ಉಡುಪಿ ತಾಲೂಕು ಮೂರು ತುಂಡು !
ಕರ್ನಾಟಕ ಬಜೆಟ್-2017

ಉಡುಪಿ, ಮಾ.15: ಬಜಟ್ ನಲ್ಲಿ ಬೈಂದೂರು, ಬ್ರಹ್ಮಾವರ ಮತ್ತು ಕಾಪುವನ್ನು ತಾಲೂಕನ್ನಾಗಿ ಘೋಷಣೆ ಮಾಡಿದ್ದು ತಾಲೂಕುಗಳ ರಚನೆಯ ಬಹುದಿನಗಳ ಕನಸು ನನಸಾಗಿದೆ.
1997ರಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್, ದಕ್ಷಿಣ ಕನ್ನಡ ಜಿಲ್ಲೆಯಿಂದ ಉಡುಪಿಯನ್ನು ಪ್ರತ್ಯೇಕಿಸಿ ಹೊಸ ಜಿಲ್ಲೆಯಾಗಿ ಘೋಷಿಸಿದಾಗ ಇದು ಉಡುಪಿ, ಕಾರ್ಕಳ ಹಾಗೂ ಕುಂದಾಪುರ ತಾಲೂಕುಗಳನ್ನು ಮಾತ್ರ ಹೊಂದಿದ್ದು, ರಾಜ್ಯದ ಅತೀ ಚಿಕ್ಕ ಜಿಲ್ಲೆ ಎನಿಸಿತ್ತು.
ಇದೀಗ ಉಡುಪಿ ತಾಲೂಕು ಒಂದನ್ನೇ ಮೂರು ತುಂಡುಗಳಾಗಿ ಮಾಡಿ ಉಡುಪಿ, ಬ್ರಹ್ಮಾವರ ಹಾಗೂ ಕಾಪು ತಾಲೂಕುಗಳನ್ನಾಗಿ ಘೋಷಿಸಲಾಗಿದೆ. ಅತ್ತ ಕುಂದಾಪುರ ತಾಲೂಕು ಕುಂದಾಪುರ ಹಾಗೂ ಬೈಂದೂರು ತಾಲೂಕಾಗಿ ವಿಭಜನೆಗೊಂಡಿದೆ.
ಜನಪ್ರತಿನಿಧಿಗಳ ನಿರಾಸಕ್ತಿಯಿಂದಾಗಿ ವಿಧಾನಸಭಾ ಕ್ಷೇತ್ರವಾಗಿ ಉಳಿಯುವ ಎಲ್ಲಾ ಅರ್ಹತೆಯನ್ನು ಹೊಂದಿದ್ದ ಬ್ರಹ್ಮಾವರ ಅದನ್ನು ಕಳೆದುಕೊಂಡಿತ್ತು. ಆದರೆ ಕೊನೆಗೂ ಅದು ತಾಲೂಕಾಗಿ ಪರಿವರ್ತನೆಗೊಂಡಿದೆ.
Next Story





