Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಮತಯಂತ್ರವನ್ನು ದೂಷಿಸುವ ಮುನ್ನ ...

ಮತಯಂತ್ರವನ್ನು ದೂಷಿಸುವ ಮುನ್ನ ...

ವಾರ್ತಾಭಾರತಿವಾರ್ತಾಭಾರತಿ13 March 2017 12:29 AM IST
share

ಸ್ವತಂತ್ರ ದೇಶವಾಗಿದ್ದಲ್ಲಿ ಜಗತ್ತಿನ ಐದನೇ ದೊಡ್ಡ ರಾಷ್ಟ್ರವಾಗುತ್ತಿದ್ದ ಉತ್ತರಪ್ರದೇಶದ ಚುನಾವಣೆ ಫಲಿತಾಂಶ ಸ್ವಯಂ ಬಿಜೆಪಿಯ ನಿರೀಕ್ಷೆಗೂ ಮೀರಿದಷ್ಟಿದೆ. ಆದರೂ 2014ರ ಸಂಸತ್ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿ ಪಡೆದ ಓಟಿನ ಪ್ರಮಾಣಕ್ಕಿಂತ 2017ರ ವಿಧಾನಸಭಾ ಚುನಾವಣೆಯಲ್ಲಿ ಅದು ಪಡೆದುಕೊಂಡ ಪ್ರಮಾಣ 2 ಶೇಕಡಾ ಕಡಿಮೆ ಎಂಬುದು ಗೆದ್ದವರ ಅಬ್ಬರಗಳು ಮರೆಸಬಾರದು.

ಹಾಗೆಯೆ ಎರಡನೆ ಅತಿದೊಡ್ಡ ಪಕ್ಷವಾಗಿ ಸಮಾಜವಾದಿ ಪಾರ್ಟಿ ಗೆದ್ದುಬಂದಿದ್ದರೂ ಓಟು ಷೇರಿನ ಪ್ರಮಾಣಕ್ಕೆ ಬರುವುದಾದರೆ ಬಹುಜನ ಸಮಾಜ ಪಕ್ಷಕ್ಕೆ 22.3 ಶೇಕಡಾ ಓಟು ದೊರೆತಿದೆ. ಇದು ಸಮಾಜವಾದಿ ಪಕ್ಷಕ್ಕಿಂತ 0.4 ರಷ್ಟು ಹೆಚ್ಚು.ಅಷ್ಟೇ ಅಲ್ಲದೆ 2014ರ ಸಂಸತ್ ಚುನಾವಣೆಗೆ ಹೋಲಿಸಿದಲ್ಲಿ ಬಿಎಸ್ಪಿಯ ಓಟು ಷೇರು ಶೇ.2ರಷ್ಟು ಹೆಚ್ಚಾಗಿದೆ ಎಂಬುದನ್ನು ಮರೆಯಬಾರದು. ಹಾಗೆಯೇ ಫಲಿತಾಂಶ ಹೊರಬಿದ್ದ ಆ ನಂತರ ತನ್ನ ಪಕ್ಷದ ಸೋಲಿಗೆ ಇಲೆಕ್ಟ್ರಾನಿಕ್ ವೋಟಿಂಗ್ ಯಂತ್ರವನ್ನು ತನ್ನ ಪರವಾಗಿ ಫಲಿತಾಂಶ ನೀಡುವಂತೆ ಬಿಜೆಪಿ ಪಕ್ಷ ದುರ್ಬಳಕೆ ಮಾಡಿರುವುದೇ ಕಾರಣವೆಂದು ಮಾಯಾವತಿಯವರು ಆರೋಪಿಸಿದ್ದಾರೆ. ಬಿಜೆಪಿ ಇದನ್ನು ತಿರಸ್ಕರಿಸಿದೆ ಮಾತ್ರವಲ್ಲದೆ ಇದು ಪ್ರಜಾತಂತ್ರಕ್ಕೆ ಮಾಡುತ್ತಿರುವ ಅವಮಾನವೆಂದು ಬಣ್ಣಿಸಿದೆ.

