ಪ್ಲಸ್ ವನ್(ಪಿಯುಸಿ) ವಿದ್ಯಾರ್ಥಿ ಆತ್ಮಹತ್ಯೆ: ಶಾಲಾಡಳಿತದ ವಿರುದ್ಧ ಪ್ರತಿಭಟನೆ
ತಿರುವನಂತಪುರಂ,ಮಾ.15: ಪ್ಲಸ್ ವನ್ ವಿದ್ಯಾರ್ಥಿಆತ್ಮಹತ್ಯೆಗೆ ಶಾಲಾಡಳಿತ ಕಾರಣವೆಂದು ಸಂಬಂಧಿಕರು ಆರೋಪಿಸಿದ್ದಾರೆ. ವರ್ಕಲ ಆಯಿರೂರ್ ಎಂಜಿಎಂ ಸ್ಕೂಲಿನ ಪ್ಲಸ್‌ವನ್ ವಿದ್ಯಾರ್ಥಿ ಮರಕ್ಕಡಮುಕ್ ಅರ್ಜುನ್(17) ಕಳೆದ ದಿನ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ವಿದ್ಯಾರ್ಥಿಯಾಗಿದ್ದಾನೆ.
ಕಳೆದ ಹತ್ತನೆ ತಾರೀಕಿನಂದು ನಡೆದಿದ್ದ ಎಪಿ (ಇನ್ಪಾರ್ಮೇಶನ್ ಪ್ರಾಕ್ಟಿಸ್) ಪರೀಕ್ಷೆಯಲ್ಲಿ ಸ್ಮಾರ್ಟ್‌ವಾಚ್ ಕಟ್ಟಿಕೊಂಡು ಬಂದು ನಕಲು ಹೊಡೆದಿದ್ದಾನೆಂದು ಅರ್ಜುನ್ ವಿರುದ್ಧ ಆರೋಪ ಹೊರಿಸಲಾಗಿತ್ತು. ಇದಕ್ಕಾಗಿ ಮಂಗಳವಾರ ಹೆತ್ತವರನ್ನು ಶಾಲೆಗೆ ಕರೆಯಿಸಿಕೊಂಡು ಅವರ ಮುಂದೆ ವೈಸ್ ಪ್ರಿನ್ಸಿಪಾಲ್ ಅರ್ಜುನ್‌ನಿಗೆ ಎಚ್ಚರಿಕೆ ನೀಡಿದ್ದರು. ಅಲ್ಲಿಂದ ಮನೆಗೆ ಹೋದ ಬಳಿಕ ನಿನ್ನೆ ಸಂಜೆ ನಾಲ್ಕು ಗಂಟೆಗೆ ತಾಯಿ ಹೊರಗೆ ಹೋಗಿದ್ದಾಗ ಅರ್ಜುನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅರ್ಜುನ್ ವಾರ್ಷಿಕ ಪರೀಕ್ಷೆಯಲ್ಲಿ ನಕಲು ಹೊಡೆದಿದ್ದಾನೆಂದು ಶಾಲಾ ಮ್ಯಾನೇಜ್‌ಮೆಂಟ್ ಅಪಮಾನಿಸಿದೆ. ಇದು ವಿದ್ಯಾರ್ಥಿ ಆತ್ಮಹತ್ಯೆ ಮಾಡಲು ಕಾರಣವೆಂದು ಅರ್ಜುನ್‌ನ ಸಂಬಂಧಿಕರು ಶಾಲಾ ಮ್ಯಾನೇಜ್ ಮೆಂಟ್ ವಿರುದ್ಧ ದೂರು ನೀಡಿದ್ದಾರೆ.
ಮ್ಯಾನೇಜ್‌ಮೆಂಟ್ ಸ್ಪೆಶಲ್ ಮೀಟಿಂಗ್ ಕರೆದು ತಂದೆ ತಾಯಿಯನ್ನು ಕರೆಸಿಕೊಂಡುಅವರ ಮುಂದೆ ಅರ್ಜುನ್‌ನ್ನು ಅಪಮಾನಿಸಿದೆ ಎಂದು ಎಂಜಿಎಂ ಸ್ಕೂಲ್ ಅಧಿಕಾರಿಗಳ ವಿರುದ್ಧ ಸಂಬಂಧಿಕರು ಹರಿಹಾಯ್ದಿದ್ದಾರೆ. ತನ್ನಮಗನ ಆತ್ಮಹತ್ಯೆಗೆ ಎಂಜಿಎಂ ಸ್ಕೂಲಿನ ಅಧಿಕಾರಿಗಳೇ ಕಾರಣ ಎಂದು ವರ್ಕಲ ಪೊಲೀಸರಿಗೆ ಅರ್ಜುನ್‌ನ ತಾಯಿ ದೂರು ನೀಡಿದ್ದಾರೆ.
