ಮಟ್ಕಾ: ನಾಲ್ವರ ಬಂಧನ
ಕೋಟ, ಮಾ.14: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧೆಡೆ ಮಾ.13ರಂದು ದಾಳಿ ನಡೆಸಿದ ಪೊಲೀಸರು ಮಟ್ಕಾ ಜುಗಾರಿ ಆಟ ನಡೆಸು ತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ.
ಶಿರಿಯಾರ ಗ್ರಾಮದ ಗರಿಕೆಮಠ ಕಲ್ಲುಕೋರೆಯ ಬಳಿ ರಮೇಶ ಪೂಜಾರಿ (38)ಯನ್ನು 1580ರೂ. ನಗದು ಸಹಿತ, ಕಾರ್ಕಡ ಗ್ರಾಮದ ಮೂಡು ಹೋಳಿ ಬಸ್ ನಿಲ್ದಾಣ ಬಳಿ ಶರತ್(21) ಎಂಬಾತನನ್ನು 1790ರೂ. ನಗದು ಸಹಿತ, ಗಿಳಿಯಾರು ಗ್ರಾಮದ ಕೋಟ ಮೀನು ಮಾರ್ಕೆಟ್ ಬಳಿ ಮಂಜು ಪೂಜಾರಿ ಮತ್ತು ಸಾಸ್ತಾನ ಬಳಿ ನಾಗರಾಜ್ ದೇವಾಡಿಗ(39) ಎಂಬಾತನನ್ನು ಬಂಧಿಸಲಾಗಿದೆ.
Next Story