ವಿಪರ್ಯಾಸವೆಂದರೆ, ವೋಟಿಂಗ್ ಮೆಷಿನ್ ಕುತಂತ್ರದ ಹುಯಿಲನ್ನು ಈ ದೇಶದಲ್ಲಿ ಮೊದಲು ಎಬ್ಬಿಸಿದ್ದು ಬಿಜೆಪಿಯೇ ಆಗಿದೆ. 2009ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋತ ನಂತರದಲ್ಲಿ ಬಿಜೆಪಿಯ ಆಗಿನ ಅಧ್ಯಕ್ಷ ನಿತಿನ್ ಗಡ್ಕರಿ ಮತ್ತು ಅವರ ನಾಯಕ ಅಡ್ವಾಣಿಯವರು ದೊಡ್ಡ ಪತ್ರಿಕಾಗೋಷ್ಠಿಯನ್ನು ನಡೆಸಿ ವೋಟಿಂಗ್ ಯಂತ್ರದ ಕುತಂತ್ರೀಕರಣವಾಗಿದ್ದರಿಂದಲೇ ಬಿಜೆಪಿ ಸೋತಿತೆಂದು ಆರೋಪಿಸಿದ್ದ್ದರು. ನಂತರದಲ್ಲಿ ಅವರ ಪಕ್ಷದ ಸುಬ್ರಹ್ಮಣ್ಯ ಸ್ವಾಮಿ ಈ ಬಗ್ಗೆೆ ಸುಪ್ರೀಂಕೋರ್ಟಿನಲ್ಲಿ ದಾವೆಯನ್ನೂ ಹೂಡಿದ್ದರು. ಆಗ ಸುಪ್ರೀಂಕೋರ್ಟು ವೋಟಿಂಗ್ ಮೆಷಿನ್ ಬಗ್ಗೆ ಸ್ಪರ್ಧಿಸುತ್ತಿರುವ ಪಕ್ಷಗಳಲ್ಲಿ ಅವಿಶ್ವಾಸವಿರುವಾಗ ಯಂತ್ರದ ಜೊತೆ VVoter Verified Paper Audit Trail'' (VVPAT) ಪದ್ಧತಿಯನ್ನು ಅನುಸರಿಸುವಂತೆ ಸೂಚಿಸಿತು.ಹೀಗಾಗಿ ವೋಟಿಂಗ್ ಮೆಷಿನ್ ಕುತಂತ್ರೀಕರಣದ ಪ್ರಶ್ನೆಯನ್ನು ಎತ್ತಿದ್ದಕ್ಕೆ ಮಾಯಾವತಿಯವರನ್ನು ದೂರುವುದರಲ್ಲಿ ಬಿಜೆಪಿಯ ಸೋಗಲಾಡಿತನವಷ್ಟೇ ಎದ್ದು ಕಾಣುತ್ತದೆ.

