ಸಿದ್ದರಾಮಯ್ಯ ಬಜೆಟ್‌ನಲ್ಲಿ ಯಾರಿಗೆ ಯಾವ ಆಕರ್ಷಕ ಕೊಡುಗೆಗಳು...? ವಿವರಗಳಿಗೆ ಕ್ಲಿಕ್ ಮಾಡಿ
ಟ್ರೆಂಡಿಂಗ್ ಆಗುತ್ತಿದೆ #ಜನಪರಬಜೆಟ್-2017

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಂಗಳೂರಿನಲ್ಲಿ ನಡೆದ ತಮ್ಮ 12ನೇ ಬಜೆಟ್ ಹಲವಾರು ಜನಪರ ಯೋಜನೆಗಳನ್ನು ಘೋಷಿಸಿದ್ದಾರೆ. ಈ ಬಗ್ಗೆ ಜಾಲತಾಣದಲ್ಲಿ "#ಜನಪರಬಜೆಟ್-2017" ಎಂಬ ಹ್ಯಾಶ್ ಟ್ಯಾಗ್ ಸಂಚಲನ ಮೂಡಿಸುತ್ತಿದೆ.
ಬನ್ನಿ ಈ ಸಂಚಲನ ಮೂಡಿಸಿದ ಯೋಜನೆಗಳ ಬಗ್ಗೆ ತಿಳಿಯೋಣ
ಉಚಿತ ಲ್ಯಾಪ್‌ಟಾಪ್ ಕೊಡುಗೆ:

ಸರಕಾರಿ ಮತ್ತು ಅನುದಾನಿತ ವೈದ್ಯಕೀಯ, ಇಂಜಿನಿಯರಿಂಗ್, ಪಾಲಿಟೆಕ್ನಿಕ್ ಮತ್ತು ಪ್ರಥಮದರ್ಜೆ ಕಾಲೇಜುಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡಲಾಗುವುದು ಎಂದು ಗೋಷಿಸಲಾಗಿದೆ. ಈ ಯೋಜನೆಯಲ್ಲಿ 1.5 ಲಕ್ಷ ವಿದ್ಯಾರ್ಥಿಗಳಿಗೆ ಲಾಭವಾಗಲಿದೆ.
ಪ್ರೌಡಶಾಲಾ ವಿದ್ಯಾರ್ಥಿನಿಯರಿಗೆ ಚೂಡಿದಾರ್ ಸಮವಸ್ತ್ರ:

ಬಜೆಟ್‌ನಲ್ಲಿ ವಪ್ರೌಡಶಾಲಾ ವಿದ್ಯಾಥಿಗಳಿಗೆ ಚೂಡಿದಾರ್ ಸಮವಸ್ತ್ರ ನೀಡುವ ಯೋಜೆನೆ ಹಮ್ಮಿಕೊಳ್ಳಲಾಗಿದೆ. ಅದರಂತೆ ಎಲ್ಲ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ನೀಡಲಾಗುವುದು, ಜುಲೈ ತಿಂಗಳಿನಿಂದ ಜಾರಿಗೆ ಬರುವಂತೆ ವಾರದಲ್ಲಿ 5 ದಿನ ಹಾಲು ವಿತರಿಸಲಾಗುವುದು ಎಂದು ಘೋಷಿಸಲಾಗಿದೆ.
"ಮಾತೃಪೂರ್ಣ" ಯೋಜನೆಯಡಿ ಗರ್ಭಿಣಿ/ಬಾಣಂತಿಯರಿಗೆ ಬಿಸಿಯೂಟ:

ರಾಜ್ಯದ ಎಲ್ಲಾ 30 ಜಿಲ್ಲೆಗಳಿಗೂ "ಮಾತೃಪುರ್ಣ" ಯೋಜನೆ ವಿಸ್ತರಣೆ ಮಾಡಲಾಗಿದೆ. ಈ ಬರುವ ಜುಲೈ ತಿಂಗಳಿನಿಂದ ಗರ್ಭಿಣಿ ಮತ್ತು ಬಾಣಂತಿಯರಿಗೆ ಸಿದ್ಧಪಡಿಸಿದ ಬಿಸಿಯೂಟ ಪೂರೈಕೆ ಮಾಡಲಾಗುವುದು. ಇದಕ್ಕಾಗಿ 309 ಕೋಟಿ ರೂ, ಮೀಸಲಿಡಲಾಗಿದೆ.
ಸವಿರುಚಿ ಸಂಚಾರಿ ಕ್ಯಾಂಟೀನ್:

ಕನಾಟಕ ಮಹಿಳಾ ಅಭಿವೃದ್ಧಿ ನಿಗಮದ ಅಡಿಯಲ್ಲಿ 148.78 ಕೋಟಿ ರೂ.ಗಳನ್ನು ಯೋಜನೆಗೆ ಮೀಸಲಿರಿಸಲಾಗಿದೆ. ಇದರ ಅಡಿಯಲ್ಲಿ ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟಗಳ ಮೂಲಕ ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲಿ "ಸವಿರುಚಿ" ಸಂಚಾರಿ ಕ್ಯಾಂಟೀನ್
ಪ್ರಾರಂಭಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ
ಆದಿವಾಸಿ ಸಮುದಾಯದವರಿಗೆ ಸ್ವಯಂ ಉದ್ಯೋಗಾವಕಾಶ:

ಜೇನುಕುರುಬ, ಕೊರಗ, ಸೋಲಿಗ, ಕಾಡುಕುರುಬ, ಎರವ, ಗೌಡಲು, ಹಸಲುರು, ಇರುಳಿಗ ಸಿದ್ಧಿ, ಮಲೆಕುಡಿಯ, ಹಕ್ಕಿ-ಪಿಕ್ಕಿ ಇತ್ಯಾದಿ ಆದಿವಾಸಿ ಸಮುದಾಯದ ಅಭಿವೃದ್ಧಿಗೆ ಮತ್ತು ಸ್ವಯಂ ಉದ್ಯೋಗ ಕಲ್ಪಿಸಲು 200 ಕೋಟಿ. ರೂ ಮೀಸಲಿಡಲಾಗಿದೆ.
ಚಿಂದಿ ಆಯುವವರಿಗೆ ಸ್ಮಾರ್ಟ್ ಕಾರ್ಡ್:

ಹಮಾಲರು, ಬೀದಿಬದಿ ವ್ಯಾಪಾರಿಗಳು, ಮನೆಗೆಲಸದವರು, ಮತ್ತು ಚಿಂದಿ ಆಯುವವರಿಗೆ 10 ಕೋಟಿ. ರೂ ವೆಚ್ಚದಲ್ಲಿ ಸ್ಮಾರ್ಟ್‌ಕಾರ್ಡ್ ಒದಗಿಸುವ ಮೂಲಕ "ಅಪಘಾತ ಪರಿಹಾರ ಯೋಜನೆ" ಹಾಗೂ "ಭವಿಷ್ಯ ನಿಧಿ ಪಿಂಚಣಿ"ಯ ಲಾಭವಾಗಲಿದೆ. ಮತ್ತು ನೋಂದಾಯಿತ ಕಟ್ಟಡ ಕಾರ್ಮಿಕರಿಗೆ "ವಸತಿ ಯೋಜನೆಯೂ ಒಳಗೊಂಡಂತೆ ಸಮಗ್ರ ಭವಿಷ್ಯನಿಧಿಯೊಂದಿಗೆ ಪಿಂಚಣಿ ಕಾರ್ಯಕ್ರಮ ಜಾರಿ ಮಾಡಲಾಗಿದೆ.
ಶೇ.70ರಷ್ಟು ಯುವಜನತೆಗೆ ಉದ್ಯೋಗಾವಕಾಶ:

"ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ" ಯೋಜನೆಯಡಿಯಲ್ಲಿ 2.50 ಲಕ್ಷ ಯುವಜನರಿಗೆ ವೃತ್ತಿಪರ ಕೌಶಲ್ಯ ತರಬೇತಿ ಹಾಗೂ ಶೇ.70ರಷ್ಟು ಯುವಜನತೆಗೆ ಉದ್ಯೋಗ ಒದಗಿಸಲಾಗುವ ಯೋಜನೆ ಘೋಷಣೆಯಾಗಿದೆ.
1,000 ರೂ.ನಲ್ಲಿ ಎರಡು ಗ್ಯಾಸ್ ಒಲೆ:

