Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಸಂವಿಧಾನದ ಮೌಲ್ಯಗಳನ್ನು ಕಟ್ಟಿಕೊಡಲು...

ಸಂವಿಧಾನದ ಮೌಲ್ಯಗಳನ್ನು ಕಟ್ಟಿಕೊಡಲು ಸರಕಾರಿ ಶಾಲೆಗಳಿಂದ ಮಾತ್ರ ಸಾಧ್ಯ: ಡಾ.ನಿರಂಜನಾರಾಧ್ಯ

ವಾರ್ತಾಭಾರತಿವಾರ್ತಾಭಾರತಿ14 March 2017 9:48 PM IST
share
ಸಂವಿಧಾನದ ಮೌಲ್ಯಗಳನ್ನು ಕಟ್ಟಿಕೊಡಲು ಸರಕಾರಿ ಶಾಲೆಗಳಿಂದ ಮಾತ್ರ ಸಾಧ್ಯ: ಡಾ.ನಿರಂಜನಾರಾಧ್ಯ

ಉಡುಪಿ, ಮಾ.14: ಸರಕಾರಿ ಶಾಲೆಗಳಿಂದ ಮಾತ್ರ ಭಾಷೆಯೊಂದು ಉಳಿದು, ಬೆಳೆಯಲು ಸಾಧ್ಯ. ಸರಕಾರಿ ಶಾಲೆಗಳು ಮಕ್ಕಳಲ್ಲಿ ಸಂವಿಧಾನದ ವೌಲ್ಯಗಳನ್ನು ಕಟ್ಟಿಕೊಡುವ ತೊಟ್ಟಿಲುಗಳಾಗಿವೆ. ಸಂವಿಧಾನವನ್ನು ಎತ್ತಿಹಿಡಿ ಯುವ, ಗೌರವಿಸುವ, ಪ್ರಜ್ಞಾವಂತ ಪ್ರಜೆಗಳನ್ನು ರೂಪಿಸುವ ಕೇಂದ್ರವೂ ಈ ಶಾಲೆಗಳು. ಇದಕ್ಕಾಗಿಯಾದರೂ ಸರಕಾರಿ ಶಾಲೆಗಳು ಉಳಿಯಬೇಕಾಗಿದೆ ಎಂದು ನಾಡಿನ ಖ್ಯಾತ ಶಿಕ್ಷಣ ತಜ್ಞ ಹಾಗೂ ಬೆಂಗಳೂರು ನೇಷನಲ್ ಲಾ ಸ್ಕೂಲ್‌ನ ಮಗು ಮತ್ತು ಕಾನೂನು ಕೇಂದ್ರದ ಮುಖ್ಯಸ್ಥ ಡಾ.ನಿರಂಜನಾರಾಧ್ಯ ವಿ.ಪಿ. ಹೇಳಿದ್ದಾರೆ.

ಪರ್ಯಾಯ ಶ್ರೀಪೇಜಾವರ ಮಠದ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಉಡುಪಿ ಜಿಲ್ಲೆ, ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ ಉಡುಪಿ, ಪಡಿ-ಮಂಗಳೂರು, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಕ.ರಾ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಉಡುಪಿ ಜಿಲ್ಲೆ ಇವುಗಳ ಸಹಭಾಗಿತ್ವದಲ್ಲಿ ಮಂಗಳವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಎಸ್‌ಡಿಎಂಸಿ ಸಮಾವೇಶ- 2017ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತಿದ್ದರು.

ಸಂವಿಧಾನ ಎಂಬುದು ನಮ್ಮ ದೇಶದ ಹಾಗೂ ಇಡೀ ಸಮಾಜದ ಮೊದಲ ಧರ್ಮಗ್ರಂಥ. ಸಂವಿಧಾನದ ಮೂಲ ತಳಹದಿಯಾದ ಸಮಾನತೆ, ಜಾತ್ಯತೀತತೆ ಇಂದು ನಮಗೆ ಕಂಡುಬರುವುದು ಸರಕಾರಿ ಶಾಲೆಗಳಲ್ಲಿ ಮಾತ್ರ. ಇಂಥ ಸರಕಾರಿ ಶಾಲೆಗಳಿಗೆ ಮಾತ್ರ ಸಂವಿಧಾನವನ್ನು ಗೌರವಿಸುವ ಪ್ರಜ್ಞಾವಂತ ಪ್ರಜೆಗಳನ್ನು ರೂಪಿಸಲು ಸಾಧ್ಯವಾಗುತ್ತದೆ ಎಂದವರು ಅಭಿಪ್ರಾಯ ಪಟ್ಟರು.

