ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸೇವಾದಳದ ಸದಸ್ಯರಾಗಿ ವೆಂಕಪ್ಪ ಪೂಜಾರಿ ನೇಮಕ

ಬಂಟ್ವಾಳ, ಮಾ. 14: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸೇವಾದಳದ ಸದಸ್ಯರಾಗಿ ಹಿರಿಯ ಕಾಂಗ್ರೆಸ್ ಕಾರ್ಯಕರ್ತ ವೆಂಕಪ್ಪ ಪೂಜಾರಿಯವರನ್ನು ನೇಮಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶಿಫಾರಸಿನಂತೆ, ಅಖಿಲಭಾರತ ಕಾಂಗ್ರೆಸ್ ಸೇವಾದಳದ ಮುಖ್ಯ ಸಂಘಟಕರಾದ ಮಹೇಂದ್ರ ಜೋಷಿಯವರ ಸೂಚನೆ ಹಾಗೂ ರಾಜ್ಯ ಮುಖ್ಯ ಸಂಘಟಕರಾದ ಭೀಮಾಶಂಕರ್ ವಿ.ಎಚ್. ಅವರ ನಿರ್ದೇಶನದಂತೆ ಈ ನೇಮಕ ಮಾಡಲಾಗಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಸೇವಾದಳದ ಮುಖ್ಯ ಸಂಘಟಕ ಹಾಜಿ ಎಚ್.ಎಂ.ಅಶ್ರಫ್ ನೇಮಕಾತಿ ಆದೇಶದಲ್ಲಿ ತಿಳಿಸಿದ್ದಾರೆ.
Next Story





