ಸ್ವಚ್ಛಗಾಳಿ: ಮುಂಬೈಗಿಂತ ದಿಲ್ಲಿ ಲೇಸು

ಹೊಸದಿಲ್ಲಿ, ಮಾ.15: ಬಹುತೇಕ ಉತ್ತರ ಭಾರತದ ನಗರಗಳಿಗಿಂತ ಸ್ವಚ್ಛ ನಗರ ಎನಿಸಿಕೊಂಡಿರುವ ಮುಂಬೈ ಇದೀಗ ಮಲಿನ ಗಾಳಿಯ ಮೂಲಕ ಸುದ್ದಿಯಲ್ಲಿದೆ.
ಕಳೆದ ಎರಡು ವಾರಗಳಿಂದ ರಾಜಧಾನಿ ದೆಹಲಿಯ ಗಾಳಿ ಮುಂಬೈ ಗಾಳಿಗಿಂತಲೂ ಮಲಿನವಾಗಿದೆ ಎಂಬ ವಿಷಯ ಇದೀಗ ಬಹಿರಂಗವಾಗಿದೆ.
ಇದಕ್ಕೆ ಮುಂಬೈನಲ್ಲಿ ಹೊಗೆ ಹೆಚ್ಚಿರುವುದು ಕಾರಣವಲ್ಲ; ಬದಲಾಗಿ ದೆಹಲಿಯ ವಾಯುಗುಣಮಟ್ಟದಲ್ಲಿ ಆಗಿರುವ ಗಣನೀಯ ಸುಧಾರಣೆ ಕಾರಣ ಎಂದು ವಿಜ್ಞಾನಿಗಳು ಹೇಳುತ್ತಾರೆ.
ಭಾರತೀಯ ಹವಾಮಾನ ಇಲಾಖೆಯ ವಾಯು ಗುಣಮಟ್ಟ ಹಾಗೂ ಹವಾಮಾನ ಮುನ್ಸೂಚನೆ ಮತ್ತು ಸಂಶೋಧನಾ ಸಂಸ್ಥೆ, ಎರಡು ನಗರಗಳ ಹಾಗೂ ಪುಣೆಯ ವಾಯು ಗುಣಮಟ್ಟವನ್ನು 2017ರ ಫೆಬ್ರವರಿ 27 ಹಾಗೂ ಮಾರ್ಚ್ 13ರ ನಡುವೆ ಮೌಲ್ಯಮಾಪನ ಮಾಡಿದೆ.
ಮುಂಬೈನಲ್ಲಿ ಶೇಕಡ 13ರಷ್ಟು ಸಮಾಧಾನಕರ ದಿನಗಳು ದಾಖಲಾಗಿದ್ದರೆ, ದೆಹಲಿಯಲ್ಲಿ ಶೇಕಡ 57 ಸಮಾಧಾನಕರ ದಿನಗಳು ದಾಖಲಾಗಿವೆ. ಮುಂಬೈನಲ್ಲಿ ಶೇಕಡ 20ರಷ್ಟು ತೀರಾ ಕಳಪೆ ದಿನಗಳು ದಾಖಲಾಗಿದ್ದರೆ, ದೆಹಲಿಯಲ್ಲಿ ಇಂಥ ಒಂದು ದಿನವೂ ದಾಖಲಾಗಿಲ್ಲ.
Next Story





