ಮುಲ್ಕಿ : ರಸ್ತೆ ಕಾಂಕ್ರಿಟೀಕರಣಕ್ಕೆ ಶಾಸಕ ಅಭಯಚಂದ್ರ ಜೈನ್ ರಿಂದ ಶಿಲಾನ್ಯಾಸ

ಮುಲ್ಕಿ, ಮಾ.14: ಕಿನ್ನಿಗೋಳಿ ಸಮೀಪದ ಮಾರಡ್ಕ ಬಳಿ, ಗಡಿನಾಡು ಅಭಿವೃದ್ಧಿ ಯೋಜನೆ ಅನುದಾನದಲ್ಲಿ ಶಾಸಕರ ನಿಧಿಯಿಂದ 5 ಲಕ್ಷ ರೂ. ವೆಚ್ಚದ ರಸ್ತೆ ಕಾಂಕ್ರಿಟೀಕರಣಕ್ಕೆ ಶಾಸಕ ಅಭಯಚಂದ್ರ ಜೈನ್ ಮಂಗಳವಾರ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭ ಮೆನ್ನಬೆಟ್ಟು ಗ್ರಾಮಪಂಚಾಯತ್ ಅಧ್ಯಕ್ಷೆ ಸರೋಜಿನಿ ಗುಜರನ್, ಸದಸ್ಯರಾದ ಸುನಿಲ್ ಸಿಕ್ವೇರ, ಮಲ್ಲಿಕಾ, ಸುಶೀಲಾ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಶೈಲಾ ಸಿಕ್ವೇರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ನಗರ ಪಂಚಾಯತ್ ಸದಸ್ಯ ಬಿ.ಎಂ. ಆಸೀಫ್, ಪುತ್ತುಬಾವ, ಅಶೋಕ್ ಪೂಜಾರ್, ಕಾಂಗ್ರೆಸ್ ಮುಖಂಡರಾದ ರಾಜೀವಿ, ಅನಿತಾ, ಸಿಪ್ರೀಯಾನ್ ಸಿಕ್ವೇರ, ಸುಜಾತ, ಗುತ್ತಿಗೆದಾರ ಅಬ್ಬಾಸ್ ಅಲಿ ಮತ್ತಿತರರು ಉಪಸ್ಥಿತರಿದ್ದರು.
Next Story





