ಸಂಬಂಧಿಗಳಿಂದಲೇ ಕತ್ತಿಯಿಂದ ಕಡಿದು ಹಲ್ಲೆ

ಸುಂಟಿಕೊಪ್ಪ, ಮಾ.13: ಹಣದ ವಿಚಾರವಾಗಿ ಮಾತಿಗೆ ಮಾತು ಬೆಳೆದು ಒಬ್ಬನ ಮೇಲೆ ನಾಲ್ವರು ಕತ್ತಿಯಿಂದ ಕಡಿದು ಗಾಯಗೊಳಿಸಿದ ಘಟನೆ ಸಮೀಪದ ಗದ್ದೆಹಳ್ಳದಿಂದ ವರದಿಯಾಗಿದೆ.
ಮರ ಕಡಿಯುವ ಕೆಲಸಕ್ಕೆಂದು ತರಿಕೇರಿಯ ದುಗುಲಪುರದಿಂದ ಸುಂಟಿಕೊಪ್ಪಕ್ಕೆ 2 ತಿಂಗಳ ಹಿಂದೆ ಬಂದಿದ್ದ ಸುಬ್ರಮಣಿ ಎಂಬುವವರು ತಮ್ಮ ಸಂಬಂಧಿಗಳಾದ ತಂಗವೇಲು,ಚಂದ್ರ ಎಂಬುವವರಿಗೆ ಸಾಲವಾಗಿ ಹಣವನ್ನು ನೀಡಿದ್ದರು ಎನ್ನಲಾಗಿದೆ.
ಸೋಮವಾರ ಬೆಳಗ್ಗೆ ಈ ಹಣವನ್ನು ಸುಬ್ರಮಣಿ ಇವರಿಬ್ಬರಲ್ಲಿ ಕೇಳಿದಾಗ ಮಾತಿಗೆ ಮಾತು ಬೆಳೆದು ತಂಗವೇಲು,ಚಂದ್ರ, ಅಯ್ಯನಾರ್, ಅರುಣ ಎಂಬುವವರು ಸುಬ್ರಮಣಿ ಮೇಲೆ ಏಕಾಏಕಿ ಕತ್ತಿಯಿಂದ ಕಡಿದು ತಲೆ, ಕೈ ಭಾಗಗಳಿಗೆ ತೀವೃ ಸ್ವರೂಪದ ಗಾಯಗೊಳಿಸಿದ್ದಾರೆ.
ಗಾಯಗೊಂಡ ಸುಬ್ರಮಣಿ ಸುಂಟಿಕೊಪ್ಪ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಮಣಿ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
Next Story





