ಮರದಿಂದ ಬಿದ್ದು ಕಾರ್ಮಿಕನಿಗೆ ತೀವ್ರ ಗಾಯ
ಸುಂಟಿಕೊಪ್ಪ, ಮಾ.13: ಇಲ್ಲಿಗೆ ಸಮೀಪದ ಸುಂಟಿಕೊಪ್ಪ ಟಾಟಾ ಕಾಫಿ ತೋಟದಲ್ಲಿ ಕಾರ್ಮಿಕನೊಬ್ಬ ಮರದಿಂದ ಬಿದ್ದು ತೀವ್ರ ಗಾಯಗೊಂಡ ಘಟನೆ ಸೋಮವಾರ ನಡೆದಿದೆ.
ತೋಟದ ರೈಟರ್ ನೆಲೆಸಿರುವ ಮನೆಯ ಹಿಂಭಾಗದಲ್ಲಿದ್ದ ತೆಂಗಿನ ಮರಕ್ಕೆ ಹತ್ತಿದ್ದ ಸುರೇಶ್ ( 46) ಎಂಬ ಕಾರ್ಮಿಕ ಆಯತಪ್ಪಿ ಸುಮಾರು 30 ಅಡಿ ಎತ್ತರದಿಂದ ಬಿದ್ದ ಪರಿಣಾಮ ಆತನ ಸೊಂಟ ಮುರಿದಿದ್ದು, ಕೈ ಕಾಲುಗಳಿಗೆ ತೀವ್ರ ಸ್ವರೂಪದ ಪೆಟ್ಟಾಗಿದ್ದು, ಸುಂಟಿಕೊಪ್ಪ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು.
Next Story





