ಗೋವಾ ಬೀಚ್‌ನಲ್ಲಿ ಐರಿಷ್ ಯುವತಿಯ ಶವ ಪತ್ತೆ, ಸ್ಥಳೀಯ ರೌಡಿಶೀಟರ್ ಸೆರೆ

ಪಣಜಿ,ಮಾ.15: ದಕ್ಷಿಣ ಗೋವಾದ ಸಮುದ್ರ ತೀರದಲ್ಲಿ 25ರ ಹರೆಯದ ಐರಿಷ್ ಯುವತಿಯೋರ್ವಳ ಶವ ಪತ್ತೆಯಾಗಿದ್ದು, ಈ ಸಂಬಂಧ ಸ್ಥಳೀಯ ರೌಡಿ ಶೀಟರ್‌ನೋರ್ವನನ್ನು ಪೊಲಿಸರು ಬುಧವಾರ ಬಂಧಿಸಿದ್ದಾರೆ.
ದೇವಬಾಗ್ ಗ್ರಾಮದ ಸಮುದ್ರ ಕಿನಾರೆಯ ನಿರ್ಜನ ಸ್ಥಳವೊಂದರಲ್ಲಿ ನಗ್ನಸ್ಥಿತಿ ಯಲ್ಲಿದ್ದ ಯುವತಿಯ ಶವ ಮಂಗಳವಾರ ಪತ್ತೆಯಾಗಿತ್ತು.
ಗ್ರಾಮಸ್ಥರೊಂದಿಗೆ ಹೋಳಿಯಾಡುತ್ತಿದ್ದಾಗ ಈ ಯುವತಿ ಕೊನೆಯ ಬಾರಿ ಕಂಡು ಬಂದಿದ್ದಳು ಎಂದು ಕಾಣಕೋಣ ಡಿವೈಎಸ್‌ಪಿ ಸ್ಯಾಮಿ ಟಾವರೆಸ್ ತಿಳಿಸಿದರು.
ಘಟನೆಗೆ ಸಂಬಂಧಿಸಿದಂತೆ ದೇವಬಾಗ್ ಸಮೀಪದ ಕಾಣಕೋಣದ ರೌಡಿಶೀಟರ್ ವಿಕಾಸ್ ಭಗತ್ ಎಂಬಾತನನ್ನು ಬುಧವಾರ ಬಂಧಿಸಿರುವ ಪೊಲೀಸರು, ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಹತ್ಯೆ ಕೋನದಿಂದ ತನಿಖೆಯನ್ನು ನಡೆಸಲಾಗುತ್ತಿದ್ದು, ಯುವತಿ ಸಾಯುವ ಮುನ್ನ ಆಕೆಯ ಮೇಲೆ ಅತ್ಯಾಚಾರ ನಡೆದಿತ್ತೇ ಎನ್ನುವುದನ್ನು ತಿಳಿಯಲು ಪ್ರಯತ್ನಿಸಲಾಗುತ್ತಿದೆ ಎಂದು ಟಾವರೆಸ್ ಹೇಳಿದರು.
Next Story





