ನಿರ್ದೇಶಕ ದೀಪನ್ ಇನ್ನಿಲ್ಲ

ಕೊಚ್ಚಿ, ಮಾ.13: ಪ್ರಸಿದ್ಧ ಸಿನೆಮಾ ನಿರ್ದೇಶಕ ದೀಪನ್(47) ನಿಧನರಾದರು. ಕಿಡ್ನಿರೋಗದಿಂದ ಬಳಲುತ್ತಿದ್ದ ಅವರು ತುಂಬದಿನಗಳಿಂದ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ರೋಗ ಉಲ್ಬಣವಾದ್ದರಿಂದ ನಿನ್ನೆ ಪುನಃ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಬೆಳಗ್ಗಾಗುವಾಗ ಅವರುಕೊನೆಯುಸಿರೆಳೆದರು. ಶವಸಂಸ್ಕಾರ ಕಾರ್ಯ ತಿರುವನಂತಪುರಂನಲ್ಲಿ ನಡೆಯಲಿದೆ.
2003ರಲ್ಲಿ ಲೀಡರ್ ಎನ್ನುವ ಸಿನೆಮಾದೊಂದಿಗೆ ಸ್ವತಂತ್ರ ನಿರ್ದೇಶಕರಾಗಿ ಮಳೆಯಾಳಂ ಸಿನೆಮಾರಂಗದಲ್ಲಿ ತನ್ನ ಛಾಪನ್ನು ಅಚ್ಚೊತ್ತಿದ್ದರು. ಪ್ರಥ್ವಿರಾಜ್ ಈ ಚಿತ್ರದೊಂದಿಗೆ ಸಿನೆಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರು. ಲೀಡರ್, ಹೀರೊ, ಡಿ.ಕಂಪೆನಿ, ಸಿಮ್, ಡೊಲ್ಫಿನ್ ಬಾರ್ ಚಿತ್ರಗಳನ್ನು ಅವರು ನಿರ್ದೇಶಿಸಿದ್ದಾರೆ. ಎ.ಕೆ. ಸಾಜನ್‌ರ ಚಿತ್ರಕಥೆಯಲ್ಲಿ ನಟ ಜಯರಾಂ ನಾಯಕರಾದ ಸತ್ಯ ಎನ್ನುವ ಸಿನೆಮಾ ನಿರ್ಮಾಣದ ಸಿದ್ಧತೆಯಲ್ಲಿ ತನ್ನನ್ನು ಅವರು ತೊಡಗಿಸಿಕೊಂಡಿದ್ದರು ಎಂದು ವರದಿ ತಿಳಿಸಿದೆ.
Next Story





