ಎರಡನೆ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; ಅಧ್ಯಾಪಕ ಭೂಗತ!

ಚೇರ್ಪಳಶ್ಶೇರಿ(ಪಾಲಕ್ಕಾಡ್), ಮಾ. 14: ಎರಡನೆ ಕ್ಲಾಸು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿ ಅಧ್ಯಾಪಕ ತಪ್ಪಿಸಿಕೊಂಡಿದ್ದು ಪೊಲೀಸರು ಹುಡುಕುತ್ತಿದ್ದಾರೆ. ವಾಳಂಚೇರಿ ಕೈಪ್ಪುರಂನ ಅಧ್ಯಾಪಕ ವಿ.ಪಿ. ಶಶಿಕುಮಾರ್ ಎಂಬಾತ ಮಗುವಿಗೆ ಕಿರುಕುಳ ನೀಡಿದ ಆರೋಪಿಯಾಗಿದ್ದಾನೆ. ಘಟನೆ ಮಾರ್ಚ್ ಎಂಟಕ್ಕೆ ನಡೆದಿದೆ.
ಮಗುವಿನ ಪೋಷಕರು ನೀಡಿದ ದೂರಿನ ಪ್ರಕಾರ ಸ್ಕೂಲ್ ಅಧ್ಯಾಪಕ, ರಕ್ಷಕ ಸಮಿತಿ ಚೈಲ್ಡ್ ಲೈನ್‌ಗೆ ದೂರು ನೀಡಿದ್ದರು. ನಂತರ ಚೆರ್ಪುಳಶ್ಶೇರಿ ಪೊಲೀಸ್ ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಕಾಣೆಯಾದ ಅಧ್ಯಾಪಕನನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಯೂತ್ ಕಾಂಗ್ರೆಸ್ ಕೂಡಲೇ ಆರೋಪಿಯನ್ನುಬಂಧಿಸಬೇಕೆಂದು ಆಗ್ರಹಿಸಿ ಇಂದು ಪೊಲೀಸ್ ಠಾಣೆಗೆ ಮಾರ್ಚ್ ನಡೆಸಲಿದ್ದೇವೆ ಎಂದು ತಿಳಿಸಿದೆ ಎಂದು ವರದಿಯಾಗಿದೆ.
Next Story