ಮಾ:25 ಕ್ಕೆ ಎಸ್.ಎಸ್.ಎಫ್ ಪರಪ್ಪು ಶಾಖೆಯ 27 ನೇ ವಾರ್ಷಿಕೋತ್ಸವ
ಮಾ.13: ಎಸ್ .ಎಸ್. ಎಫ್ ಪರಪ್ಪು ಶಾಖೆಯ 27 ನೇ ವಾರ್ಷಿಕೋತ್ಸವದ ಅಂಗವಾಗಿ ಬ್ರಹತ್ ಜಲಾಲೀಯ್ಯ ರಾತೀಬ್ ಹಾಗೂ ನಾರಿಯತ್ ಸ್ವಲಾತಿನ 9 ನೇ ವಾರ್ಷಿಕ ಕಾರ್ಯಕ್ರಮ 2017 ಮಾ.25 ಶನಿವಾರ ರಾತ್ರಿ ಪರಪ್ಪು ತಾಜುಲ್ ಉಲಮಾ ನಗರದಲ್ಲಿ ನಡೆಯಲಿದೆ.ಸಯ್ಯದ್ ಜಾಫರ್ ಸ್ವಾದಿಕ್ ತ೦ಙಲ್ ಕು೦ಬೋಲ್ ರವರ ನೇತ್ರತ್ವದಲ್ಲಿ ನಡೆಯುವ ಕಾರ್ಯಕ್ರಮವನ್ನು ಪರಪ್ಪು ಬದ್ರಿಯಾ ಜುಮಾ ಮಸ್ಜಿದ್ ಖತೀಬರಾದ ಬಹು! ಹಮೀದ್ ಸಖಾಫಿ ಕೊಡ೦ಗಾಯಿ ಉದ್ಘಾಟಿಸಲಿದ್ದಾರೆ.
ಪ್ರಭಾಷಣ ಲೋಕದ ದ್ರುವತಾರೆ ,ಖ್ಯಾತ ವಾಗ್ಮಿ ಎಸ್.ಎಸ್.ಎಫ್ ದಕ್ಷಿಣ ಕನ್ನಡ ಜಿಲ್ಲಾ ಅದ್ಯಕ್ಷರಾದ ಬಹು ಸಿರಾಜುದ್ದೀನ್ ಸಖಾಫಿ ಕನ್ಯಾನ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.ಅದಲ್ಲದೆ ಪ್ರಸ್ತುತ ಕಾರ್ಯಕ್ರಮದಲ್ಲಿ ಹಲವಾರು ಉಲಮಾ,ಉಮಾರಾ ನೇತಾರರು ಭಾಗವಹಿಸಲಿದ್ದು ದೀನೀ ಪ್ರೇಮಿಗಳೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಳ್ಗೊ೦ಡು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕೆ೦ದು ಸ೦ಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





