ಮಾ.17ರಿಂದ ಅಜ್ಜಾವರ ಮೇನಾಲ ಉರೂಸ್ ಮುಬಾರಕ್
ಸುಳ್ಯ, ಮಾ.14: ಅಜ್ಜಾವರ ಮೇನಾಲ ದರ್ಗಾ ಶರೀಫ್ ಉರೂಸ್ ಕಾರ್ಯಕ್ರಮ ಮಾ.17ರಿಂದ ಮಾ.21ರವರೆಗೆ ನಡೆಯ ಲಿದೆ ಎಂದು ಅಜ್ಜಾವರ ಜಮಾಅತ್‌ನ ಲೆಕ್ಕ ಪರಿಶೋಧಕ ಅಬ್ದುಲ್ ಖಾದರ್ ಸುದ್ದಿಗೋಷ್ಠಿಯಲಿಂದು ಮಾಹಿತಿ ನೀಡಿದರು.
ಕಾರ್ಯಕ್ರಮಕ್ಕೆ ಹಲವಾರು ಉಲಮಾ ಗಳು, ಸಾದಾತ್‌ಗಳು ಭಾಗವಹಿಸಿ ದುಆ ಹಾಗೂ ಧಾರ್ಮಿಕ ಉಪನ್ಯಾಸ ನೀಡಲಿರುವರು. ಮಾ.17 ಮತ್ತು 18ರಂದು ಅಜ್ಜಾವರ ಮಸೀದಿಯ ವಠಾರದಲ್ಲಿ ನಡೆಯಲಿರುವ ಕಾರ್ಯಕ್ರಮ ವನ್ನು ಶೈಖುನಾ ಅಹ್ಮದ್ ಪೂಕೋಯ ತಂಙಳ್ ಉದ್ಘಾಟಿಸುವರು. ಸ್ಥಳೀಯ ಖತೀಬ್ ಮುಹಿಯದ್ದೀನ್ ಫೈಝಿ ಉಪನ್ಯಾಸ ನೀಡಲಿದ್ದಾರೆ.
ಮಾ.18ರಂದು ಖ್ಯಾತ ವಾಗ್ಮಿ ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ‘ಯುವಕರು ಮತ್ತು ಧಾರ್ಮಿಕ ಜ್ಞ್ಞಾನ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಮಾ.19ರಂದು ಮಗ್ರಿಬ್ ನಮಾಝಿನ ನಂತರ ಸೈಯದ್ ಉಂಬು ತಂಙಳ್ ಆದೂರು ನೇತೃತ್ವದಲ್ಲಿ ದ್ಸಿಕ್ರ್ ಹಲ್ಕಾ ನಡೆಯಲಿರುವುದು. ಅಂದು ರಾತ್ರಿ ಉಪನ್ಯಾಸ ಕಾರ್ಯಕ್ರಮವನ್ನು ಬಹು ಶೈಖುನಾ ಸೈಯದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಲ್ ಉದ್ಘಾಟಿಸಲಿದ್ದು, ಖ್ಯಾತ ವಾಗ್ಮಿ ರಿಯಾಝ್ ಮನ್ನಾನಿ ಆಲಂಗೋಡು ತಿರುವನಂತಪುರ ಉಪನ್ಯಾಸ ನೀಡಲಿದ್ದಾರೆ. ಮಾ.20ರಂದು ಬಹು ಮನ್ನೂರು ಅಲಿ ದಾರಿಮಿ ಕಣ್ಣೂರು ಪ್ರವಚನ ನೀಡಲಿದ್ದಾರೆ. ಮಾ.21ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಸರ್ವಧರ್ಮ ಸೌಹಾರ್ದ ಸಮಾರಂಭವು ಸಂಜೆ 7:30ಕ್ಕೆ ಗುಡ್ಡಪ್ಪರೈ ಮೇನಾಲ ಅಧ್ಯಕ್ಷತೆಯಲ್ಲಿ ನಡೆಯಲಿದೆ. ರಾತ್ರಿ 9ರಿಂದ ಧಾರ್ಮಿಕ ಪ್ರವಚನ ನಡೆಯಲಿದ್ದು, ಕಾರ್ಯಕ್ರಮವನ್ನು ಶೈಖುನಾ ಅಲ್‌ಹಾಝ್ ಎನ್.ಪಿ.ಎಂ. ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ಉದ್ಘಾಟಿಸಿ, ದುಆ ನೆರವೇರಿಸಲಿದ್ದಾರೆ. ಸೈಯದ್ ಟಿ.ವಿ. ಆಟ್ಟು ತಂಙಳ್ ಆದೂರು ಅಧ್ಯಕ್ಷತೆ ವಹಿಸುವರು. ಖ್ಯಾತ ವಾಗ್ಮಿ ನಿಝಾಮುದ್ದೀನ್ ಬಾಖವಿ ಕಡಕ್ಕಲ್ ಕೊಲ್ಲಂ ಪ್ರಭಾಷಣ ಮಾಡಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅಜ್ಜಾವರ ಜಮಾಅತ್‌ನ ಅಧ್ಯಕ್ಷ ಹಾಜಿ ಮುಹಮ್ಮದ್ ಬಯಂಬು, ಪ್ರಧಾನ ಕಾರ್ಯದರ್ಶಿ ಶಾಫಿ ಎ.ಪಿ., ಉಪಾಧ್ಯಕ್ಷ ಹಾಜಿ ಅಬ್ದುಲ್ ಖಾದರ್ ಉಪಸ್ಥಿತರಿದ್ದರು.







