ಎಂಸಿಡಿ ಚುನಾವಣೆಯಲ್ಲಿ ಇವಿಎಂ ಬೇಡ:ಚು.ಆಯೋಗಕ್ಕೆ ಕೇಜ್ರಿವಾಲ್ ಒತ್ತಾಯ

ಹೊಸದಿಲ್ಲಿ,ಮಾ.14: ಮುಂಬರಲಿರುವ ದಿಲ್ಲಿ ಮಹಾನಗರ ಪಾಲಿಕೆ (ಎಂಸಿಡಿ) ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳನ್ನು ಬಳಸದಂತೆ ಆಗ್ರಹಿಸಿ ದಿಲ್ಲಿ ಮುಖ್ಯಮಂತ್ರಿ ಹಾಗೂ ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಚುನಾವಣಾ ಆಯೋಗಕ್ಕೆ ಪತ್ರವನ್ನು ಬರೆದಿದ್ದಾರೆ.
ಕೇಜ್ರಿವಾಲ್ ಅವರ ಆಗ್ರಹವನ್ನು ಪುನರುಚ್ಚರಿಸಿರುವ ದಿಲ್ಲಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ಮಾಕೆನ್ ಅವರು, ಮತಪತ್ರಗಳ ಮೂಲಕವೇ ಎಂಸಿಡಿ ಚುನಾವಣೆಗಳನ್ನು ನಡೆಸುವಂತೆ ದಿಲ್ಲಿ ಮುಖ್ಯಮಂತ್ರಿಗಳನ್ನು ಸರಣಿ ಟ್ವೀಟ್‌ಗಳ ಮೂಲಕ ಕೋರಿದ್ದಾರೆ.
Next Story