ಮದುವೆ ಜಾಹೀರಾತು ನೀಡಿ ಲೈಂಗಿಕ ಕಿರುಕುಳ: ಆರೋಪಿ ಬಂಧನ

ಕೊಚ್ಚಿ,ಮಾ. 14: ಮರು ವಿವಾಹ ಜಾಹಿರಾತು ನೀಡಿ ಹಲವಾರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿ, ಹಣ ಮತ್ತು ಚಿನ್ನವನ್ನು ಅಪಹರಿಸುವ ವ್ಯಕ್ತಿಯನ್ನುಪೊಲೀಸರು ಬಂಧಿಸಿದ್ದಾರೆ. ಪಾಲಕ್ಕಾಡ್ ವಲ್ಲಪ್ಪುಯ ಕಿಯಕ್ಕೇಪ್ಪಾಟ್ಟುತೊಡಿ ಮಜೀದ್ (42) ಪೊಲೀಸರ ಬಲೆಗೆ ಬಿದ್ದ ವ್ಯಕ್ತಿಯಾಗಿದ್ದಾನೆ. ಈಗ ಕೋಟ್ಟಕ್ಕಲ್ ವೆಟ್ಟಿಚ್ಚಿರದಲ್ಲಿ ವಾಸವಿರುವ ಈತನ ವಿರುದ್ಧ ಚೇರ್ತಲದ ಮಹಿಳೆ ನೀಡಿದ ದೂರಿನ ಪ್ರಕಾರ ಪೊಲೀಸರು ಬಂಧಿಸಿದ್ದಾರೆ. ಮಲಪ್ಪುರಂ,ಪೆರಿಂದಲ್ಮಣ್ಣ, ಕೋಟ್ಟಕ್ಕಲ್, ನಿಲಂಬೂರ್, ಕೋಟ್ಟಯಂ, ಮುಳಂದುರ್ತಿ ಮುಂತಾದ ಠಾಣೆಗಳಲ್ಲಿ ಈತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಈತ ಪೆರುಂಬಾವೂರ್, ಕೋಟ್ಟಕ್ಕಲ್, ಚಿರಯಿನ್‌ಕೀಯ್, ಕಟುತುರ್ತಿ ಇಡಪ್ಪಳ್ಳಿ ಮುಂತಾದಲ್ಲಿ ಇದೇ ರೀತಿಯ ವಂಚನೆಯನ್ನು ನಡೆಸಿದ್ದಾನೆಂದು ಪೊಲೀಸರಿಗೆ ಮಾಹಿತಿ ಲಭಿಸಿದೆ.
ಚೇರ್ತಲದ ಮಹಿಳೆಯನ್ನು ಮಲಪ್ಪುರಂ ಅಂಙಡಿ ಪುರಂ ಲಾಡ್ಜ್‌ಗೆ ಕರೆತಂದು ಲೈಂಗಿಕ ಕಿರುಕುಳ ನೀಡಿ ಚಿನ್ನಾಭರಣವನ್ನು ಅಪಹರಿಸಿದ ಪ್ರಕರಣದಲ್ಲಿ ಈತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಕರೆತಂದ ಮಹಿಳೆಯ ಪತಿ ತನ್ನ ಪತ್ನಿ ಕಾಣೆಯಾಗಿದ್ದಾಳೆಂದು ದೂರು ನೀಡಿದ್ದರು. ಪೊಲೀಸರು ತನ್ನನ್ನು ಹುಡುಕಾಡುತ್ತಿದ್ದಾರೆಂದುಗೊತ್ತಾದ ಮಹಿಳೆ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಆದರೆ ಪತಿಯೊಂದಿಗೆ ಹೋಗಲು ಮಹಿಳೆ ನಿರಾಕರಿಸಿದ್ದರು. ಪತಿಯ ಗೆಳೆಯ ಪ್ರಶ್ನಿಸಿದಾಗ ತಾನು ಲೈಂಗಿಕ ಕಿರುಕುಳಕ್ಕೊಳಗಾದದ್ದು ಗೊತ್ತಾಗಿತ್ತು. ಮಾನಸಿಕ ಅಸ್ವಸ್ಥೆಯಾಗಿದ್ದು ಅದಕ್ಕೆ ಮಹಿಳೆ ಔಷಧ ಸೇವಿಸುತ್ತಿದ್ದರು. ಪತಿ ತನ್ನನ್ನು ಚಿಕಿತ್ಸೆಗೆ ಕರೆದೊಯ್ಯತ್ತಾರೆ ಎನ್ನುವ ದ್ವೇಷದಲ್ಲಿ ಮರುವಿವಾಹ ಜಾಹೀರಾತಿಗೆ ಫೋನ್‌ಕರೆಮಾಡಿದ್ದರು. ವಧು ಬೇಕಾಗಿದೆ ಜಾಹೀರಾತಿಗೆ ಫೋನ್ ಮಾಡಿದಾಗ ಅರೋಪಿ ಮಜೀದ್ ನಿರಂತರ ಫೋನ್ ಮಾಡಿಮಹಿಳೆಯನ್ನು ಉಪಾಯವಾಗಿ ಲಾಡ್ಜ್ ಗೆ ಕರೆತಂದು ಲೈಂಗಿಕ ಕಿರುಕುಳ ನೀಡಿದ್ದ. ನಂತರ ಮಹಿಳೆಯ ಚಿನ್ನಾಭರಣವನ್ನುಉಪಾಯವಾಗಿ ದೋಚಿದ್ದ.
