ಕಟೀಲು ಧೂಮಾವತೀ ಚಾಮುಂಡೀ ದೈವ ಪ್ರತಿಷ್ಠೆ
ಮುಲ್ಕಿ, ಮಾ.14: ಶ್ರೀ ದುಗಾಪರಮೇಶ್ವರೀ ದೇವಸ್ಥಾನಕ್ಕೆ ಸಂಬಂಧಿಸಿದ ಧೂಮಾವತೀ ಹಾಗೂ ಚಾಮುಂಡೀ ದೈವದ ಪ್ರತಿಷ್ಟಾ ಬ್ರಹ್ಮಕಲಶೋತ್ಸವ ಮಾ.19ರಂದು ನಡೆಯಲಿದೆ.
ಭಕ್ತರು ನಿರ್ಮಿಸಿಕೊಟ್ಟ ನೂತನ ದೈವಸ್ಥಾನದಲ್ಲಿ ತಾ. 18ರಂದು ಸಂಜೆ ವಾಸ್ತು ಪೂಜೆ, ವಾಸ್ತು ಹೋಮ, ಸಪ್ತಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ಪ್ರಾಕಾರ ಬಲಿ, ಬಿಂಬಾಧಿಶಯ್ಯಾಧಿವಾಸ ನಡೆಯಲಿದೆ.
ಮಾ.19ರಂದು ಬೆಳಗ್ಗೆ ಗಂಟೆ 8ರಿಂದ ಪುಣ್ಯಾಹ, ಕಲಶಾಧಿವಾಸ, ಕಲಶಾಧಿವಾಸ ಹೋಮ, ಗಣಹೋಮ, ದುರ್ಗಾಹೋಮ, ಪುನಃ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಪ್ರಸನ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ದೇಗುಲದ ಪ್ರಕಟನೆ ತಿಳಿಸಿದೆ.
Next Story





