ಚಿಕಿತ್ಸೆಯಿಂದ ಅಸಮಾಧಾನ: ನರ್ಸ್‌ಗೆ ಬೆಂಕಿ ಹಚ್ಚಿ ಕೊಂದ ವೃದ್ಧ
ಜೆರುಸಲೇಂ, ಮಾ. 14: ತನಗೆ ನೀಡಿದ ಚಿಕಿತ್ಸೆ ಸರಿಯಾಗಲಿಲ್ಲ ಎಂಬ ಆಕ್ರೋಶದಿಂದ ವೃದ್ಧನೊಬ್ಬ ಕ್ಲಿನಿಕ್‌ನಲ್ಲಿ ನರ್ಸ್‌ನ್ನು ಜೀವಂತ ಸುಟ್ಟು ಹಾಕಿದ ಘಟನೆ ಮಧ್ಯ ಜೆರುಸಲೇಂನಲ್ಲಿ ಮಂಗಳವಾರ ನಡೆದಿದೆ.
ಸುಮಾರು 80 ವರ್ಷದ ವ್ಯಕ್ತಿ ಘಟನೆಯ ಬಳಿಕ ತನ್ನ ಕಾರ್‌ನಲ್ಲಿ ಪರಾರಿಯಾದನು. ಆದರೆ, ಬಳಿಕ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಸುಮಾರು 40ರ ಹರಯದ ಮಹಿಳೆ ಪ್ರಾಣ ಕಳೆದುಕೊಂಡಿದ್ದಾರೆ.
‘‘ಹಾಲನ್‌ನಲ್ಲಿರುವ ಕ್ಲಿನಿಕ್‌ಗೆ ಈ ವ್ಯಕ್ತಿಯು ಚಿಕಿತ್ಸೆಗಾಗಿ ಹೋದನು. ಚಿಕಿತ್ಸೆಯಿಂದ ಆತನಿಗೆ ಸಮಾಧಾನವಾಗಲಿಲ್ಲ. ಮಾತಿನ ಚಕಮಕಿಯ ಬಳಿಕ ಆತ ದಹನಶೀಲ ದ್ರವವನ್ನು ನರ್ಸ್ ಮೇಲೆ ಸುರಿದು ಬೆಂಕಿಕೊಟ್ಟನು’’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
Next Story





