ಗೋವಾ,ಮಣಿಪುರದಲ್ಲಿ ಮತದಾರರ ಆದೇಶವನ್ನು ಬಿಜೆಪಿ ಕಿತ್ತುಕೊಳ್ಳುತ್ತಿದೆ: ಪಿ.ಚಿದಂಬರಂ

ಹೊಸದಿಲ್ಲಿ,ಮಾ.13: ಗೋವಾ ಮತ್ತು ಮಣಿಪುರ ವಿಧಾನಸಭಾ ಚುನಾವಣೆಗಳಲ್ಲಿ ಎರಡನೇ ಸ್ಥಾನದಲ್ಲಿದ್ದರೂ ಅಲ್ಲಿ ಸರಕಾರ ರಚನೆಗೆ ಬಿಜೆಪಿ ಮುಂದಾಗಿರುವ ಹಿನ್ನೆಲೆಯಲ್ಲಿ ಮಾಜಿ ವಿತ್ತ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು, ಬಿಜೆಪಿಯು ಅವೆರಡೂ ರಾಜ್ಯಗಳಲ್ಲಿ ಮತದಾರರ ಆದೇಶವನ್ನು ಕಿತ್ತುಕೊಳ್ಳುತ್ತಿದೆ ಎಂದು ಆರೋಪಿಸಿ ಟ್ವೀಟಿಸಿದ್ದಾರೆ.
ಸ್ಥಾನಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿರುವ ಪಕ್ಷಕ್ಕೆ ಸರಕಾರ ರಚನೆಯ ಯಾವುದೇ ಹಕ್ಕು ಇಲ್ಲ ಎಂದು ಸೋಮವಾರ ಬೆಳಿಗ್ಗೆ ಟ್ವಿಟರ್ ಮೂಲಕ ಚಿದಂಬರಂ ಕಿಡಿಕಾರಿದ್ದಾರೆ.
ಗೋವಾ ಮತ್ತು ಮಣಿಪುರಗಳಲ್ಲಿ ಕಾಂಗ್ರೆಸ್ ಏಕೈಕ ಅತಿದೊಡ್ಡ ಪಕ್ಷವಾಗಿ ಮೂಡಿಬಂದಿದ್ದರೂ, ಬಿಜೆಪಿ ಇತರ ಸಣ್ಣಪುಟ್ಟ ಪಕ್ಷಗಳು ಮತ್ತು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಸರಕಾರ ರಚನೆಗೆ ಸಜ್ಜಾಗಿದೆ.
Next Story