ಆದರೆ ತನ್ನ ಸೋಲಿಗೆ ಯಂತ್ರವನ್ನು ದೂರುವ ಮೂಲಕ ಬಿಎಸ್ಪಿಯು ಸಹ ತನ್ನ ಸೋಲಿನ ಹೊಣೆ ಹೊರುವಲ್ಲಿ ಬೇಜವಾಬ್ದಾರಿಯನ್ನು ತೋರಿಸುತ್ತಿದೆ. ಉದಾಹರಣೆಗೆ VVPAT ಅಳವಡಿಸಿದ ಗಾಝಿಯಾಬಾದ್ ಕ್ಷೇತ್ರಗಳಲ್ಲಿಯೂ ಬಿಜೆಪಿ ಬಹುಜನ ಸಮಾಜ ಪಕ್ಷಕ್ಕಿಂತ 50,000 ಅಧಿಕ ಮತಗಳಿಂದ ಗೆದ್ದಿದೆ. ಇದು ಇಡೀ ರಾಜ್ಯಾದ್ಯಂತ ಇರುವ ಟ್ರೆಂಡ್‌ಗೆ ತಕ್ಕಂತೆಯೇ ಇದೆ ವಿನಃ ಭಿನ್ನವಾಗಿಲ್ಲ. ಹಾಗೆಯೇ ಪಂಜಾಬಿನಲ್ಲೂ ಹೊಸಯಂತ್ರ ಅಳವಡಿಸಿದ ಕ್ಷೇತ್ರಗಳಲ್ಲಿ ಫಲಿತಾಂಶಗಳು ಆ ರಾಜ್ಯದ ಒಟ್ಟಾರೆ ಟ್ರೆಂಡಿಗೆ ಭಿನ್ನವಾಗಿಲ್ಲ. ಹೀಗಾಗಿ ಬಿಎಸ್ಪಿ ಕನಿಷ್ಠ ಈ ಬಾರಿಯ ತನ್ನ ಸೋಲಿಗೆ ವೋಟಿಂಗ್ ಯಂತ್ರವನ್ನು ದೂರುವುದು ಸತ್ಯಕ್ಕೆ ದೂರವಾದ ಸಂಗತಿಯಾಗಬಹುದು.

ಬಿಹಾರದಲ್ಲ್ಲಿ ಆದಂತೆ ಉತ್ತರ ಪ್ರದೇಶದಲ್ಲಿಯೂ ಬಿಜೆಪಿ ವಿರೋಧಿ ಓಟು ಒಡೆಯದೆ ಒಂದೇ ಬಣಕ್ಕೆ ಬರುವಂತಾಗಿದ್ದರೆ ಖಂಡಿತ ಫಲಿತಾಂಶ ಭಿನ್ನವಾಗಿರುತ್ತಿತ್ತು. ಹೀಗಾಗಿಯೇ ಮುಸ್ಲಿಂ ಬಹುಸಂಖ್ಯಾತ ಮತದಾರರಿರುವ ಕ್ಷೇತ್ರದಲ್ಲೂ ಮುಸ್ಲಿಂ ಅಭ್ಯರ್ಥಿ ಗೆಲ್ಲದೇ ಬಿಜೆಪಿ ಅಭ್ಯರ್ಥಿ ಗೆದ್ದಿದ್ದಾನೆ. ಕಾರಣ ವೋಟಿಂಗ್ ಯಂತ್ರದ ಲೋಪವಲ್ಲ. ಬದಲಿಗೆ ಮುಸ್ಲಿಂ ಓಟು ಬಿಎಸ್ಪಿ ಮತ್ತು ಸಮಾಜವಾದಿ ಪಕ್ಷದ ನಡುವೆ ಒಡೆದು ಹೋಗಿದ್ದು ಮತ್ತು ಅದಕ್ಕೆ ಪ್ರತಿಯಾಗಿ ಬಿಜೆಪಿ ತನ್ನ ಕೋಮುವಾದಿ ರಾಜಕಾರಣದ ಮೂಲಕ ಇಡೀ ಹಿಂದೂ ಓಟನ್ನು ಬಾಚಿಕೊಂಡಿದ್ದು.

