ಕಾಂತಾಬಾರೆ ಬೂದಾಬಾರೆ ಕ್ಷೇತ್ರದಲ್ಲಿ ತೋರಣ ಮುಹೂರ್ತ
.jpg)
ಮುಲ್ಕಿ, ಮಾ.14: ಇಲ್ಲಿಗೆ ಸಮೀಪದ ಕಿನ್ನಿಗೋಳಿ ಮುಲ್ಕಿ ಒಂತ್ತು ಮಾಗಣೆಗೆ ಸಂಬಂಧಿಸಿರುವ ವೀರಪುರುಷರಾದ ಕಾಂತಾಬಾರೆ ಬೂದಾಬಾರೆಯರ ಜನ್ಮಕ್ಷೇತ್ರದ ನಾಗಬನದಲ್ಲಿ ಮಾರ್ಚ್ 17ರಂದು ನಡೆಯಲಿರುವ ಚತುಷ್ಪವಿತ್ರ ನಾಗಬ್ರಹ್ಮಮಂಡಲೋತ್ಸವದ ಪೂರ್ವಭಾವಿಯಾಗಿ ಮಾ.14ರಂದು ತೋರಣ ಮುಹೂರ್ತವು ನೆರವೇರಿತು.
ಏಳಿಂಜೆ ಶ್ರೀಧರ ಭಟ್ ಅವರ ನೇತೃತ್ವದಲ್ಲಿ ದೇವತಾ ಪ್ರಾರ್ಥನೆ, ಸ್ವಸ್ತಿ ಪಂಚಗವ್ಯ ಪುಣ್ಯಾಹ ಶುದ್ದಿ, ಶ್ರೀ ಮಹಾಗಣಪತಿ ಹೋಮ ನಡೆದು ತೋರಣ ಮುಹೂರ್ತದೊಂದಿಗೆ ಸಂಜೀವಿನಿ ಮೃತ್ಯುಂಜಯ ಹೋಮ ಇತ್ಯಾದಿಗಳು ಕ್ಷೇತ್ರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ನಾಗಬ್ರಹ್ಮಮಂಡಲೋತ್ಸವ ಸಮಿತಿಯ ಅಧ್ಯಕ್ಷ ದಾಮೋದರ ದಂಡಕೇರಿ, ಕಾರ್ಯಾಧ್ಯಕ್ಷ ಗಂಗಾಧರ ಪೂಜಾರಿ, ಗೌರವ ಸಲಹೆಗಾರರಾದ ಬಿಪಿನ್ ಪ್ರಸಾದ್ ಮತ್ತು ವಿನೋಧರ ಪೂಜಾರಿ, ಪ್ರಧಾನ ಕಾರ್ಯದರ್ಶಿ ಶೀನ ಡಿ. ಪೂಜಾರಿ, ಕೋಶಾಧಿಕಾರಿ ಹರೀಂದ್ರ ಸುವರ್ಣ, ಕಿಶೋರ್‌ಕುಮಾರ್ ದಂಡಕೇರಿ, ಚಂದ್ರಶೇಖರ್ ಜಿ. ಕೊಲ್ಲೂರು ಶ್ರೀ ಕಾಂತಾಬಾರೆ ಬೂದಾಬಾರೆ ಪರಿವಾರ ದೈವಗಳ ಸೇವಾ ಟ್ರಸ್ಟ್‌ನ ಪ್ರಮುಖರು, ಕುಂದರ್ ಕುಟುಂಬಿಕರು, ಮುಲ್ಕಿ ಒಂತ್ತು ಮಾಗಣೆಯ ಭಕ್ತಾಧಿಗಳು ಭಾಗವಹಿಸಿದ್ದರು.







