ಕೊಲೆ ಆರೋಪಿಗಳ ಬಂಧನ

ಕುಣಿಗಲ್.ಮಾ.13:ಸಾಲದ ಹಣ ತಲುಪಿಸಲು ನೀಡಿದ ಹಣವನ್ನು ಇಸ್ಟೀಟ್ ಆಟವಾಡಿ ಕಳೆದ ವ್ಯಕ್ತಿಯನ್ನು ಸ್ನೇಹಿತರೊಂದಿಗೆ ಸೇರಿ ಕೊಲೆ ಮಾಡಿದ್ದ ಆರೋಪಿಗಳನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ.
ಕುಣಿಗಲ್ ತಾಲೂಕು ಕಡಸಿಂಗನಹಳ್ಳಿ ವಾಸಿಯಾದ ಕುಮಾರ್ ಎಂಬುವವರು ಸುರೇಶ್ ಎಂಬುವವರಿಗೆ ನೀಡಬೇಕಾಗಿದ್ದ ಹಣವನ್ನು ಶಿವರಾಮ್ ಎಂಬ ವ್ಯಕ್ತಿಯ ಮೂಲಕ ಕೊಟ್ಟು ಕಳುಹಿಸಿದ್ದು, ಆದರೆ ಹಣ ಸುರೇಶ್ ಅವರಿಗೆ ತಲುಪಿರಲಿಲ್ಲ. ಹಣವನ್ನು ಶಿವರಾಮ್ ಜೂಜಾಟ ವಾಡಿ ಸೋತಿದ್ದು ತಿಳಿದು ಆತನನ್ನು ಕೊಲೆ ಮಾಡುವ ಉದ್ದೇಶದಿಂದ ಮಾರ್ಚ್ 06 ರಂದು ಕುಮಾರನು ತನ್ನ ಸ್ನೇಹಿತರಾದ ಅಂಜಿತ್ ಕುಮಾರ್, ವಿಜಯಕುಮಾರ ರವರೊಂದಿಗೆ ಮಂಜುನಾಥನ ಕೆ.ಎ-05-ಎಜಿ-1662 ಕಾರಿನಲ್ಲಿ ಕಡಸಿಂಗನಹಳ್ಳಿಗೆ ಬಂದು ಬಿದಿರು ದೊಣ್ಣೆಯಿಂದ ಹೊಡೆದು ತೀರ್ವವಾಗಿ ಗಾಯಗೊಳಿಸಿ ಕೊಲೆ ಮಾಡಿ ಪರಾರಿಯಾಗಿದ್ದರು.
ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಆರೋಪಿಗಳಾದ ಕುಮಾರ್ (35), ಅಚಿಜಿತ್‌ಕುಮಾರ್ (21), ಮಂಜುನಾಥ್(27) ಮತ್ತು ವಿಜಯ್‌ಕುಮಾರ್ ಅವರುಗಳನ್ನು ಬಂದಿಸಿ ಕೃತ್ಯಕ್ಕೆ ಬಳಸಿದ್ದ ಕಾರು ಮತ್ತು ಬಿದಿರು ದೊಣ್ಣೆಯನ್ನು ವಶಪಡಿಸಿಕೊಂಡಿದ್ದಾರೆ.