ಭಾಷೆ ಎಂಬುದು ಕೇವಲ ಸಂವಹನ ಸಾಧನ ಮಾತ್ರವಲ್ಲ. ಅದು ಬದುಕನ್ನು ಕಟ್ಟಿಕೊಡುವ, ಜ್ಞಾನವನ್ನು ನೀಡುವ, ಕ್ರಿಯಾಶೀಲವಾಗಿ ಎಚ್ಚರಿಸಿ ಜಗತ್ತಿಗೆ ತೆರೆದಿಡುವ ಕೆಲಸ ಮಾಡುತ್ತದೆ. ಇಂದಿನ ಸಂದರ್ಭದಲ್ಲಿ ಭಾಷೆಯೊಂದು ಸರಕಾರಿ ಶಾಲೆಗಳಿಂದ ಮಾತ್ರ ಉಳಿಯಲು ಸಾಧ್ಯ ಎಂದರು.

ಮಾತೃಭಾಷೆ ಮಾಧ್ಯಮ:ಮಗುವಿನ ಕಲಿಕೆ ಭಾಷೆ ಮಾತೃಭಾಷೆಯಾಗಿರ ಬೇಕು ಎಂಬುದರಲ್ಲಿ ಯಾವುದೇ ತಾತ್ವಿಕ ಭಿನ್ನಾಭಿಪ್ರಾಯಗಳಿಲ್ಲ. ಆದರೆ ಇಂದು ಮಾತೃಭಾಷೆ ಶಿಕ್ಷಣ ಸಿಗುತ್ತಿರುವುದು ಸರಕಾರಿ ಶಾಲೆಗಳಲ್ಲಿ ಮಾತ್ರ. ಸಮಾನ ಶಾಲೆಯ ಮೊದಲ ಹೆಜ್ಜೆಯೇ ಸರಕಾರಿ ಶಾಲೆಗಳು. ಗುಣಾತ್ಮಕ ಶಿಕ್ಷಣದ ಜೀವಾಳವೇ ಸಮಾನತೆಯಾಗಿದೆ ಎಂದವರು ಹೇಳಿದರು.

ಸರಕಾರವೇ ಕಂಟಕ:ಹಳ್ಳಿಯ ಶಾಲೆಗಳು ಸಾಕ್ಷರತಾ ಕೇಂದ್ರಗಳಲ್ಲ. ಅದು ಬದುಕನ್ನು ಕಟ್ಟಿಕೊಡುವ ಕೇಂದ್ರ ಸಹ ಆಗಿದೆ. ಆದರೆ ಇಂದು ಸರಕಾರಗಳೇ ಸರಕಾರಿ ಶಾಲೆಗಳನ್ನು ದುರ್ಬಲಗೊಳಿಸುವ ನೀತಿಗಳನ್ನು ಜಾರಿಗೊಳಿಸುತ್ತಿವೆ. ಸರಕಾರವೇ ಶಿಕ್ಷಣದ ಖಾಸಗೀಕರಣಕ್ಕೆ ಪ್ರಾಶಸ್ತ್ಯ ನೀಡುತ್ತಿದೆ. ಸಂಸದರು, ಶಾಸಕರು ಸೇರಿದಂತೆ ನಮ್ಮ ಜನಪ್ರತಿನಿಧಿಗಳೇ ಶಿಕ್ಷಣದ ವ್ಯಾಪಾಕೀರಣದಲ್ಲಿ ಮುಂಚೂಣಿಯಲ್ಲಿದ್ದಾರೆ. ಇದರಲ್ಲಿ ಹಲವು ಮಠಗಳೂ ಸೇರಿಕೊಂಡಿವೆ.

