ಮೂರುವರ್ಷದ ಹೆಣ್ಣುಮಗುವಿಗೆ ಕಿರುಕುಳ ನೀಡಿದ 15ವರ್ಷದ ಬಾಲಕ !

ಕೇಳಗಂ(ಕಣ್ಣೂರ್) ಮಾ.14: ಕಾಣಿಚ್ಚಾರ್‌ನಲ್ಲಿ ಮೂರುವರೆ ವರ್ಷದ ಹೆಣ್ಣುಮಗುವಿಗೆಲೈಂಗಿಕ ಕಿರುಕುಳ ನೀಡಿದ 15 ವರ್ಷದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದಿವಾಸಿ ಕಾಲನಿಯ ಮೂರುವರೆ ವರ್ಷದ ಹೆಣ್ಣುಮಗು ಸ್ವಂತ ಮಾವನಿಂದ ಲೈಂಗಿಕ ಕಿರುಕುಳಕ್ಕೀಡಾಗಿದ್ದಾಳೆ.
ಪೆರಾವೂರ್ ಆಸ್ಪತ್ರೆಗೆ ಚಿಕಿತ್ಸೆಗೆ ಮಗುವನ್ನು ಕರೆದುಕೊಂಡು ಹೋದಾಗ ವೈದ್ಯರು ವಿಷಯವನ್ನು ತಿಳಿಸಿದ್ದಾರೆ. ನಂತರತನಿಖೆನಡೆಸಿದಾಗ ಶಾಲಾ ವಿದ್ಯಾರ್ಥಿ ಹದಿನೈದು ವರ್ಷದ ಹುಡುಗ ತಪ್ಪಿತಸ್ಥ ಎಂದು ತಿಳಿದು ಬಂದಿತ್ತು. ನಂತರ ಪೊಲೀಸರು ಅವನನ್ನು ಬಂಧಿಸಿದ್ದಾರೆ. ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಕೇಳಗಂ ಪೊಲೀಸರು ಬಂಧಿಸಿದ ಹದಿನೈದು ವರ್ಷದ ಬಾಲಕನನ್ನು ಜುವೆನೈಲ್ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗುವುದು. ಮಗುವಿನ ತಾಯಿ ಕಿರುಕುಳ ನೀಡುವುದನ್ನು ತಾನು ನೋಡಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
Next Story





