ಎ.3: ರಾಜ್ಯಮಟ್ಟದ ಬ್ಯಾಡ್ಮಿಂಟನ್ ಅಡ್ವಾನ್ಸ್ ಬೇಸಿಗೆ ತರಬೇತಿ ಶಿಬಿರ
ಮಂಗಳೂರು, ಮಾ.14: ದ.ಕ. ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ವತಿಯಿಂದ ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಶನ್ ಸಹಯೋಗದಲ್ಲಿ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಉಚಿತ ಬೇಸಿಗೆ ಅಡ್ವಾನ್ಸ್ ತರಬೇತಿ ಶಿಬಿರವು ಎ.3ರಿಂದ 23ರವರೆಗೆ ಮಂಗಳಾ ಸ್ಟೇಡಿಯಂನ ಯು. ಶ್ರೀನಿವಾಸ ಮಲ್ಯ ಒಳಾಂಗಣ ಸ್ಟೇಡಿಯಂನಲ್ಲಿ ನಡೆಯಲಿದೆ.
ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಶನ್‌ನಿಂದ ನಿಯೋಜಿಸಲ್ಪಟ್ಟ ಸಾಯ್‌ನ ಮಾಜಿ ಬ್ಯಾಡ್ಮಿಂಟನ್ ತರಬೇತುದಾರ ರೋಶನ್‌ಲಾಲ್ ಶಿಬಿರ ನಡೆಸಿಕೊಡಲಿದ್ದಾರೆ. ರೋಶನ್‌ಲಾಲ್ ಅವರು ಡೆನ್ಮಾರ್ಕ್‌ನಲ್ಲಿ ನಡೆದಿದ್ದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಗೆ ಭಾರತದ ಬ್ಯಾಡ್ಮಿಂಟನ್ ತಂಡದಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಲ್ಲದೆ ಥಾಯ್ಲೆಂಡ್‌ನಲ್ಲಿ ನಡೆದಿದ್ದ ಥಾಮಸ್ ಹಾಗೂ ಉಬರ್ ಕಪ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡಕ್ಕೆ ತರಬೇತಿ ನೀಡಿದ್ದರು.
ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುವ ಆಟಗಾರರು ಹಾಗೂ ತರಬೇತುದಾರರಿಗೆ ಉಚಿತ ಆಹಾರ, ವಸತಿ ಹಾಗೂ ಪ್ರಯಾಣ ವ್ಯವಸ್ಥೆ ಮಾಡಲಿದೆ. 12ರಿಂದ 19 ವರ್ಷ ವಯೋಮಿತಿಯ ಆಟಗಾರರಿಗೆ ನಡೆಯಲಿರುವ ಈ ಅಡ್ವಾನ್ಸ್ ತರಬೇತಿ ಶಿಬಿರ ದ.ಕ. ಜಿಲ್ಲೆಯಲ್ಲೇ ಮೊದಲ ಬಾರಿಗೆ ನಡೆಯುತ್ತಿದೆ.
ಶಿಬಿರದಲ್ಲಿ ದ.ಕ. ಹಾಗೂ ಇತರ ಜಿಲ್ಲೆಗಳ ಸುಮಾರು 5,060 ಆಟಗಾರರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಆಸಕ್ತ ಬ್ಯಾಡ್ಮಿಂಟನ್ ಆಟಗಾರರು ದ.ಕ. ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಕಾರ್ಯದರ್ಶಿ ಐವನ್ ಪತ್ರಾವೊ(ದೂ.ಸಂ.:9845215690) ಅವರನ್ನು ಸಂಪರ್ಕಿಸಬಹುದು







