ಕೊಟ್ಟಿಗೆಗೆ ನುಗ್ಗಿ ದನ ಕಳವಿಗೆ ಯತ್ನ
ಕೋಟ, ಮಾ.14: ಶಿರಿಯಾರ ಗ್ರಾಮದ ತೌಡಿನಹಕ್ಲು ಎಂಬಲ್ಲಿ ಮಾ.13 ರಂದು ಮಧ್ಯರಾತ್ರಿ ವೇಳೆ ಕೊಟ್ಟಿಗೆಯಲ್ಲಿದ್ದ ದನಗಳ ಕಳವಿಗೆ ಯತ್ನಿಸಿರುವ ಘಟನೆ ನಡೆದಿದೆ.
ಗೋಪಾಲಕೃಷ್ಣ ಶೆಟ್ಟಿ ಎಂಬವರ ಪತ್ನಿಯ ಮನೆಯ ಕೊಟ್ಟಿಗೆಯಲ್ಲಿನ ಹಸು ಗಳನ್ನು ಕಳ್ಳತನ ಮಾಡಲು ನಾಲ್ಕೈದು ಮಂದಿ ತಲವಾರುಗಳನ್ನು ಹಿಡಿದು ಕೊಂಡು ಬಂದಿದ್ದು, ಕೊಟ್ಟಿಗೆಯ ಬಾಗಿಲನ್ನು ತೆರೆದು ಒಂದು ಹಸುವಿನ ಕುತ್ತಿಗೆಯ ಹಗ್ಗವನ್ನು ಬಿಚ್ಚಿದ್ದು, ಆ ವೇಳೆ ಸ್ಥಳೀಯರನ್ನು ಕಂಡು ಅವು ತೋಟದ ಒಳಕ್ಕೆ ಓಡಿ ಹೋದರು.
ಈ ಸಂದರ್ಭ ಆರೋಪಿಗಳು ದನವನ್ನು ಸಾಗಾಟ ಮಾಡಲು ತಂದಿದ್ದ ಕೆಎ19 ಎಬಿ 3679 ನಂಬರಿನ ಟಾಟಾ ಏಸ್ ವಾಹನವನ್ನು ಚಾಲಕ ಸೋಲಾರ್ ದೀಪದ ಕಂಬಕ್ಕೆ ಢಿಕ್ಕಿ ಹೊಡೆಸಿದನು. ಅಲ್ಲದೇ ಆರೋಪಿಗಳು ಪರಾರಿಯಾಗುವಾಗ ಬಿದ್ದ ಮೊಬೈಲ್ ಪತ್ತೆಯಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