ಹಾಗೆಯೇ ನೋಟು ನಿಷೇಧದ ಮೂಲಕ ಮೋದಿ ಸರಕಾರ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯಿತು. ಒಂದು, ವಿರೋಧ ಪಕ್ಷಗಳು ಚುನಾವಣೆಗಾಗಿ ಇಟ್ಟುಕೊಂಡಿದ್ದ ಹಣವನ್ನು ನಿಷೇಧ ಮಾಡಿ ದಿಢೀರ್ ಬಡವಾಗಿಸಿತು. ಎರಡು, ಈ ಮೂಲಕ ಶ್ರೀಮಂತರ ಕಪ್ಪುಹಣವನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದೇನೆ ಎಂಬ ಭ್ರಾಂತಿ ಮೂಡಿಸಿ ತಾನು ಮಾತ್ರ ಬಡವರ ಪರ ಎಂಬ ಅಭಿಪ್ರಾಯ ಮೂಡಿಸಿತು ಮತ್ತು ಇದಕ್ಕೆ ಇಡೀ ಸ್ವತಂತ್ರ ಮಾಧ್ಯಮ ರಂಗವನ್ನು ತನ್ನ ಪರವಾಗಿ ದುಡಿಸಿಕೊಂಡಿತು. 2014 ಮತ್ತು 2017ರಲ್ಲೂ ಮೋದಿಯ ಗೆಲುವಿನಲ್ಲಿ ಮಾಧ್ಯಮದ ದುಡಿಮೆಯ ಪಾತ್ರವೇ ದೊಡ್ಡದು. ಚುನಾವಣೆಯ ಮೊದಲ ಹಂತದಲ್ಲೇ ಕಾನೂನುಬಾಹಿರವಾಗಿ ಎಕ್ಸಿಟ್ ಪೋಲ್ ಫಲಿತಾಂಶವನ್ನು ದೈನಿಕ್ ಜಾಗರಣ ಪ್ರಕಟಿಸಿದ್ದು ಎಲ್ಲರ ನೆನಪಿನಲ್ಲೂ ಇದೆ. ಹಾಗೆಯೇ ಕಳೆದ ಮೂರು ತಿಂಗಳಲ್ಲಿ ಉತ್ತರ ಪ್ರದೇಶದ ಹಿಂದೆ ಚಾನೆಲ್ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಬಿಜೆಪಿಯ ಪರವಾದ ಸುದ್ದಿಗಳೇ ಶೇ.60 ಕ್ಕಿಂತ ಜಾಸ್ತಿ ಸಮಯ ಮತ್ತು ಜಾಗವನ್ನು ಪಡೆದುಕೊಂಡಿತ್ತು.

ಪಂಜಾಬಿನಲ್ಲೂ ಸಹ ಸೋತವರಿಗೂ ಮತ್ತು ಗೆದ್ದವರಿಗೂ ಒಂದು ಪಾಠವಿದೆ. ಗೆದ್ದ ಕಾಂಗ್ರೆಸ್ ತನ್ನ ಪ್ರಾದೇಶಿಕ ನೆಲೆ ಮತ್ತು ನಾಯಕತ್ವದಿಂದಾಗಿ ಗೆದ್ದಿತೇ ವಿನಃ ಅದರ ಹೈಕಮಾಂಡಿನ ಪಾತ್ರ ಇದರಲ್ಲಿ ಶೂನ್ಯ. ಆಳುವ ಸರಕಾರದ ಭ್ರಷ್ಟಾಚಾರ ಜನರ ನಿತ್ಯ ಜೀವನದ ಅನುಭವಕ್ಕೆ ಬಂದು ಅಸಹನೆಯನ್ನು ಮಡುಗಟ್ಟಿಸುತ್ತಿರುವಾಗ ಅಂಥ ಸರಕಾರವನ್ನು ಯಾವ ಮೋಡಿಗಳು ಉಳಿಸಿಕೊಳ್ಳಲು ಸಾಧ್ಯವಿಲ್ಲ ಅನ್ನುವುದನ್ನು ಸಹ ಇದು ತೋರಿಸುತ್ತದೆ. ಬೇರೆಲ್ಲ ರಾಜ್ಯಗಳಿಗಿಂತ ಪಂಜಾಬಿನಲ್ಲಿ ಮಾತ್ರ ಬಿಜೆಪಿ ಈ ಹಿಂದಿಗಿಂತ ಕಡಿಮೆ ಓಟು ಶೇರನ್ನು ಪಡೆದುಕೊಂಡಿದೆ. ಹಾಗೆಯೆ ಗೆಲ್ಲುತ್ತದೆಂದು ನಂಬಲಾಗಿದ್ದ ಆಪ್ ಪಕ್ಷ ಪ್ರಮುಖ ವಿರೋಧ ಪಕ್ಷವಾಗುತ್ತಿದೆಯಾದರು ಅದರ ಅವಕಾಶ ಹಾಳಾಗಲು ಅದರ ದಿಲ್ಲಿಯ ನಾಯಕರೇ ಕಾರಣವೆಂಬುದನ್ನು ಆ ಪಕ್ಷವು ಮನಗಾಣಬೇಕು.

