ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು
ಮಲ್ಪೆ, ಮಾ.13: ಮಲ್ಪೆಬಂದರಿನಿಂದ ಸುಮಾರು 125 ಮಾರು ದೂರ ಆಳ ಸಮುದ್ರದಲ್ಲಿ ಮಾ.12ರಂದು ರಾತ್ರಿ 12ಗಂಟೆ ಸುಮಾರಿಗೆ ಮೀನು ಗಾರಿಕೆ ಮಾಡುತ್ತಿದ್ದ ಬೋಟಿನಿಂದ ಮೀನುಗಾರರೊಬ್ಬರು ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ತಮಿಳುನಾಡಿನ್ ಅನ್‌ಬಾಲ್ಕನ್(47) ಎಂದು ಗುರುತಿಸ ಲಾಗಿದೆ. ಮಲ್ಪೆಯ ಕೃಷ್ಣ ಕಾಂಚನ್ ಎಂಬವರ ವಿರಾಟ್ ಹೆಸರಿನ ಬೋಟಿ ನಲ್ಲಿ 9 ಮಂದಿ ಮೀನುಗಾರರು ಮಾ.9ರಂದು ಆಳ ಸಮುದ್ರ ಮೀನು ಗಾರಿಕೆಗೆ ಹೊರಟಿದ್ದು, ಇವರಲ್ಲಿ ಅನ್‌ಬಾಲ್ಕನ್ ಮೀನಿನ ಬಲೆಯನ್ನು ಎಳೆಯುವಾಗ ಎದೆನೋವಿನಿಂದ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದರು. ಕೂಡಲೇ ಅವರನ್ನು ಮೇಲಕ್ಕೆ ಎತ್ತಿ ಉಪಚರಿಸಿ ಉಡುಪಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





