ಹಂಪ್ಸ್‌ಗೆ ಬೈಕ್ ಢಿಕ್ಕಿ: ಮಹಿಳೆ ಮೃತ್ಯು

ಮಂಗಳೂರು, ಮಾ.14: ನಗರ ಹೊರವಲಯದ ಅಡ್ಯಾರ್ ಪದವು ಚರ್ಚ್ ಬಳಿ ಬೈಕೊಂದು ಹಂಪ್ಸ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ನ ಹಿಂಬದಿ ಕುಳಿತಿದ್ದ ಮಹಿಳೆ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ಮೃತ ಮಹಿಳೆಯನ್ನು ಜುಬೇದಾ ಎಂದು ಗುರುತಿಸಲಾಗಿದೆ. ಸವಾರನ ನಿಯಂತ್ರಣ ಕಳಕೊಂಡ ಬೈಕ್ ಸೋಮವಾರ ಹಂಪ್ಸ್‌ಗೆ ಢಿಕ್ಕಿ ಹೊಡೆಯಿತು ಎನ್ನಲಾಗಿದೆ. ಇದರಿಂದ ಹಿಂಬದಿ ಕುಳಿತಿದ್ದ ಜುಬೇದಾ ಬಿದ್ದು ಗಂಭೀರ ಗಾಯಗೊಂಡರು. ಇದೇ ವೇಳೆ ಶ್ರೀನಿವಾಸ್ ಕಾಲೇಜು ರಸ್ತೆಯಾಗಿ ಹುಸೈನ್ ಎಂಬವರು ನೀರುಮಾರ್ಗ ಕಡೆಗೆ ರಿಕ್ಷಾ ಚಲಾಯಿಸಿಕೊಂಡು ಹೋಗುತ್ತಿದ್ದರು. ತಕ್ಷಣ ಗಾಯಾಳುವನ್ನು ಹುಸೈನ್‌ರ ರಿಕ್ಷಾದಲ್ಲಿ ನಗರದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಕೊನೆಯುಸಿರೆಳೆದಿದ್ದಾರೆ.
Next Story





