ಉಳ್ಳಾಲ: ರೈಲು ಢಿಕ್ಕಿ ಹೊಡೆದು ವ್ಯಕ್ತಿ ಸಾವು

ಉಳ್ಳಾಲ, ಮಾ.13: ತೊಕ್ಕೊಟ್ಟು ಸಮೀಪ ರೈಲು ಢಿಕ್ಕಿ ಹೊಡೆದು ವ್ಯಕ್ತಿಯೊರ್ವ ಮೃತಪಟ್ಟಿರುವ ಘಟನೆ ಸೋಮವಾರ ಸಂಜೆ ನಡೆದಿದೆ.
ಮಂಗಳೂರಿನಿಂದ ಕೇರಳದ ಕಡೆಗೆ ಸಂಚರಿಸುತ್ತಿದ್ದ ರೈಲಿನ ಚಾಲಕ ತೊಕ್ಕೊಟ್ಟಿನ ರೈಲ್ವೇ ಹಳಿಯಲ್ಲಿ ಕುಳಿತಿದ್ದ ಕೂಲಿ ಕಾರ್ಮಿಕನನ್ನು ದೂರದಿಂದಲೇ ಗಮನಿಸಿ ಹಾರ್ನ್ ಹೊಡೆದಿದ್ದು, ಅಲ್ದದೆ ಹತ್ತಿರದಲ್ಲಿದ್ದ ಸಾರ್ವಜನಿಕರು ಬೊಬ್ಬೆ ಹೊಡೆದು ಕಾರ್ಮಿಕನನ್ನು ಬದಿಗೆ ಸರಿಯುವಂತೆ ಹೇಳಿದ್ದರು.
ಕೊನೆಗೆ ರೈಲು ನಿಲುಗಡೆಯಾದರೂ ನಿಗದಿತ ಸ್ಥಳದಲ್ಲಿ ನಿಲ್ಲಲು ನಿಯಂತ್ರಣ ಸಿಗದ ಪರಿಣಾಮ ಕಾರ್ಮಿಕನ ಮೇಲೆ ಹರಿದು ಸಾವು ಸಂಭವಿಸಿದೆ. ವ್ಯಕ್ತಿಯು ಪಾನಮತ್ತನಾಗಿ ರೈಲ್ವೆ ಹಳಿಯಲ್ಲಿ ಕುಳಿತ್ತಿದ್ದುದೇ ಘಟನೆಗೆ ಕಾರಣ ಎನ್ನಲಾಗುತ್ತಿದೆ.
ಉಳ್ಳಾಲ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು ರೈಲ್ವೇ ಪೊಲೀಸರಿಗೆ ಮಾಹಿತಿ ರವಾಣಿಸಿದ್ದಾರೆ.
ಮೃತ ಪಟ್ಟ ವ್ಯಕ್ತಿಯು ಹೊರರಾಜ್ಯದವನೆಂದು ತಿಳಿದು ಬಂದಿದ್ದು ಗುರುತು ಇನ್ನಷ್ಟೇ ಸಿಗಬೇಕಾಗಿದೆ.
Next Story