ಪರೀಕ್ಷೆಯಲ್ಲಿ ಕಡಿಮೆ ಅಂಕಪಡೆದ ವಿದ್ಯಾರ್ಥಿಗಳ ತಂದೆ ತಾಯಿಯರನ್ನು ಶಿಕ್ಷಕ ರಕ್ಷಕ ಸಮಿತಿ ಸಭೆಗೆ ಕರೆಯಲಾಗಿತ್ತು. ಅರ್ಜುನ್ ಬೇರೆ ಶಾಲೆಯಲ್ಲಿ ಮೊದಲು ಕಲಿಯುತ್ತಿದ್ದ. ಅವನ ಸಿಲೆಬಸ್ ಬದಲಾದ್ದರಿಂದ ಕಡಿಮೆ ಅಂಕ ಬಂದಿದೆ ಎಂದು ತಾಯಿ ಸ್ಕೂಲ್ ಪ್ರಿನ್ಸಿಪಾಲ್ ಮುಂತಾದವರಿಗೆ ವಿವರಿಸಿದ್ದಾರೆ. ಆದರೆ ಪ್ರಿನ್ಸಿಪಾಲ್ ಶಿಕ್ಷಕ ರಕ್ಷಕ ಸಭೆಯ ನಂತರ ಅರ್ಜುನ್, ಅವನ ತಾಯಿ, ಚಿಕ್ಕಮ್ಮ ವೈಸ್ ಪ್ರಿನ್ಸಿಪಾಲ್‌ರನ್ನು ಭೇಟಿಯಾಗಬೇಕೆಂದು ಹೇಳಿದ್ದರು. ವೈಸ್ ಪ್ರಿನ್ಸಿಪಾಲ್ ಅರ್ಜುನ್‌ಗೆಮಾನಸಿಕ ಕಿರುಕುಳ ನೀಡಿದ್ದಾರೆ ಹೀಯಾಳಿಸಿದ್ದಾರೆ ಎಂದು ಅರ್ಜುನ್‌ನ ಮನೆಯವರು ಈಗ ಆರೋಪಿಸುತ್ತಿದ್ದಾರೆ. ಆವರು ಹೇಳುವ ಪ್ರಕಾರ, ವೈಸ್ ಪ್ರಿನ್ಸಿಪಾಲ್ ಅರ್ಜುನ್ ಪರೀಕ್ಷೆಯಲ್ಲಿ ಕಾಪಿ ಹೊಡೆದದ್ದಕ್ಕೆ ಸಾಕ್ಷ್ಯವಿದೆ ಎಂದಿದ್ದಾರೆ. ಮಾತ್ರವಲ್ಲ ನಿಮ್ಮಮಗನನ್ನು ಡಿಬಾರ್ ಮಾಡುತ್ತೇವೆ. ಪೊಲೀಸ್ ಕೇಸು ಹಾಕುತ್ತೇವೆ ಎಂದು ಬೆದರಿಸಿದ್ದಾರೆ. ಇದಕ್ಕೆ ನೊಂದ ಅರ್ಜುನ್ ನಿನ್ನೆ ತಾಯಿ ಮನೆಯಿಂದ ಹೊರಹೋಗುವುದನ್ನೆ ಕಾದು ಆ ನಂತರ ಆತ್ಮಹತ್ಯೆಮಾಡಿಕೊಂಇಡಿದ್ದಾನೆ ಎಂದು ವರ್ಕಲ ಪೊಲೀಸರಿಗೆ ನೀಡಿದ ದೂರಿನಲ್ಲಿ ಅರ್ಜುನ್ ತಾಯಿ ವಿವರಿಸಿದ್ದಾರೆ.
ಆದರೆ ಅರ್ಜುನ್‌ನ್ನು ನಾವ್ಯಾರೂ ಅಪಮಾನಿಸಿಲ್ಲ, ಬೆದರಿಸಿಯೂ ಇಲ್ಲ ನಕಲು ಹೊಡೆಯಬಾರದೆಂದು ಮಾತ್ರ ಹೇಳಿದ್ದೇವೆ ಎಂದು ಸ್ಕೂಲ್ ಮ್ಯಾನೇಜ್ ಮೆಂಟ್‌ಗೆ ಸಂಬಂಧಿಸಿದ ಅಧಿಕಾರಿಗಳು ಸ್ಪಷ್ಟಣೆ ನೀಡಿದ್ದಾರೆ. ಈಗ ಎಂಜಿಎಂ ಸ್ಕೂಲ್ ನ ವಿರುದ್ಧ ಭಾರೀ ವಿರೋಧ ವ್ಯಕ್ತವಾಗಿದ್ದು ಇಂದು ಸ್ಕೂಲ್‌ನ ಮುಂದೆ ಅರ್ಜುನ್‌ನ ಸಾವಿಗೆ ಕಾರಣರಾದವರನ್ನು ಶಿಕ್ಷಿಸಿ ಎಂದು ವಿವಿಧ ರಾಜಕೀಯ ಪಕ್ಷಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆದಿವೆ. ಪಾಂಬಡಿ ನೆಹರೂ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿ ನಿಗೂಢ ಸಾವನ್ಪ್ಪಿನದ ಜಿಷ್ಣು ಪ್ರಣೋಯ್ ವಿರುದ್ಧ ವೂ ನಕಲು ಹೊಡೆದಿದ್ದಾನೆಂದು ಸುಳ್ಳಾರೋಪ ಹೊರಿಸಲಾಗಿತ್ತು. ನೆಹರೂ ಕಾಲೇಜು ಅಧಿಕಾರಿಗಳ ವಿರುದ್ಧ ತನಿಖೆ ಮುಂದುವರಿಯುತ್ತಿರುವಾಗಲೇ ಅದಕ್ಕೆ ಸಮಾನವಾದ ಅ ಇನ್ನೊಂದು ಘಟನೆ ಕೇರಳದಲ್ಲಿ ನಡೆದಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.