ಈ ಐದು ರಾಜ್ಯಗಳ ಚುನಾವಣೆಯ ಫಲಿತಾಂಶಗಳು ಜುಲೈನಲ್ಲಿ ಬರಲಿರುವ ಅಧ್ಯಕ್ಷ ಚುನಾವಣೆಯಲ್ಲೂ, ರಾಜ್ಯಸಭಾ ಚುನಾವಣೆಗಳಲ್ಲೂ ನಿಚ್ಚಳ ಪ್ರಭಾವ ಬೀರಲಿವೆ. ಒಟ್ಟಾರೆಯಾಗಿ 400ಕ್ಕೂ ಅಧಿಕ ವಿಧಾನಸಭಾ ಸೀಟುಗಳನ್ನು ಪಡೆದುಕೊಂಡಿರುವ ಬಿಜೆಪಿ ಕ್ರಮೇಣವಾಗಿ ರಾಜ್ಯಸಭೆಯಲ್ಲೂ ಹೆಚ್ಚು ಬಲವಿರುವ ಪಕ್ಷವಾಗಲಿದೆ. ಇದರಿಂದ ಈವರೆಗೆ ಅಮಾನತಿನಲ್ಲಿಟ್ಟಿದ್ದ ಎಲ್ಲ ಜನ ವಿರೋಧಿ ನೀತಿಗಳು (ಕೇಂದ್ರೀಯ ಗೋ ಹತ್ಯಾ ನಿಷೇಧ ಶಾಸನ, ಹೊಸ ಗೇಣಿ ನೀತಿ, ಹೊಸ ಕಾರ್ಮಿಕ ನೀತಿ, ಹೊಸ ಸ್ವದೇಶಿ ಶಿಕ್ಷಣ ನೀತಿ. ಇತ್ಯಾದಿಗಳು ಮತ್ತು ಕಾರ್ಪೊರೇಟ್ ಮತ್ತು ಹಿಂದುತ್ವ ಪರ ನೀತಿಗಳು) ಒಂದೊಂದಾಗಿ ಜಾರಿಗೆ ಬಂದು ಜನರನ್ನು ಬೇಟೆಯಾಡಲಿವೆ. ಅಧ್ಯಕ್ಷ, ಉಪರಾಷ್ಟ್ರಾಧ್ಯಕ್ಷದಂಥ ಪದವಿಗಳು ಬಿಜೆಪಿಯ ಪ್ರಭಾವದಲ್ಲಿದ್ದಾಗ ಇತರ ಸಾಂವಿಧಾನಿಕ ಸಂಸ್ಥೆಗಳು ದುರ್ಬಲವಾಗಿ ಪ್ರಜಾತಂತ್ರವನ್ನು ಇನ್ನಷ್ಟು ಅತಂತ್ರಗೊಳಿಸಲಿವೆ. ಈ ಸಂದರ್ಭದಲ್ಲಿ ಜನರು ಮತ್ತು ಚಳವಳಿಗಳು ಮಾತ್ರ ಈ ದೇಶದ ಪ್ರಜಾತಂತ್ರವನ್ನು ತಮಗಾಗಿ ಉಳಿಸಿಕೊಳ್ಳಲು ಸಾಧ್ಯ, ಅದಾಗಬೇಕೆಂದರೆ ಈ ದೇಶ ಐದು ರಾಜ್ಯಗಳ ಫಲಿತಾಂಶಗಳ ಬಗ್ಗೆ ಆತ್ಮವಂಚನೆಯಿಲ್ಲದೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X