ಮಾ.18: ಅಹೋರಾತ್ರಿ ಪ್ರತಿಭಟನೆಯ ಎಚ್ಚರಿಕೆ
ನೇಮೋತ್ಸವ: ಜಾತಿ ನಿಂದನೆ ಆರೋಪ
ಮಂಗಳೂರು, ಮಾ.14: ಕುಳಾಯಿ ಚಿತ್ರಾಪುರದ ಮಹಾಂಕಾಳಿ ದೈವಸ್ಥಾನದಲ್ಲಿ ಕೊರಗ ತನಿಯ ಹಾಗೂ ಏಳು ಕೊರಪೊಲುಗಳ ನೇಮೋತ್ಸವದ ಮೂಲಕ ಕೊರಗ ಸಮುದಾಯವನ್ನು ಅವಮಾ ನಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿರುವ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟವು, ನೇಮೋತ್ಸವ ನಿಲ್ಲಿಸದಿದ್ದರೆ ಮಾ. 18ರಂದು ಬೆಳಗ್ಗಿನಿಂದ 19ರ ಮುಂಜಾನೆವರೆಗೆ ಅಹೋರಾತ್ರಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಒಕ್ಕೂಟದ ಅಧ್ಯಕ್ಷ ಎಂ. ಸುಂದರ, ಕೊರಗ ಸಮುದಾಯವನ್ನು ಇಂದಿಗೂ ಹಲವಾರು ರೀತಿಯಲ್ಲಿ ಅವಮಾನಿಸುವ ಸಂಪ್ರದಾಯ ಮುಂದುವರಿಯುತ್ತಿದೆ. ಏಳು ಕೊರಪೊಲು ಎಂದು ಹೇಳು ವುದೇ ಒಂದು ವಿಕೃತ ಮನಸ್ಸು ಈ ಮೂಲಕ ಕೊರಗ ಸಮುದಾಯದಲ್ಲಿ ಜಾರಿಯಲ್ಲೇ ಇಲ್ಲದ ಬಹುಪತ್ನಿತ್ವವನ್ನು ಪ್ರೋತ್ಸಾಹಿಸಲಾಗುತ್ತಿದೆ. ಇದು ಸ್ಪಷ್ಟ ವಾಗಿ ಸ್ತ್ರೀಯರನ್ನು ಅವಮಾನಿಸುವ ಪ್ರತೀಕವಾಗಿದೆ ಮತ್ತು ಸಮುದಾಯದ ಮಹಿಳೆಯರ ಘನತೆ- ಗೌರವ ಗಳಿಗೆ ಧಕ್ಕೆ ತರುವಂತದ್ದಾಗಿದೆ ಎಂದು ಎಂ.ಸುಂದರ ಅಸಮಾಧಾನ ವ್ಯಕ್ತಪಡಿ ಸಿದರು.
ಆದ್ದರಿಂದ ಮಾ.17 ಮತ್ತು 18 ರಂದು ನಡೆಸಲು ಉದ್ದೇಶಿಸಿರುವ ನೇಮೋತ್ಸವವನ್ನು ನಿಲ್ಲಿಸಬೇಕು. ಇಲ್ಲ ವಾದಲ್ಲಿ, ನೇಮೋತ್ಸವ ನಿಲ್ಲುವವ ರೆಗೆ ಕೊರಗ ಸಮುದಾಯ ಪ್ರತಿಭಟನೆ ನಡೆಸಲಿದೆ ಎಂದರು. ಉಡುಪಿಯ ಗೌರಿ, ಕಾಸರಗೋಡಿನ ಸುಮತಿ, ಒಕ್ಕೂಟದ ಉಪಾಧ್ಯಕ್ಷ ಕೊಗ್ಗ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.





