ಬಾಂಬಿಲ: ದಿಕ್ರ್ ಹಲ್ಕಾ, ಮಜ್ಲಿಸುನ್ನೂರಿನ ವಾರ್ಷಿಕೋತ್ಸವ

ಬಂಟ್ವಾಳ, ಮಾ. 13: ಮಜ್‌ಲಿಸ್ ತ್ತರೀಖತಿ ಶಾದಿಲಿಯ್ಯತ್ತಿಲ್ ಖಾದಿರಿಯ್ಯ ಇದರ ಆಧೀನದಲ್ಲಿ ಪ್ರತೀ ತಿಂಗಳಿಗೊಮ್ಮೆ ಬಾಂಬಿಲ ದರ್ಗಾದಲ್ಲಿ ನಡೆಸಿಕೊಂಡು ಬರುತ್ತಿರುವ ದಿಕ್ರ್ ಹಲ್ಕಾ ಹಾಗೂ ಮಜ್ಲಿಸುನ್ನೂರಿನ ವಾರ್ಷಿಕೋತ್ಸವ ಸಮ್ಮೇಳನವು ಶಂಸುಲ್ ಉಲಮಾ ವೇದಿಕೆ ಬಾಂಬಿಲದಲ್ಲಿ ರವಿವಾರ ನಡೆಯಿತು.
ವಾರ್ಷಿಕೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ಬಾಂಬಿಲ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಬಿ.ಎಂ.ಇಬ್ರಾಹೀಂ ಮುಸ್ಲಿಯಾರ್ ಧ್ವಜಾರೋಹಣ ಮಾಡುವ ಮೂಲಕ ಉದ್ಘಾಟಿಸಿದರು. ಬಳಿಕ ಸೈಯದ್ ಅಮೀರ್ ತಂಙಳ್ ಕಿನ್ಯ ಇವರ ನೇತೃತ್ವದಲ್ಲಿ ಬಾಂಬಿಲ ಮುಖಾಂ ಝಿಯಾರತ್ ಕಾರ್ಯಕ್ರಮ ನಡೆಯಿತು. ಹಾಗೆಯೇ ಮಧ್ಯಾಹ್ನ ತರ್ಕಿಯತ್ ಕ್ಯಾಂಪ್ ನೆರವೇರಿತು.
ಈ ಕಾರ್ಯಕ್ರಮವನ್ನು ಹನೀಫ್ ದಾರಿಮಿ ಸವಣೂರು ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಅಡ್ವಕೇಟ್ ಹನೀಫ್ ಹುದವಿ ದೇಲಂಪಾಡಿ ಮುಖ್ಯ ಪ್ರಭಾಷಣಗೈದರು. ಕಾಸಿಂ ದಾರಿಮಿ ಕಿನ್ಯ ವಿಷಯ ಮಂಡಿಸಿದರು. ವೇದಿಕೆಯಲ್ಲಿ ಮದ್ದ ಸದರ್ ಮುಅಲ್ಲಿಂ ಮುಹಮ್ಮದ್ ಅಲಿ, ಅಬ್ದುಲ್ ರಹ್‌ಮಾನ್ ಅಶ್ಫಕ್, ಕೈಲಾರ್ ಮದರಸ ಸದರ್ ಮುಅಲ್ಲಿಂ ಫಾರೂಕ್ ಮೌಲವಿ ಉಪಸ್ಥಿತರಿದ್ದರು. ಜಾಬಿರ್ ಫೈಝಿ ಬನಾರಿ ದುಅ ನೆರವೇರಿಸಿ ಸ್ವಾಗತಿಸಿದರು.
ಅಸರ್ ನಮಾರ್ ಬಳಿಕ ಲೊರೆಟ್ಟೊ ಪದವು ಖತೀಬ್ ಅಬ್ದುಲ್ಲಾ ಮುಸ್ಲಿಯಾರ್ ನೇತೃತ್ವದಲ್ಲಿ ಮೌಲಿದ್ ಪಾರಾಯಣ ನಡೆದರೆ ಸಂಜೆ ನಡೆದ ಉಲಮಾ ಸಾದಾತ್ ಸಂಗಮ ಕಾರ್ಯಕ್ರಮ ನಡೆಯಿತು. ಮಗ್ರೀಬ್ ನಮಾರ್ ಬಳಿಕ ಶಾದುಲಿಯ್ಯತುಲ್ ಖಾದಿರಿಯ ಆಧ್ಯಾತ್ಮಿಕ ಸಂಗಮ ಹಾಗೂ ಬೃಹತ್ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಅತ್ತಿಪಟ್ಟ ಉಸ್ತಾದ್‌ರ ಪುತ್ರ ಅಬ್ದುಲ್ ವಾಹಿದ್ ಫೈಝಿ ಹಾಗೂ ಸೈಯದ್ ಪೂಕೋಯ ತಂಙಳ್ ಮತ್ತು ಸೈಯದ್ ಬಾಪುಟ್ಟಿ ತಂಙಳ್ ನೇತೃತ್ವದಲ್ಲಿ ಬೃಹತ್ ದ್ಸಿಕ್ರ್ ಹಲ್ಕಾ ಹಾಗೂ ಮಜ್ಲಿಸುನ್ನೂರ್ ನೆರವೇರಿತು.
