ಪ್ರಪ್ರಥಮ ಗರ್ಲ್ಸ್ ಕೌನ್ಸಿಲ್‌ಗೆ ಚಾಲನೆ ನೀಡಿದ ಸೌದಿ ಅರೇಬಿಯಾ
ಚರ್ಚೆಗೆ ಕಾರಣವಾದ ಮಹಿಳೆಯರ ಅನುಪಸ್ಥಿತಿ

ಜಿದ್ದಾ, ಮಾ. 14: ಸಾರ್ವಜನಿಕ ಬದುಕಿನಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ಉದ್ದೇಶದೊಂದಿಗೆ ಸೌದಿ ಅರೇಬಿಯವು ಅಲ್-ಕಾಸಿಮ್ ರಾಜ್ಯದಲ್ಲಿ ಮಹಿಳಾ ಆಯೋಗವೊಂದನ್ನು ರಚಿಸಿದೆ.ಆದರೆ, ಈ ಆಯೋಗದಲ್ಲಿ ಮಹಿಳೆಯರೇ ಇಲ್ಲದಿರುವುದು ಚರ್ಚೆಗೆ ಕಾರಣವಾಗಿದೆ.
ಕಾಸಿಮ್ ಮಹಿಳಾ ಆಯೋಗದ ಮೊದಲ ಸಭೆಯ ಚಿತ್ರಗಳನ್ನು ಬಿಡುಗಡೆ ಮಾಡಲಾಗಿದ್ದು, ವೇದಿಕೆಯಲ್ಲಿ 13 ಪುರುಷರು ಕಾಣಿಸುತ್ತಾರೆ, ಒಬ್ಬರಾದರೂ ಮಹಿಳೆಯರಿಲ್ಲ.
ಮಹಿಳೆಯರು ಇನ್ನೊಂದು ಕೋಣೆಯಲ್ಲಿದ್ದರು ಹಾಗೂ ಅವರ ನಡುವೆ ವೀಡಿಯೊ ಸಂಪರ್ಕ ಇತ್ತು ಎಂಬಂತೆ ಅನಿಸುತ್ತದೆ.
ಮಹಿಳಾ ಆಯೋಗದ ಸಭೆಯ ಅಧ್ಯಕ್ಷತೆಯನ್ನು ಕಾಸಿಮ್ ಗವರ್ನರ್ ರಾಜಕುಮಾರ ಫೈಸಲ್ ಬಿನ್ ಮಿಶಲ್ ಬಿನ್ ಸೌದ್ ಅವರ ಪತ್ನಿ ರಾಜಕುಮಾರಿ ಅಬಿರ್ ಬಿಂತ್ ಸಲ್ಮಾನ್ ವಹಿಸಿದ್ದರು. ಆದರೆ, ಚಿತ್ರದಲ್ಲಿ ಅವರು ಕಾಣುವುದಿಲ್ಲ.
Next Story





