ಕರ್ನಾಟಕ ಬಜೆಟ್-2017: ಈ ಬಾರಿಯೂ ಮಂಗಳೂರಿಗಿಲ್ಲ ಸರಕಾರಿ ಮೆಡಿಕಲ್ ಕಾಲೇಜು!

ಮಂಗಳೂರು, ಮಾ. 15: ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಸಕ್ತ ಸಾಲಿನ ಕರ್ನಾಟಕ ಸರಕಾರದ ಬಜೆಟ್‌ನಲ್ಲಿ ಹಲವು ಯೋಜನೆಗಳು ಘೋಷಣೆಯಾಗಿದ್ದರೂ, ಸರಕಾರಿ ಕಾಲೇಜು ಸ್ಥಾಪನೆಯ ಬೇಡಿಕೆ ಮಾತ್ರ ಈಡೇರಿಲ್ಲ.
ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ರಾಜ್ಯದ ಕೆಲ ಜಿಲ್ಲೆಗಳಿಗೆ ಘೋಷಣೆ ಆಗಿದ್ದರೂ ಮಂಗಳೂರಿಗೆ ಆ ಭಾಗ್ಯ ದೊರಕಿಲ್ಲ. ಖಾಸಗಿ ಆಸ್ಪತ್ರೆಗಳು, ಮೆಡಿಕಲ್ ಕಾಲೇಜುಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಮಂಗಳೂರಿಗೆ ಸರಕಾರಿ ಮೆಡಿಕಲ್ ಕಾಲೇಜಿನ ಬೇಡಿಕೆ ಬಹಳ ಹಿಂದಿನದ್ದಾಗಿದೆ.
ಆದರೆ ಜಿಲ್ಲೆಯವರೇ ಆದ ಹಿಂದಿನ ಆರೋಗ್ಯ ಸಚಿವರಾದ ಯು.ಟಿ.ಖಾದರ್‌ರವರು, ಕಳೆದ ಎರಡು ವರ್ಷಗಳಿಂದಲೂ ಮಂಗಳೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಬಗ್ಗೆ ಉತ್ಸಾಹ ತೋರ್ಪಡಿಸಿದ್ದರು. ಆದರೆ, ಈ ಬಾರಿಯಾದರೂ ಬಜೆಟ್‌ನಲ್ಲಿ ಕಾಲೇಜು ಘೋಷಣೆಯಾಗುವ ನಿರೀಕ್ಷೆ ಹುಸಿಯಾಗಿದೆ.
Next Story





