್ಷಣ ಸಿಗುವುದಿಲ್ಲ
 - ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವ
ಹೌದು, ಬಿಜೆಪಿ ಸೇರಿದ ಬಂಗಾರಪ್ಪರಿಗೂ ಫಲಿತಾಂಶ ಗೊತ್ತಾಗುವಾಗ ತಡವಾಗಿತ್ತು.

---------------------
  ಮತದಾರರು ಯಡಿಯೂರಪ್ಪನವರ ಜೇಬಿನಲ್ಲಿಲ್ಲ
 - ಸಿದ್ದರಾಮಯ್ಯ, ಮುಖ್ಯಮಂತ್ರಿ
 ಹೌದು, ನೋಟು ನಿಷೇಧದ ಬಳಿಕ ಜೇಬಿನಲ್ಲಿ ಏನನ್ನೂ ಇಟ್ಟುಕೊಳ್ಳುವಂತಿಲ್ಲ.

---------------------

ವಿದೇಶಗಳಲ್ಲಿರುವ ಎಲ್ಲ ಭಾರತೀಯರ ಸುರಕ್ಷೆಗೆ ಕ್ರಮ ಕೈಗೊಳ್ಳುತ್ತೇವೆ

- ರಾಜನಾಥ ಸಿಂಗ್, ಕೇಂದ್ರ ಸಚಿವ

ಭಾರತದಲ್ಲಿರುವ ಭಾರತೀಯರ ಸುರಕ್ಷೆಗೆ ಕ್ರಮ ಯಾವಾಗ?

---------------------
  ಕಾಂಗ್ರೆಸ್ ಕುಸಿಯುತ್ತಿರುವ ನೆಲ
 - ಕುಮಾರ ಬಂಗಾರಪ್ಪ, ಮಾಜಿ ಸಚಿವ
 ಆ ನೆಲದ ಫಸಲನ್ನು ಕೊಯ್ದು ಬರಡು ಮಾಡಿದವರ ಹತಾಶೆ.

---------------------
  ಮಹಿಳೆಯರು ಸಮಾನತೆಯ ಭ್ರಮೆಯಲ್ಲಿ ಎಲ್ಲೆ ಮೀರಬಾರದು
- ಶಕುಂತಳಾ ಶೆಟ್ಟಿ, ಶಾಸಕಿ
 ಅದಕ್ಕೇ ಇರಬೇಕು ಆಗಾಗ ಗುಟ್ಟಾಗಿ ಆರೆಸ್ಸೆಸ್ ಮಹಿಳಾ ಕಚೇರಿಗೆ ಭೇಟಿ ನೀಡುವುದು.

---------------------
  
ಚುನಾವಣೆ ಮಾದರಿಯಲ್ಲಿ ಪಿಯು ಪರೀಕ್ಷೆ ನಡೆಸಲಾಗುತ್ತಿದೆ

- ತನ್ವೀರ್ ಸೇಠ್, ಸಚಿವ
 ಅಂದರೆ ಅಕ್ರಮಗಳಿಗೆ ಪೂರ್ಣ ಅನುಮತಿ.

share
ಪಿ.ಎ. ರೈ
ಪಿ.ಎ. ರೈ
Next Story
X