ಈ ಸಂದರ್ಭದಲ್ಲಿ ಖಾಝಿ ಪೈಯ್ಯಕ್ಕಿ ಉಸ್ತಾದ್, ತಾಣಲೂರು ಉಪ್ಪಾಪ ಅಬ್ದುಲ್ ಅಝೀರ್ ಫೈಝಿ, ಸಮಸ್ತ ಉಪಾಧ್ಯಕ್ಷ ಕೆ.ಪಿ.ಅಬ್ದುಲ್ ಜಬ್ಬಾರ್ ಉಸ್ತಾದ್, ಜೊತೆ ಕಾರ್ಯದರ್ಶಿ ಕೊಯ್ಯೋಡು ಉಮರ್ ಮುಸ್ಲಿಯಾರ್, ಉಸ್ಮಾನ್ ಫೈಝಿ ತೋಡಾರ್, ಮಾರಿಪಳ್ಳ ಜುಮಾ ಮಸೀದಿ ಖತೀಬ್ ಖಲೀಲುರ್ರಹ್ಮಾನ್ ದಾರಿಮಿ, ಬಂಟ್ವಾಳ ಜುಮಾ ಮಸೀದಿ ಖತೀಬ್ ಅನ್ಸಾರುದ್ದೀನ್ ಫೈಝಿ ಅಲ್ ಬುರ್ಹಾನಿ, ನಾಟೆಕಲ್ ಶಂಸುಲ್ ಉಲೆಮಾ ಅಕಾಡಮಿ ಪ್ರೊಫೆಸರ್ ಸುಲೈಮಾನ್ ಫೈಝಿ, ಸೈಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಪೊಸೋಟು, ಸೈಯದ್ ಅಲೀ ತಂಙಳ್ ಕರಾವಳಿ, ಸೈಯದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ, ಸೈಯದ್ ತ್ವಾಹ ಜಿಫ್ರಿ ತಂಙಳ್ ಡಿಐಸಿ ಬೆಳ್ತಂಗಡಿ, ಸೈಯದ್ ಅನಸ್ ತಂಙಳ್ ಗಂಡಿಬಾಗಿಲು, ಸೈಯನ್ ಜುನೈದ್ ಜಿಫ್ರಿ ತಂಙಳ್ ಆತೂರು, ಬಾಂಬಿಲ ಜುಮಾ ಮಸೀದಿ ಖತೀಬ್ ಬಿ.ಎಂ.ಸಿರಾಜುದ್ದೀನ್ ಫೈಝಿ, ದಾವೂದ್ ದಾರಿಮಿ ಅಸ್ರರ್ ನಗರ, ಅಶ್ರಫ್ ಫೈಝಿ ಪುಂಜಾಲಕಟ್ಟೆ, ಬಂಟ್ವಾಳ ಜುಮಾ ಮಸೀದಿ ಅಧ್ಯಕ್ಷ ಇಸ್ಮಾಯೀಲ್ ಅರಬಿ, ಎಂಜೆಎಂ ಬಾಂಬಿಲ ಕಾರ್ಯದರ್ಶಿ ಸಿರಾಜುದ್ದೀನ್, ಮದ್ದ ದಾರುಸ್ಸಲಾಂ ಮದರಸ ಅಧ್ಯಕ್ಷ ಹಂಝ ಎಂ., ಕೈಲಾರ್ ದಾರುಸ್ಸಲಾಂ ಮದರಸ ಅಧ್ಯಕ್ಷ ಅಬ್ದುಲ್ ಕರೀಮ ಸಹಿತ ಮೊದಲಾದವರು ಉಪಸ್ಥಿತರಿದ್ದರು.
ದೂಮಳಿಕೆ ಖತೀಬ್ ಆದಂ ಮುಸ್ಲಿಯಾರ್ ಎಲ್ಲ ಕಾರ್ಯಕ್ರಮಗಳನ್ನು ನಿರೂಪಿಸಿದರು.







