ಹಲ್ಲೆ ಆರೋಪಿಗೆ ಶಿಕ್ಷೆ
ಕಾರವಾರ, ಮಾ.15: ಕತ್ತಿಯಿಂದ ಹಲ್ಲೆ ಹಾಗೂ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಜಿಲ್ಲಾ ನ್ಯಾಯಾಲಯ ಆರೋಪಿಗೆ ಜೈಲು ವಾಸ ಸೇರಿದಂತೆ ಎಂಟು ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ತಾಲೂಕಿನ ಕಡವಾಡದ ನಿವಾಸಿ ಪ್ರಭಾ ಬಸವರಾಜ ನಾಯ್ಕ ಎಂಬವರಿಗೆ ಕತ್ತಿಯಿಂದ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಕುರಿತು ಕಳೆದ 2014ರ ನವೆಂಬರ್ 23ರಂದು ಗ್ರಾಮೀಣ ಠಾಣೆಯಲ್ಲಿ ಆರೋಪಿ ಪ್ರಕಾಶ ನಾಯ್ಕ ಎಂಬವರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ ಪ್ರಭಾ ಅವರ ಪರ ವಕೀಲ ಮಾದೇವ ಗಡದ್ ಅವರು ವಾದ ಮಂಡಿಸಿದ್ದರು. ಮಂಗಳವಾರ ತೀರ್ಪು ನೀಡಿರುವ ನ್ಯಾಯಾಧೀಶ ಶಿವಕುಮಾರ್ ಬಿ ಅವರು ಆರೋಪಿಗೆ ಐಪಿಸಿ ಸೆಕ್ಷನ್ ನಂಬರ್ 326ರ ಪ್ರಕಾರ 2 ವರ್ಷ ಜೈಲು ಹಾಗೂ ಎಂಟು ಸಾವಿರು ರೂ. ದಂಡ ವಿಧಿಸಿ ಆದೇಶ ನೀಡಿದೆ.
Next Story