ಸಂವಿಧಾನದಲ್ಲಿ ಶಿಕ್ಷಣ ಮೂಲಭೂತ ಹಕ್ಕಾದರೂ ಅದು ನಮ್ಮ ಆಳುವವರ ಮೂಲಭೂತ ಅಂಶವಾಗಿಯೇ ಇಲ್ಲ. ಕಳೆದ ನಾಲ್ಕು ವರ್ಷಗಳಿಂದ ಸರಕಾರಿ ಶಾಲೆಗಳ ಸರ್ವನಾಶಕ್ಕೆ ಬೇಕಾದ ಎಲ್ಲಾ ಕ್ರಮಗಳನ್ನು ಸರಕಾರ ತೆಗೆದುಕೊಳ್ಳುತ್ತಿದೆ ಎಂದು ಡಾ.ನಿರಂಜನಾರಾಧ್ಯ ಆರೋಪಿಸಿದರು.

ಸರಕಾರಿ ಶಾಲೆಗಳ ಆಸುಪಾಸಿನಲ್ಲಿ ಖಾಸಗಿ ಶಾಲೆಗಳಿಗೆ ಅನುಮತಿ ನೀಡಬಾರದು. ಆದರೆ ಇದರ ಪಾಲನೆಯಾಗುತ್ತಿಲ್ಲ. ಶಾಲೆ ಪ್ರಾರಂಭಗೊಂಡ ನಂತರ ಜುಲೈಯಲ್ಲಿ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಲಾಗುತ್ತಿದೆ. 2015ರ ಅಂಕಿಅಂಶಗಳ ಆಧಾರದಲ್ಲಿ ಈ ಪ್ರಕ್ರಿಯೆ ನಡೆದಿದೆ. ಇದರಿಂದ ನಮ್ಮ ಹೆಚ್ಚಿನ ಸರಕಾರಿ ಶಾಲೆಗಳು ಏಕೋಪಾಧ್ಯಾಯ ಶಾಲೆಗಳಾಗಿ ಪರಿವರ್ತನೆಯಾಗುತ್ತಿವೆ. ಇಂಥ ಶಾಲೆಗಳಲ್ಲಿ ಹೇಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ ಎಂದವರು ಪ್ರಶ್ನಿಸಿದರು.

 ಇಂದು ರಾಜ್ಯದಲ್ಲಿ ಸರಕಾರಿ ಶಾಲೆಗಳು ಉಳಿದಿದ್ದರೆ ಅದು ಎಸ್‌ಡಿಎಂಸಿ ಸಮಿತಿಗಳಿಂದ ಮಾತ್ರ. ಈ ಸಮಿತಿಗಳ ಸದಸ್ಯರ ಮಕ್ಕಳು ಈ ಶಾಲೆಗಲ್ಲಿ ಕಲಿಯುತಿದ್ದಾರೆ. ರಾಜ್ಯದಲ್ಲೀಗ 22,000 ಶಾಲೆಗಳಲ್ಲಿರುವ ಮಕ್ಕಳ ಸಂಖ್ಯೆ 1ರಿಂದ 50 ಮಾತ್ರ. ಇನ್ನು ಮೂರು ವರ್ಷಗಳಲ್ಲಿ 20ರಿಂದ 25000 ಶಾಲೆಗಳು ಮುಚ್ಚುವ ಸಾಧ್ಯತೆ ಇದೆ. ಹೀಗಾಗದಂತೆ ಎಸ್‌ಡಿಎಂಸಿ ಹೋರಾಟ ನಡೆಸಬೇಕು ಎಂದರು.

ಇಂದು ರಾಜ್ಯದ 44,000 ಹಳ್ಳಿಗಳಲ್ಲಿ ಎಸ್‌ಡಿಎಂಸಿಗಳಿವೆ. ಇವುಗಳಲ್ಲಿ 47.45 ಲಕ್ಷ ಮಕ್ಕಳು ಕಲಿಯುತಿದ್ದಾರೆ. ಸಮಿತಿ ಸದಸ್ಯರು ಸೇರಿದರೆ ಒಂದು ಕೋಟಿಯಾಗುತ್ತದೆ. ಇವರೆಲ್ಲ ಸೇರಿ ಸರಕಾರಿ ಶಾಲೆಗಳ ಉಳಿವಿಗೆ ಹೋರಾಟ ಬೇಕು. ಸರಕಾರ ಇದಕ್ಕೆ ಮುಂದಾಗದಿದ್ದರೆ ಅಂಥ ಸರಕಾರವನ್ನೇ ಬದಲಿಸಬೇಕು ಎಂದವರು ನುಡಿದರು.

