ಮಹಿಳೆ ಮಾನವೀಯತೆಯ ಶಿಲ್ಪಿ: ಡಾ.ಜುನೇದಾ ಸುಲ್ತಾನ್

ಉಡುಪಿ, ಮಾ.13: ಮಹಿಳೆಯರು ಒಂದು ಕುಟುಂಬದ ನಿರ್ವಹಣೆ ಯಿಂದ ಒಂದು ರಾಷ್ಟ್ರವನ್ನು ಮುನ್ನಡೆಸುವುದರ ಮೂಲಕ ಎಲ್ಲಾ ಕ್ಷೇತ್ರ ಗಳಲ್ಲೂ ಸಫಲರಾಗಿದ್ದಾರೆ. ಮಹಿಳೆಯರು ಮಾನವೀಯತೆಯ ಶಿಲ್ಪಿ ಎಂದು ಸಮಾಜ ಸೇವಕಿ ಡಾ.ಜುನೇದಾ ಸುಲ್ತಾನ್ ಹೇಳಿದ್ದಾರೆ.
ತೋನ್ಸೆ ಹೂಡೆ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಇತ್ತೀಚೆಗೆ ಆಯೋಜಿಸಲಾದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತ ನಾಡುತಿದ್ದರು. ಹೆಣ್ಣು ಮಕ್ಕಳಲ್ಲಿ ಹಲವಾರು ಪ್ರತಿಭೆಗಳಿರುತ್ತವೆ. ಅವರನ್ನು ಪ್ರೋತ್ಸಾಹಿಸುವುದರ ಮೂಲಕ ಆ ಪ್ರತಿಭೆಯನ್ನು ಹೊರಹಾಕಬೇಕಾಗಿದೆ ಎಂದರು.
ಸಾಲಿಹಾತ್ ಅರೇಬಿಕ್ ಕಾಲೇಜಿನ ಪ್ರಾಂಶುಪಾಲೆ ಕುಲ್ಸುಮ್ ಅಬೂ ಬಕ್ಕರ್ ಮಾತನಾಡಿ, ಮಹಿಳೆಯರು ತಮ್ಮ ಹಕ್ಕುಗಳ ಜೊತೆಗೆ ಹೊಣೆಗಾರಿಕೆ ಗಳನ್ನು ತಿಳಿದಿರಬೇಕು. ಬದುಕಿನಲ್ಲಿ ಉತ್ತಮ ಸಾಧನೆಯನ್ನು ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಜಮೀಲಾ ಇಸಾಕ್, ಮೆಹಜಬೀನ್ ಪಠಾಣ್, ಶಬಾನಾ ಮುಮ್ತಾಝ್ ಮೊದಲಾದವರು ಉಪಸ್ಥಿತರಿದ್ದರು. ಪದವಿ ಕಾಲೇಜಿನ ವಿದ್ಯಾರ್ಥಿನಿ ಸಫಾ ಕಿರಾತ್ ಪಠಿಸಿದರು. ರಾಬಿಯಾ ಸ್ವಾಗತಿಸಿದರು.
ಉಪನ್ಯಾಸಕಿ ಮಂಗಳಾ ಅತಿಥಿಗಳನ್ನು ಪರಿಚಯಿಸಿದರು, ಅಮ್ರಿನ್ ಕಾರ್ಯಕ್ರಮ ನಿರೂಪಿಸಿದರು, ಯಾಸ್ಮಿನ್ ವಂದಿಸಿದರು.







