ಯುಎಇಯಲ್ಲಿ ಕಡಿಮೆಯಾಗಲಿದೆ ಹಜ್ ಖರ್ಚು !

ಅಬುಧಾಬಿ,ಮಾ. 13: ಯುಎಇಯಿಂದ ಹಜ್‌ಗೆ ತರೆಳುವ ಯಾತ್ರಾರ್ಥಿಗಳಿಗೆ ಖರ್ಚು ಗಣನೀಯವಾಗಿ ಕಡಿಮೆಯಾಗಲಿದೆ. ಹಜ್ ಆಪರೇಟರ್ ಗಳಿಗೆ ಸರಕಾರ ಕಡಿವಾಣ ಹಾಕಿದ್ದು, ಈವರ್ಷದ ಹಜ್ ನೋಂದಾವಣೆಯನ್ನು ಔಖಾಫ್( ವಕ್ಫ್) ಕೇಂದ್ರಗಳ ಮೂಲಕ ನಡೆಸಲು ತೀರ್ಮಾನಿಸಿದೆ. ರವಿವಾರದಿಂದ ನೋಂದಾವಣೆ ಆರಂಭಗೊಂಡಿದೆ.
ಬೆಳಗ್ಗೆ ಎಂಟು ಗಂಟೆಯಿಂದ ರಾತ್ರಿ ಎಂಟು ಗಂಟೆವರೆಗೆ ನೋಂದಾವಣೆಯ ಸಮಯ ನಿಗದಿಪಡಿಸಲಾಗಿದೆ. ಶುಕ್ರವಾರ ನೋಂದಾವಣೆಯಿಲ್ಲ. ಇಲ್ಲಿ ವಿದೇಶಿಯರು ಮತ್ತು ಸ್ವದೇಶಿಯರು ಕೂಡಾ ನೋಂದಾವಣೆ ಮಾಡಿಸಿಕೊಳ್ಳಬಹುದು. ನೋಂದಾವಣೆ ಮಾಡಿಸಿಕೊಳ್ಳಲು ಹೋಗುವವರು ಎಮಿರೇಟ್ಸ್ ಐಡಿ, ಪಾಸ್‌ಪೋರ್ಟ್ ಅಸಲಿ ಕಾಫಿಯನ್ನು ಹಾಜರು ಪಡಿಸಬೇಕಾಗಿದೆ. ದುಬೈ, ಶಾರ್ಜ ಸಹಿತ ಔಖಾಫ್‌ನ ಎಲ್ಲ ಕೇಂದ್ರಗಳಲ್ಲಿಯೂ , ಮಾರ್ಕ್ಸ್ ತಹಸೀಲ್‌ನ ಎಲ್ಲ ಶಾಖೆಗಳಲ್ಲಿ ನೋಂದಾವಣೆ ಸೌಲಭ್ಯವಿದೆ. ಔಖಾಫ್ ನೇತೃತ್ವದಲ್ಲಿ ಹಜ್ ನೋಂದಾವಣೆ ಸಾಧ್ಯವಾಗಿದ್ದರಿಂದ ಯಾತ್ರಾರ್ಥಿಗಳಿಗೆ ಹೆಚ್ಚಿನ ಸೌಲಭ್ಯಗಳು ದೊರಯುತ್ತಿದೆ. ಈ ಹಿಂದೆ ನೋಂದಾಯಿತ ಆಪರೇಟರ್ ಅಥವಾ ಏಜೆಂಟ್ ಮೂಲಕ ಹಜ್ ಯಾತ್ರೆಯನ್ನು ಯುಎಇಯಲ್ಲಿ ಈ ಹಿಂದೆ ಕೈಗೊಳ್ಳಬೇಕಾಗಿತ್ತು. ಇಂತಹ 144 ಆಪರೇಟರ್‌ಗಳು ಯುಎಇಯಲ್ಲಿದ್ದಾರೆ ಎಂದು ವರದಿ ತಿಳಿಸಿದೆ.





