ಮೂಡುಬಿದಿರೆ : ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ

ಮೂಡುಬಿದಿರೆ,ಮಾ.14: ವಿವಾಹಿತರೊಬ್ಬರು ಮನೆಯ ಪಕ್ಕಾಸಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡುಕೊಣಾಜೆ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಮೂಡುಕೊಣಾಜೆಯ ತಿಬಾರಿಬೆಟ್ಟು ಕೇಶವ ೂಜಾರಿ(43)ಎಂದು ಗುರುತಿಸಲಾಗಿದೆ.
ಕುಡಿತದ ಚಟದಿಂದಾಗಿ ಕೇಶವ ಪೂಜಾರಿ ತನ್ನ ಪತ್ನಿಯೊಂದಿಗೆ ಪದೇ ಪದೇ ಜಗಳ ನಡೆಸುತ್ತಿದ್ದನೆಂದು ತಿಳಿದುಬಂದಿದೆ. ಭಾನುವಾರ ಈತನ ಪತ್ನಿ ಸೀಮಂತ ಕಾರ್ಯಕ್ರಮಕ್ಕೆ ಹೊರ ಹೋಗಿದ್ದರೆ ಮಕ್ಕಳು ಕೆಟರಿಂಗ್ ಕೆಲಸ ನಿಮಿತ್ತ ಹೋಗಿದ್ದರು.
ಮನೆಯಲ್ಲಿ ಒಂಟಿಯಾಗಿದ್ದ ಕೇಶವ ಪಕ್ಕಾಸಿಗೆ ಬಟ್ಟೆಯನ್ನು ಕಟ್ಟಿ ಅದರ ಇನ್ನೊಂದು ತುದಿಯನ್ನು ಕುತ್ತಿಗೆಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿದೆ. ನನ್ನ ಸಾವಿಗೆ ನಾನೇ ಕಾರಣ ಎಂದು ಅವರು ಡೆತ್‌ನೋಟ್ ಬರೆದಿಟ್ಟಿದ್ದರು.
ಮೂಡುಬಿದಿರೆ ಪೊಲೀಸರು ಪ್ರಕಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Next Story





