ಮಂಗಳೂರು ಹಜ್ ಭವನಕ್ಕೆ ಬಜೆಟ್‌ನಲ್ಲಿ ಅನುದಾನ ಸ್ವಾಗತಾರ್ಹ: ಕೆ.ಎಂ. ಅಬೂಬಕರ್ ಸಿದ್ದೀಖ್
.jpeg)
ಮಂಗಳೂರು, ಮಾ.15: ಕರ್ನಾಟಕ ಸರಕಾರದ ನೂತನ ಬಜೆಟ್‌ನಲ್ಲಿ ಮಂಗಳೂರು ಹಜ್‌ಭವನ ನಿರ್ಮಾಣಕ್ಕೆ 10 ಕೋಟಿ ರೂ. ಮೀಸಲಿಟ್ಟಿರುವ ಸಿದ್ಧರಾಮಯ್ಯರವರ ಕ್ರಮವನ್ನು ರಾಜ್ಯ ಹಜ್ ಸಮಿತಿ ಸದಸ್ಯ ಕೆ.ಎಂ. ಅಬೂಬಕರ್ ಸಿದ್ದೀಖ್ ಮೋಂಟುಗೋಳಿ ಸ್ವಾಗತಿಸಿದ್ದಾರೆ.
ಕರ್ನಾಟಕದಲ್ಲಿ ಬೆಂಗಳೂರನ್ನು ಬಿಟ್ಟರೆ ಹಜ್ ಯಾತ್ರಿಕರ ಆಗಮನ ನಿರ್ಗಮನ ಕೇಂದ್ರ ಮಂಗಳೂರು ಆಗಿದ್ದು. ಈ ತನಕ ಇವರಿಗೆ ಶಾಶ್ವತ ವ್ಯವಸ್ಥೆ ಇರಲಿಲ್ಲ. ಜಿಲ್ಲಾಡಳಿತವು ಈಗಾಗಲೇ ಬಜ್ಪೆ ಬಳಿ ಕೆಂಜಾರು ಗ್ರಾಮದಲ್ಲಿ 1.96 ಎಕರೆ ನಿವೇಶನ ಗುರುತಿಸಿದ್ದರೂ ಕಟ್ಟಡ ನಿರ್ಮಾಣವಾಘಿರಲಿಲ್ಲ. ಇದೀಗ ಹಜ್ ಸಚಿವರೂ, ಹಜ್ ಸಮಿತಿ ಅಧ್ಯಕ್ಷರೂ ಆದ ರೋಶನ್ ಬೇಗ್‌ರವರ ಶಿಫಾರಸಿನ ಮೇರೆಗೆ ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣಕ್ಕೆ ಸರಕಾರ10 ಕೋಟಿ ರೂ. ಮೀಸಲಿಟ್ಟಿದೆ. ಕಟ್ಟಡದ ಕಾಮಗಾರಿ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ಮುಂದಿನ ಹಜ್ ಸಮಿತಿ ಸಭೆಯನ್ನು ಮಂಗಳೂರಿನಲ್ಲೇ ನಡೆಸಲು ತೀರ್ಮಾನಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