ಪರ್ಯಾಯ ಪೇಜಾವರ ಮಠದ ಕಿರಿಯಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸಮಾವೇಶವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಎಸ್‌ಡಿಎಂಸಿ ರಾಜ್ಯ ಕಾರ್ಯದರ್ಶಿ ಶೋಭಾ ಭಾಸ್ಕರ, ಬಿ.ಜಯಕರ ಶೆಟ್ಟಿ,ಇಂದ್ರಾಳಿ, ಪಿ.ಕೆ.ಪುರುಷೋತ್ತಮ್, ರೆನ್ನಿ ಡಿಸೋಜ, ಜನಾರ್ದನ ಭಂಡಾರ್ಕರ್, ಶಶಿಧರ ಶೆಟ್ಟಿ, ಉಡುಪಿ ಜಿಲ್ಲಾ ಅಧ್ಯಕ್ಷ ಎಂ.ಅಬ್ದುಲ್ ಸಲಾಂ ಚಿತ್ತೂರು, ಮಲ್ಲಿಕಾ ಬಿ.ಪೂಜಾರಿ, ಮಾಜಿ ರಾಜ್ಯ ಸಂಚಾಲಕ ಗೋವಿಂದರಾಜು ಉಪಸ್ಥಿತರಿದ್ದರು.

ಜಿಲ್ಲಾ ಸಂಪನ್ಮೂಲ ಕೇಂದ್ರದ ಜಿಲ್ಲಾ ಅಧ್ಯಕ್ಷ ರಾಘವೇಂದ್ರ ನಾವಡ ನಾಡ ಸ್ವಾಗತಿಸಿದರೆ, ಜಯವಂತ ರಾವ್ ಹಿರಿಯಡ್ಕ ಕಾರ್ಯಕ್ರಮ ನಿರೂಪಿಸಿದರು.

ಸರಕಾರಿ ಪ್ರಾಯೋಜಿತ ಖಾಸಗೀಕರಣ

 ರಾಜ್ಯದಲ್ಲಿ ಸರಕಾರಿ ಶಾಲೆಗಳನ್ನ ಬಲಪಡಿಸಬೇಕಾದ ಸರಕಾರ, ಆರ್‌ಟಿಇ ಕಾಯ್ದೆ ಅಡಿ ಖಾಸಗಿ ಶಾಲೆಗಳಲ್ಲಿ ಬಡ ವಿದ್ಯಾರ್ಥಿಗಳಿಗೆ ತಾನೇ ದುಡ್ಡು ತೆತ್ತು ಶಿಕ್ಷಣ ನೀಡುತ್ತಿದೆ. ಇದೊಂದು ಸರಕಾರಿ ಪ್ರಾಯೋಜಿತ ಖಾಸಗೀಕರಣ ಎಂದವರು ಗಂಭೀರ ಆರೋಪ ಮಾಡಿದರು.

ಇದರಡಿ ರಾಜ್ಯ ಸರಕಾರ ಕಳೆದ ನಾಲ್ಕು ವರ್ಷಗಳಲ್ಲಿ 4.5 ಲಕ್ಷ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿ 1570 ಕೋಟಿ ರೂ.ಗಳನ್ನು ಶುಲ್ಕದ ರೂಪದಲ್ಲಿ ಪಾವತಿಸಿದೆ. ಇದೇ ದುಡ್ಡಿನಿಂದ ಸರಕಾರಿ ಶಾಲೆಗಳನ್ನು ಸಬಲಗೊಳಿಸಲು ಸಾಧ್ಯವಿತ್ತು. ಇದೀಗ ಖಾಸಗಿ ಶಾಲೆಗಳ ಶುಲ್ಕವನ್ನು ಹೆಚ್ಚಿಸಲಾಗುತ್ತಿದೆ ಎಂದು ಡಾ.ನಿರಂಜನಾರಾಧ್ಯ ನುಡಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X