ಯಾರಿಗೆ ಒಲಿಯಲಿದೆ ಜಯಲಲಿತಾ ಕ್ಷೇತ್ರ ಕೆ.ಆರ್ ನಗರ್ ?
.jpg)
ಚೆನ್ನೈ , ಮಾ. 13: ಜಯಲಲಿತಾರ ನಿಧನದಿಂದ ತೆರವಾದ ಆರ್‌ಕೆ ನಗರ ವಿಧಾನಸಭಾ ಕ್ಷೇತ್ರಕ್ಕೆ ತಮಿಳ್ನಾಡಿನಲ್ಲಿ ಮುಂದಿನ ತಿಂಗಳು 12 ತಾರೀಕಿಗೆ ಚುನಾವಣೆ ನಡೆಯಲಿದೆ. ಅಣ್ಣಾ ಡಿಎಂಕೆಯ ಎರಡು ಬಣಗಳಿಗೂ ಇದು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಜೊತೆಗ ಡಿಎಂಕೆಗೂ ಇಲ್ಲಿ ಗೆಲ್ಲುವ ಸಾಧ್ಯತೆಗಳಿವೆ. ಈ ನಡುವೆ ಜಯಲಲಿತಾರ ಸಹೋದರ ಪುತ್ರಿ ದೀಪಾರ ಅಭ್ಯರ್ಥಿತ್ವ ರಾಜಕೀಯ ಪಕ್ಷಗಳಿಗೆ ಸವಾಲಾಗಿದೆ.
ಮಾರ್ಚ್ 16ರಿಂದ 23ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿದೆ. ಚುನಾವಣೆ ನಡೆದು ಎಪ್ರಿಲ್ 15ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಇದು ತಮಿಳ್ನಾಡು ರಾಜಕೀಯದಲ್ಲೇ ಒಂದು ದಿಕ್ಸೂಚಿಯಾಗಲಿದೆ. ಈ ಹಿಂದೆ ನಿರಂತರ ನಾಲ್ಕು ಬಾರಿಯೂ ಆರ್‌ಕೆ ನಗರ ಅಣ್ಣಾ ಡಿಎಂಕೆಗೆ ಒಲಿದಿದೆ. ಇಲ್ಲಿ ಎರಡು ಬಾರಿ ಉಪಚುನಾವಣೆ ನಡೆದಿದ್ದು ಸಹಿತ ಈ ಬಾರಿಯ ಮೂರನೆ ಉಪಚುನಾಣೆಯಾಗಿದೆ.
ಅಧಿಕಾರದ ಹಗ್ಗಜಗ್ಗಾಟದಲ್ಲಿ ಒಡೆದ ಎಐಡಿಎಂಕೆ ಶಶಿಕಲಾ ವಿಭಾಗಕ್ಕೆ ಹೇಳಿಕೊಳ್ಳುವಂತಹ ಪ್ರಭಾವವಿಲ್ಲ. . ಶಶಿಕಲಾ ಪಕ್ಷದಿಂದ ಟಿಟಿವಿ ದಿನಕರನ್‌ರನ್ನು ಅಭ್ಯರ್ಥಿಯಾಗಿ ನಿಲ್ಲಿಸುವ ಸಾಧ್ಯತೆ ಇದೆ. ಇನ್ನೊಂದು ಕಡೆ ಜಯಲಲಿತಾರ ಸಹೋದರ ಪುತ್ರ ದೀಪಕ್ ಜಯಕುಮಾರ್‌ರನ್ನು ಅಲ್ಲಿ ನಿಲ್ಲಿಸುತ್ತದೆ ಎನ್ನುವ ಸೂಚನೆಯೂ ಇದೆ.
ಒ. ಪನ್ನೀರ್ ಸೆಲ್ವಂ ವಿಭಾಗ ತಮ್ಮ ಅಸ್ತಿತ್ವಕ್ಕಾಗಿ ತುಂಬ ಬೆವರು ಹರಿಸಬೇಕಾಗಿದೆ. ಪನೀರ್ ಸೆಲ್ವಂ ವಿಭಾಗದ ಬೆಂಬಲದಿಂದ ದೀಪಾ ಜಯಕುಮಾರ್ ಅಲ್ಲಿ ಚುನಾವಣೆಗೆ ನಿಂತರೆ ಜಯಗಳಿಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.