ಮಂಗಳೂರು: ಲಾವಣಿ ಸ್ಪರ್ಧೆಯಲ್ಲಿ ಅಕ್ಷತಾ ಪ್ರಥಮ

ಮಂಗಳೂರು, ಮಾ.13: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಯುವಜನ ಮೇಳದಲ್ಲಿ ಅಕ್ಷತಾ ಕುಡ್ಲ ಇವರು ಲಾವಣಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಪ್ರಸ್ತುತ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ನೆನಪಿನ ಶಕ್ತಿಯಲ್ಲಿ ಗಿನ್ನಿಸ್ ದಾಖಲೆಯ ನಾಮಿನಿಯಾಗಿದ್ದಾರೆ.
ಮಿಮಿಕ್ರಿ, ಹಾಡು, ಯಕ್ಷಗಾನ, ನೃತ್ಯದ ವಿವಿಧ ಕಲಾ ಪ್ರಕಾರಗಳಲ್ಲಿ ತೊಡಗಿಸಿಕೊಂಡಿದ್ದು, ಸಂಪನ್ಮೂಲ ವ್ಯಕ್ತಿಯಾಗಿ ಮಕ್ಕಳ ಶಿಬಿರಗಳನ್ನು ಸಂಘಟಿಸುವುದರೊಂದಿಗೆ, ವಿಶ್ವ ನುಡಿಸಿರಿ ವಿರಾಸತ್, ವಿಶ್ವ ತುಳುವೆರೆ ಪರ್ಬದಂತಹ ವೇದಿಕೆಗಳನ್ನೊಳಗೊಂಡು ಕರ್ನಾಟಕವಲ್ಲದೆ ಹೊರ ರಾಜ್ಯದಲ್ಲಿ ತಮ್ಮ ಸಾಂಸ್ಕೃತಿಕ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ.
ಬಹ್ರೖೆನ್ ನ " ಬಿಲ್ಲವ ಸಂಭ್ರಮ" ದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿದ ಹೆಗ್ಗಳಿಕೆ ಇವರದ್ದಾಗಿದೆ.
Next Story





