ನಿಮ್ಮ ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳು ಇವೆಯೇ ?
ಬ್ಯಾಕ್ಟೀರಿಯಾ ಅಚ್ಛೇ ಹೈ !
ಪ್ರೊಬಯೋಟಿಕ್ಸ್ (ಒಳ್ಳೆಯ ಬ್ಯಾಕ್ಟೀರಿಯಾ) ಮತ್ತು ಪ್ರಿಬಯೋಟಿಕ್ಸ್ (ಪ್ರೊಬಯೋಟಿಕ್ಸ್ ಗಳ ಬೆಳವಣಿಗೆಗೆ ಸಹಕರಿಸುವ) ಆಹಾರವನ್ನು ಸೇವಿಸಿದಾಗ ಉಂಟಾಗುವ ಉತ್ತಮ ಪರಿಣಾಮಗಳ ಬಗ್ಗೆ ಹಲವು ಅಧ್ಯಯನಗಳು ಬೆಳಕು ಚೆಲ್ಲಿವೆ.
ಸುಮಾರು 700 ವಿದ್ಯಾರ್ಥಿಗಳನ್ನೊಳಗೊಂಡ 2015ರ ಅಧ್ಯಯನವೊಂದರ ಪ್ರಕಾರ ಫರ್ಮೆಂಟೆಡ್ ಆಹಾರ ಸೇವಿಸುವುದರಿಂದ ದೇಹಕ್ಕೆ ಸಾಕಷ್ಟು ಪ್ರೊಬಯೋಟಿಕ್ಸ್ ದೊರಕುತ್ತದೆಯಲ್ಲದೆ ಇದು ಆತಂಕ ನಿವಾರಿಸುವಲ್ಲಿಯೂ ಸಹಕಾರಿ.
ಕಳೆದ ತಿಂಗಳು ಪ್ರಕಟವಾದ ಇನ್ನೊಂದು ಅಧ್ಯಯನದ ಪ್ರಕಾರ ಪ್ರಿಬಯೋಟಿಕ್ಸ್ ಮನುಷ್ಯನಿಗೆ ಉತ್ತಮ ನಿದ್ದೆ ದೊರೆಯುವಂತೆ ಮಾಡುತ್ತದೆಯಲ್ಲದೆ ಒತ್ತಡದ ಅಡ್ಡ ಪರಿಣಾಮಗಳನ್ನೂ ಕಡಿಮೆಗೊಳಿಸುತ್ತದೆ.
ಸಂಶೋಧಕರ ತಂಡವು ಮೂರು ವಾರ ಪ್ರಾಯದ ಗಂಡು ಇಲಿಗಳಿಗೆ ಪ್ರಿಬಯೋಟಿಕ್ಸ್ ಇರುವ ಆಹಾರ ನೀಡಿ ಇತರ ಇಲಿಗಳಿಗೆ ಹೋಲಿಸಿದಾಗ ಅವುಗಳು ಆರಾಮವಾಗಿ ನಿದ್ದೆ ಮಾಡುವುದನ್ನು ಗಮನಿಸಿದ್ದಾರೆ.
ಪ್ರಿಬಯೋಟಿಕ್ಸ್ ನಿಂದ ಸಮೃದ್ಧ ಆಹಾರ ಸೇವನೆಯಿಂದ ಅಲರ್ಜಿಗಳನ್ನೂ ನಿವಾರಿಸಬಹುದಾಗಿದೆ. ಫ್ರಾನ್ಸ್ ದೇಶದಲ್ಲಿ ನಡೆದ ಒಂದು ಅಧ್ಯಯನದಿಂದ ಇದು ತಿಳಿದು ಬಂದಿದೆ.
ತರುವಾಯ ಚಿಕಾಗೋ ವಿಶ್ವವಿದ್ಯಾಲನಿಯದ ವಿಜ್ಞಾನಿಗಳ ಸಂಶೋಧನೆಯೊಂದರಲ್ಲಿ ತಿಳಿದು ಬಂದಂತೆ ದನದ ಹಾಲು ಸೇವನೆಯಿಂದ ಅಲರ್ಜಿಯುಂಟಾಗುವ ಕೆಲ ವಕ್ಕಳಿಗೆ ಪ್ರಿಬಯೋಟಿಕ್ಸ್ ಆಹಾರ ಅನುಕೂಲಕರವಾಗಿದೆ.