ಸೌದಿ: ಓರ್ವ ಭಯೋತ್ಪಾದಕನ ಹತ್ಯೆ

ಜಿದ್ದಾ, ಮಾ. 13: ಕಾತಿಫ್‌ನ ಅವ್ವಮಿಯ್ಯ ಪಟ್ಟಣದಲ್ಲಿ ಭದ್ರತಾ ಸಿಬ್ಬಂದಿ ಮತ್ತು ನಾಗರಿಕರ ವಿರುದ್ಧ ದಾಳಿಗಳನ್ನು ನಡೆಸಿದ ಭಯೋತ್ಪಾದಕನೋರ್ವನನ್ನು ಸೌದಿ ಅರೇಬಿಯದ ಭದ್ರತಾ ಪಡೆಗಳು ಕೊಂದಿವೆ.
ಶಂಕಿತ ಭಯೋತ್ಪಾದಕರು ಅವ್ವಮಿಯ್ಯದ ಅಲ್-ಮಸವರ ಎಂಬಲ್ಲಿ ಭದ್ರತಾ ಸಿಬ್ಬಂದಿ ಮೇಲೆ ಗುಂಡು ಹಾರಿಸಿದವು. ಈ ಗುಂಡಿನ ಚಕಮಕಿಯಲ್ಲಿ ಪೊಲೀಸರಿಗೆ ಬೇಕಾದ ಓರ್ವ ಭಯೋತ್ಪಾದಕ ಹತನಾದನು ಎಂದು ಆಂತರಿಕ ಸಚಿವಾಲಯದ ವಕ್ತಾರ ಮೇಜರ್ ಜನರಲ್ ಮನ್ಸೂರ್ ಅಲ್-ತುರ್ಕಿ ಹೇಳಿದರು.
ಅಲ್-ಮಸಾವರದಲ್ಲಿ ನಿವಾಸಿಗಳು ತೊರೆದ ಮನೆಗಳಲ್ಲಿ ಅವಿತುಕೊಂಡಿದ್ದ ಕ್ರಿಮಿನಲ್‌ಗಳಿಗಾಗಿ ಭದ್ರತಾ ಪಡೆಗಳು ಶನಿವಾರ ಶೋಧ ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಅವರು ತಿಳಿಸಿದರು.
Next Story





