ರಕ್ಷಣಾ ಸಚಿವರಾಗಿ ಜೇಟ್ಲಿ ಅಧಿಕಾರ ಸ್ವೀಕಾರ
.jpg)
ಹೊಸದಿಲ್ಲಿ,ಮಾ.14: ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮಂಗಳವಾರ ರಕ್ಷಣಾ ಸಚಿವಾಲಯದ ಹೆಚ್ಚುವರಿ ಅಧಿಕಾರವನ್ನು ವಹಿಸಿಕೊಂಡರು. 2014ರಲ್ಲಿ ವಿತ್ತ ಖಾತೆಯ ಜೊತೆಗೆ ಆರು ತಿಂಗಳ ಕಾಲ ರಕ್ಷಣಾ ಖಾತೆಯನ್ನೂ ಅವರು ನಿಭಾಯಿಸಿದ್ದರು.
ಮನೋಹರ ಪಾರಿಕ್ಕರ್ ಅವರು ಗೋವಾದ ನೂತನ ಮುಖ್ಯಮಂತ್ರಿಯಾಗಲು ರಕ್ಷಣಾ ಸಚಿವ ಸ್ಥಾನಕ್ಕೆ ಸೋಮವಾರ ರಾಜೀನಾಮೆಯನ್ನು ಸಲ್ಲಿಸಿದ ಬಳಿಕ ಈ ಖಾತೆಯ ನ್ನು ಜೇಟ್ಲಿಯವರಿಗೆ ವಹಿಸಲಾಗಿತ್ತು. ಆಗ ಗೋವಾದ ಮುಖ್ಯಮಂತ್ರಿಯಾಗಿದ್ದ ಪಾರಿಕ್ಕರ್ ಅವರು ರಕ್ಷಣಾ ಸಚಿವರಾಗಿ ಅಧಿಕಾರ ಸ್ವೀಕರಿಸುವ ಮುನ್ನ 2014,ಮೇ 26ರಿಂದ ನ.9ರವರೆಗೆ ಈ ಸಚಿವಾಲಯದ ಹೊಣೆಯನ್ನು ಜೇಟ್ಲಿ ವಹಿಸಿಕೊಂಡಿದ್ದರು.
ವಿತ್ತ ಮತ್ತು ರಕ್ಷಣೆ ಈ ಎರಡೂ ಸಚಿವಾಲಯಗಳನ್ನು ಜೇಟ್ಲಿ ಎಷ್ಟು ಅವಧಿಯ ವರೆಗೆ ನಿರ್ವಹಿಸಲಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ.
Next Story