ಹುಂಡಿ ಕಳವು: ಯುವಕನ ಬಂಧನ
ಕಾರವಾರ, ಮಾ.15: ತಾಲೂಕಿನ ವಿವಿಧ ದೇವಾಲಯಗಳಲ್ಲಿ ಹುಂಡಿ ಕಳ್ಳತನ ಮಾಡಿ ತಪ್ಪಿಸಿಕೊಂಡಿದ್ದ ಕುಮಾರ್ ಈರಪ್ಪ ಕೊರ್ಚರ್(31) ಎಂಬ ಯುವಕನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈತ ಮೂಲತ ಚಿತ್ರದುರ್ಗ ಜಿಲ್ಲೆಯವನಾಗಿದ್ದು, ತಾಲೂಕಿನ ಗುನಗಿವಾಡಾದಲ್ಲಿ ವಾಸಿಸುತ್ತಿದ್ದ. ಕಾರವಾರ ತಾಲೂಕಿನ ಕದ್ರಾ ಎರಡು ಹಾಗೂ ಚಿತ್ತಾಕುಲದಲ್ಲಿ ಮೂರು ದೇವಾಲಯಗಳ ಹುಂಡಿಯನ್ನು ಕಳ್ಳತನ ಮಾಡಿರುವ ಆರೋಪದ ಮೇಲೆ ಕದ್ರಾ ಪೊಲೀಸರು ಮಂಗಳವಾರ ನ್ಯಾಯಾಲಯದಿಂದ ಹೆಚ್ಚಿನ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ಪಡೆದಿದ್ದಾರೆ.
ಈತನ ಸಹೋದರ ರವಿಕುಮಾರ ಕಳ್ಳತನದಲ್ಲಿ ಭಾಗಿಯಾಗಿದ್ದ ಎನ್ನಲಾಗಿದ್ದು, ಕುಮಾರ್ ಬಂಧನದ ನಂತರ ತಪ್ಪಿಸಿಕೊಂಡಿದ್ದಾನೆ. ಕದ್ರಾ ಪೊಲೀಸರು ರವಿಕುಮಾರ ಪತ್ತೆಗೆ ಜಾಲ ಬೀಸಿದ್ದಾರೆ.
Next Story