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿನದಲ್ಲಿ, ಅನಿಲರಹಿತ ಬಡಕುಟುಂಬಗಳಿಗೆ ಉಚಿತವಾಗಿ ಅನಿಲ ಸಂಪರ್ಕ ಒದಗಿಸಲು ಹಾಗೂ ಪಡಿತರ ಸೀಮೆಎಣ್ಣೆ ಮುಕ್ತ ರಾಜ್ಯವನ್ನಾಗಿಸಲು ಎಲ್ಲ ಉಜ್ವಲ ಫಲಾನುಭವಿಗಳಿಗೆ 1,000 ರೂ.ಗಳಲ್ಲಿ ಎರಡು ಬರ್ನರ್‌ಯುಕ್ತ ಗ್ಯಾಸ್ ಒಲೆ ವಿತರಿಸಲಾಗುವುದು.
"ರೈತ ಸಾರಥಿ" ಯೋಜನೆ:

"ರೈತ ಸಾರಥಿ" ಯೋಜನೆಯಡಿಯಲ್ಲಿ ರೈತರಿಗೆ ತರಬೇತಿ ಮತ್ತು ಕಲಿಕಾ ಲೈಸೆನ್ಸ್ ನೀಡಿಕೆ ಹಾಗೂ ರಸ್ತೆ ಸುರಕ್ಷಾ ಕ್ರಮಗಳ ಬಗ್ಗೆ ಅರಿವು ಮೂಡಿಸಲು ಯೋಜೆಯನ್ನು ಹಮ್ಮಿಕೊಳ್ಳಲಾಗಿದೆ.
200 ಜೆನರಿಕ್ ಔಷಧ ಮಳಿಗೆಗಳ ಪ್ರಾರಂಭ:

ರಾಜ್ಯದಲ್ಲಿ ಕಡಿಮೆ ಬೆಲೆಯಲ್ಲಿ ಔಷಧಿಗಳನ್ನು ಒದಗಿಸುವ ನಿಟ್ಟಿನಲ್ಲಿ ಜಾರಿಗೆ ತರಲಾದ "ಜನೌಷದಿ ಔಷಧ ಮಳಿಗೆಗಳು" ಯೋಜನೆಯ ಅಡಿಯಲ್ಲಿ ೨೦೦ ಜೆನರಿಕ್ ಔಷದ ಮಳಿಗೆಗಳ ಪ್ರಾರಂಭ ಮಾಡುವ ಉದ್ದೇಶವಿದೆ.
ಗಲ್ಫ್ ರಾಷ್ಟ್ರಗಳಿಂದ ಮರಳಿರವರಿಗೆ:

ಗಲ್ಫ್ ರಾಷ್ಟ್ರಗಳಲ್ಲಿ ಮೈಮುರಿದು ದುಡಿದರೂ ಆರ್ಥಿಕ ಸಂಕಷ್ಟಕ್ಕೀಡಾಗಿ ಉಪಾಯವಿಲ್ಲದೆ ಮರಳುವ ನಿರುದ್ಯೋಗಿಗಳು ಸ್ವ ಉದ್ಯೋಗ ಮಾಡಲು ರಾಜ್ಯ ಸರಕಾರ ನೆರವು ನೀಡಲಿದೆ. ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೂಲಕ ಜಾರಿಗೊಳಿಸಲಾಗುವ ಈ ಯೋಜನೆ ಜಾರಿಯಾಗಲಿದೆ. ಗಲ್ಫ್‌ನಲ್ಲಿ ದುಡಿದರೂ ಬದುಕಿನ ನೆಲೆ ಕಾಣದ, ಊರಿಗೆ ಬಂದು ನೆಲೆಯೂರಲು ಆಶಿಸುವ ನಿರುದ್ಯೋಗಿಗಳಿಗೆ ಸ್ವಉದ್ಯೋಗ ಮಾಡಲು ಶೇ.3ರ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಈ ಯೋಜನೆಯ ಮೂಲಕ ನೀಡಲಾಗುತ್ತದೆ.







