ಸಾಗರ: ಬಸ್ ಹರಿದು ವ್ಯಕ್ತಿ ಮೃತ್ಯು
ಹಸಿರುಮಕ್ಕಿಯಲ್ಲಿ ನಡೆದ ಘಟನೆ
ಸಾಗರ, ಮಾ.13: ತಾಲೂಕಿನ ಹಸಿರುಮಕ್ಕಿಯಲ್ಲಿ ಬಸ್ ಮೈಮೇಲೆ ಹರಿದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ರವಿವಾರ ನಡೆದಿದೆ. ಮೃತ ವ್ಯಕ್ತಿ ಭದ್ರಾವತಿ ತಾಲೂಕಿನ ಮಾವಿನಕೆರೆ ನಿವಾಸಿ ರಂಗನಾಥ್ (52) ಎಂದು ಗುರುತಿಸಲಾಗಿದೆ. ರಂಗನಾಥ್ ಅವರು ಹಸಿರುಮಕ್ಕಿ ಲಾಂಚ್ ಇಳಿದು ಪುಟ್‌ಪಾತ್ ಮೇಲೆ ನಡೆದುಕೊಂಡು ಬರುತ್ತಿದ್ದಾಗ ಹಿಂದಿನಿಂದ ಬಂದ ಕೊಲ್ಲೂರು-ಸಾಗರ ಖಾಸಗಿ ಬಸ್ ಅವರ ಮೇಲೆ ಹರಿದಿದೆ ಎನ್ನಲಾಗಿದೆ.
ಘಟನೆಯಿಂದ ರಂಗನಾಥ್ ಸ್ಥಳದಲ್ಲಿಯೇ ಮೃತಟ್ಟರು ಎನ್ನಲಾಗಿದ್ದು, ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ರೊಚ್ಚಿಗೆದ್ದ ಜನರು ಖಾಸಗಿ ಬಸ್‌ನ ಚಾಲಕ ಮತ್ತು ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ್ದು, ಇಬ್ಬರೂ ಪರಾರಿಯಾಗಿದ್ದಾರೆ.
Next Story