ಆರೋಪಿ ದೋಚುವ ಚಿನ್ನವನ್ನು ಗೆಳೆಯ ರಝಾಕ್ ಎಂಬಾತನೊಂದಿಗೆ ಮಾರಲು ನೀಡುತ್ತಿದ್ದ. ಮಲಪ್ಪುರಂನ ರಝಾಕ್‌ನನ್ನು ಪೊಲೀಸರು ಹುಡುಕುತ್ತಿದ್ದಾರೆ. ಹಲವು ಬಾರಿ ಜೈಲು ಶಿಕ್ಷೆಯಾದ ಈತ ತನ್ನ 22 ವರ್ಷಗಳಿಂದ ವಂಚನೆ ಆರಂಭಿಸಿದ್ದಾನೆ. ಇಷ್ಟರಲ್ಲಿ ಹತ್ತು ಮದುವೆಯನ್ನೂ ಮಾಡಿಕೊಂಡಿದ್ದಾನೆ. ಮಲಪ್ಪುರಂನ ಪತ್ರಿಕೆ ಕಚೇರಿಯವರಿಗೆ ಈತ ವಂಚಕನೆಂದು ಅರಿವಿದ್ದುದರಿಂದ ಈತ ಚೆರ್ಪುಳಶ್ಶೇರಿಗೆ ಹೋಗಿ ಜಾಹೀರಾತು ನೀಡುತ್ತಿದ್ದ. ಬ್ರೋಕರ್‌ಗಳ ಮೂಲಕವೂ ಈತ ವಂಚನೆ ನಡೆಸಿದ್ದಾನೆ. ಸಂಬಂಧಿಕರು ಎಂದು ಕೆಲವರು ಮುಂದೆ ನಿಲ್ಲಿಸಿ ಕೃತ್ಯವೆಸಗುತ್ತಿದ್ದ. ವರದಕ್ಷಿಣೆಯ ಹಣದಲ್ಲಿ ಇವರಿಗೆ ಆತ 50,000ರೂಪಾಯಿ ನೀಡುತ್ತಿದ್ದ. ಆರೋಪಿ ವಿರುದ್ಧ ಕಾರ್ಯಾಚರಣೆಯಲ್ಲಿ ಎಸ್ಸೈಗಳಾದ ಸಿಲ್ವೆಸ್ಟರ್, ಜೋಸೆಫ್ ಝಕರಿಯ, ಎಎಸೈ ಎನ್.ಎಚ್ ರಫೀಕ್, ಸಿಪಿಐ ಅನಿಲ್, ರಿಯಾಝ್ ಭಾಗವಹಿಸಿದ್ದರು. ಆರೋಪಿಯನ್ನು ನ್ಯಾಯಲಯಕ್ಕೆಹಾಜರುಪಡಿಸಲಾಗಿದ್ದು, ರಿಮಾಂಡ್ ವಿಧಿಸಿದೆ ಎಂದು ವರದಿ ತಿಳಿಸಿದೆ.







