ಮಾ.15: ನೌಶಾದ್ ಬಾಖವಿ ಮಂಗಳೂರಿಗೆ

ಮಂಗಳೂರು, ಮಾ.14: ಸುನ್ನಿ ಸಂದೇಶ ಮಾಸ ಪತ್ರಿಕೆ ವತಿಯಿಂದ ಮಾ.15ರಂದು ಅಪರಾಹ್ನ 3ಕ್ಕೆ ನಗರದ ಕಂಕನಾಡಿಯ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಹಾಲ್‌ನಲ್ಲಿ ಮಜ್ಲಿಸುನ್ನೂರು ಕಾರ್ಯಕ್ರಮ ಹಾಗೂ ಜಲದಾನ ಮಹಾದಾನ ಅಭಿಯಾನ ಮತ್ತು ನೌಶಾದ್ ಬಾಖವಿಯ ನೆಹರೂ ಮೈದಾನ ಕಾರ್ಯಕ್ರಮದ ಡಿವಿಡಿ ಮತ್ತು ಆಲ್ಬಂ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ಸಮಸ್ತ ಉಪಾಧ್ಯಕ್ಷ ಜಬ್ಬಾರ್ ಉಸ್ತಾದ್, ಸಮಸ್ತ ತಿರುವನಂತಪುರಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಎಂ.ನೌಶಾದ್ ಬಾಖವಿ, ಮಜ್ಲಿಸುನ್ನೂರು ಕೇಂದ್ರೀಯ ಕಾರ್ಯದರ್ಶಿ ಹಸನ್ ಸಖಾಫಿ ಪೂಕೋಟೂರ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಮುಸ್ತಫಾ ಫೈಝಿ ತಿಳಿಸಿದ್ದಾರೆ.
Next Story





