ಗ್ವಾಡರ್ ಬಂದರಿನಲ್ಲಿ ಚೀನಾದಿಂದ ಮರೀನ್ ಕಾರ್ಪ್‌ಗಳ ನಿಯೋಜನೆ

ಬೀಜಿಂಗ್, ಮಾ. 13: ವಿದೇಶಗಳಲ್ಲಿ ತನ್ನ ಬೆಳೆಯುತ್ತಿರುವ ಹಿತಾಸಕ್ತಿಗಳನ್ನು ರಕ್ಷಿಸುವುದಕಾಗಿ, ತನ್ನ ಮರೀನ್ ಕಾರ್ಪ್ (ನೌಕಾ ಸೈನಿಕರು)ಗಳ ಸಂಖ್ಯೆಯನ್ನು 20,000ದಿಂದ ಒಂದು ಲಕ್ಷಕ್ಕೆ ಹೆಚ್ಚಿಸಲು ಚೀನಾ ನಿರ್ಧರಿಸಿದೆ.
ಚೀನಾವು ತಾನು ನಿರ್ವಹಿಸುತ್ತಿರುವ ಬಂದರುಗಳಲ್ಲಿ ಮರೀನ್ ಕಾರ್ಪ್‌ಗಳನ್ನು ನಿಯೋಜಿಸಲು ಉದ್ದೇಶಿಸಿದೆ. ಈ ಪೈಕಿ ಪಾಕಿಸ್ತಾನದಲ್ಲಿರುವ ಆಯಕಟ್ಟಿನ ಗ್ವಾಡರ್ ಬಂದರು ಮತ್ತು ಹಿಂದೂ ಮಹಾಸಾಗರದ ಜಿಬೌಟಿಯಲ್ಲಿರುವ ಸೇನಾ ನೆಲೆ ಸೇರಿದೆ.
ಗ್ವಾಡರ್ ಬಂದರು ಹೋರ್ಮುಝ್ ಜಲಸಂಧಿಯ ಪಕ್ಕದಲ್ಲಿರುವ ಆಳ ಸಮುದ್ರ ಬಂದರು ಆಗಿದೆ. ಈ ಬಂದರು 46 ಬಿಲಿಯ ಡಾಲರ್ ವೆಚ್ಚದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರನ್ನು ಪಾಕ್ ಆಕ್ರಮಿತ ಕಾಶ್ಮೀರ ಮೂಲಕ ಚೀನಾದ ಕ್ಸಿನ್‌ಜಿಯಾಂಗ್‌ಗೆ ಸಂಪರ್ಕಿಸುತ್ತದೆ. ಪರ್ಸಿಯನ್ ಕೊಲ್ಲಿಯ ಒಳ ಹೊರಗೆ ಹೋಗುವ ಮಹತ್ವದ ತೈಲ ಮಾರ್ಗವೊಂದು ಬಂದರಿನೊಂದಿಗೆ ಸಂಪರ್ಕ ಹೊಂದಿದೆ.
Next Story





