ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ಐಸಿಐಸಿಐ ಬ್ಯಾಂಕ್ ಕ್ಯಾಂಪಸ್ ನೇಮಕಾತಿ ಶಿಬಿರ
ಮಂಗಳೂರು, ಮಾ.13: ಟಿವಿಎಸ್ ತರಬೇತಿ ಮತ್ತು ಸೇವಾ ಸಂಸ್ಥೆಯು ದಕ್ಷಿಣ ಭಾರತದಲ್ಲಿ ಟಿವಿಎಸ್ ಸಮೂಹ ಕಂಪನಿ ಮತುತ ಐಸಿಐಸಿಐ ಬ್ಯಾಂಕ್ ತರಬೇತಿ ಮತ್ತು ಮಾರಾಟ ಅಧಿಕಾರಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ನೇಮಕಾತಿ ಶಿಬಿರವನ್ನು ಆಯೋಜಿಸಿದೆ.
ಶಿಬಿರವು ಮಾ. 15ರಂದು ಬೆಳಗ್ಗೆ 9 ಗಂಟೆಗೆ ಆರಂಭಗೊಳ್ಳಲಿದ್ದು, 2017ರ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸೇರಿದಂತೆ 2013ರಿಂದ 2016ನೆ ಸಾಲಿನವರೆಗಿನ ಇಂಜಿನಿಯರಿಂಗ್ ಪದವೀಧರರು ಕ್ಯಾಂಪಸ್‌ನಲ್ಲಿ ಭಾಗವಹಿಸಬಹುದು ಎಂದು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಉಮೇಶ್ ಭೂಷಿ ತಿಳಿಸಿದರು.
ಟಿವಿಎಸ್ ತರಬೇತಿ ಹಾಗೂ ಸೇವಾ ಸಂಸ್ಥೆ, ಐಸಿಐಸಿಐ ಬ್ಯಾಂಕ್ ಪರವಾಗಿ ದಕ್ಷಿಣ ಭಾರತದ 170ಕ್ಕೂ ಅಧಿಕ ಕಾಲೇಜುಗಳನ್ನು ಭೇಟಿ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಇದುವರೆಗೆ 1500ಕ್ಕೂ ಅಧಿಕ ಮಂದಿಗೆ ತರಬೇತಿ ಹಾಗೂ ಮಾರಾಟ ಅಧಕಾರಿಗಳನ್ನು ಆಯಕೆ ಮಾಡಲಾಗಿದೆ. ಇದೀಗ ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ನಡೆಯುವ ಆಯ್ಕೆ ಬಳಿಕ ಅಭ್ಯರ್ಥಿ ಪ್ರವೇಶ ತರಬೇತಿ ಕಾರ್ಯಕ್ರಮದ 15 ದಿನಗಳ ಟಿವಿಎಸ್ ತರಬೇತಿ ಪೂರ್ಣಗೊಳಿಸಿ ಕರ್ನಾಟಕ ಮತ್ತು ಕೇರಳದ ಐಸಿಐಸಿಐ ಬ್ಯಾಂಕ್ ಶಾಖೆಗಳಲ್ಲಿ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಬಹುದಾಗಿದೆ. ಟಿವಿಎಸ್ ಟಿಎಸ್ ಚೆನ್ನೈ 15 ದಿನಗಳ ವಸತಿ ತರಬೇತಿ, ವಾಸ್ತವ್ಯವದ ವ್ಯವಸ್ಥೆ, ಪ್ರಯಾಣ ಮತ್ತು ಅಧ್ಯಯನ ವಸ್ತುಗಳ ವ್ಯವಸ್ಥೆ ಮಾಡಲಿದೆ ಎಂದು ಅವರು ತಿಳಿಸಿದರು.
ಗೋಷ್ಠಿಯಲ್ಲಿ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನ ನೇಮಕಾತಿ ಅಧಿಕಾರಿ ಪ್ರೊ. ರಶ್ಮಿ ಭಂಡಾರಿ, ವಸಂತ ಕೇದಿಗೆ ಉಪಸ್ಥಿತರಿದ್ದರು.







